ಕೆಜಿಎಫ್  ಕ್ಯಾಸಂಬಳ್ಳಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ಹಾಗೂ ಶೋಭ ಯಾತ್ರೆ ಅದ್ದೂರಿಯಾಗಿ ನಡೆಯಿತು

Feb 5, 2026 - 13:35
 0  1
ಕೆಜಿಎಫ್  ಕ್ಯಾಸಂಬಳ್ಳಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವ ಹಾಗೂ ಶೋಭ ಯಾತ್ರೆ ಅದ್ದೂರಿಯಾಗಿ ನಡೆಯಿತು

      ಕೆಜಿಎಫ್: ಕ್ಯಾಸಂಬಳ್ಳಿ ಅರಳುಕುಂಟೆ ಗ್ರಾಮದಿಂದ ಪ್ರಾರಂಭಗೊಂಡ ಶೋಭಾ ಯಾತ್ರೆ ಸಾವಿರಾರು ಹಿಂದೂ ಕಾರ್ಯಕರ್ತರು ಭಗದ್ವಜವನ್ನು ಹಿಡಿದು. ಶ್ರೀ ಭಾರತ್ ಮಾತೆಯ ಬೃಹತ್ ಗಾತ್ರದ ಪಲ್ಲಕ್ಕಿಯ ಮೆರವಣಿಗೆ ಮೂಲಕ ಮಹಿಳೆಯರಿಂದ ಕಳಶಗಳನ್ನು ಹಿಡಿದು ಹಿಂದೂ ಪರ ಘೋಷಣೆಗಳನ್ನು ಕೂಗಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದರು.

  ನಮ್ಮ ಭಾರತ ದೇಶದ ಸನಾತನ ಧರ್ಮವನ್ನು ಎಂದು ಅಳಿಸಲಾಗುವುದಿಲ್ಲ. ಯಾರು ಏನೇ ಕುತಂತ್ರ ಮಾಡಿದರು ಇದು ಸಾಧ್ಯವಿಲ್ಲ. ಈ ನಮ್ಮ ಸನಾತನ ಧರ್ಮವನ್ನು ನಾವು ಉಳಿಸಲು ಈಗಿನ ಯುವಕರು ಮುಂದೆ ಬರಬೇಕು ಎಂದು ಮಹಾಂತೇಶ್ ಸ್ವಾಮಿಜಿಗಳು ಕರೆ ನೀಡಿದರು.

ಕೆಜಿಎಫ್ ಕ್ಯಾಸಂಬಳ್ಳಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವವನ್ನು ಉದ್ಘಾಟಿಸಿ ಮಾತನಾಡಿ. ವಿಶ್ವದಲ್ಲಿ ಭಾರತ ಒಂದೇ ಹಿಂದೂ ರಾಷ್ಟ್ರವಾಗಿ ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ ರೂಡಿ ಸಂಪ್ರದಾಯ ಆಚಾರ ವಿಚಾರಗಳು ಬೇರೆಯಾಗಿದ್ದರು ಎಲ್ಲರೂ ಒಟ್ಟಾಗಿ ಸೇರಿದ್ದೇವೆ ಹಿಂದುತ್ವವನ್ನು ಬದಲಾಯಿಸುವವರಿಗೆ ಸೂಕ್ತ ಅರಿವು ಮೂಡಿಸಬೇಕಾಗಿದೆ ಎಂದರು. 

ಹಿಂದೂ ಧರ್ಮದ ಪ್ರಚಾರಕರು ಜಗದೀಶ್ ಮಾತನಾಡಿ. ನಮ್ಮ ಭಾರತ ದೇಶದಲ್ಲಿ ವಿದೇಶಗರು ಬಿಟ್ಟಿರುವ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದು, ಅದನ್ನು ನಾವು ಮೊದಲು ತಿರಸ್ಕರಿಸಬೇಕು. ನಾವು ಸಂಪ್ರದಾಯಸ್ಥರಾಗಿ ನಮ್ಮ ಸಂಸ್ಕೃತರಾಗಿ. ನಮ್ಮ ದೇಶದ ಹಬ್ಬಗಳನ್ನು. ಆಚರಿಸಬೇಕು. 

ದೇಶಿಯ ಉತ್ಪನ್ನಗಳನ್ನು ಬಳಸಬೇಕು. ವಿದೇಶಿ ಉತ್ಪನ್ನವನ್ನು ನಿಷೇಧಿಸಬೇಕು.  

ಈಗ ನಾವು ಕುಡಿಯುತ್ತಿರುವುದು ಕಲಬೆರಿಕೆ ಹಾಲು ಅದರಲ್ಲಿ ವಿಷ ಇದೆ. ಸಾಂಪ್ರದಾಯಿಕ ಎಮ್ಮೆ ಹಾಲು ನಾಟಿ ಹಸು ಹಾಲು ಇದನ್ನು ನಾವು ಮರೆತಿದ್ದೇವೆ. 
ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಔಷಧಿ ಬಳಸುವ ಪದಾರ್ಥಗಳನ್ನು ಸೇವಿಸುತ್ತೇವೆ ಇದಕ್ಕೆ ಕಡಿವಾಣ ಹಾಕಬೇಕು.

ದೇಶಿಯವಾಗಿ ನಮ್ಮ ನೆಲದಲ್ಲಿ ಸವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು.

ಈಗಿನ ಮಕ್ಕಳಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅರಿವು ಮೂಡಿಸಬೇಕು. ದುರಾದೃಢವಶ್ ನಮ್ಮ ಶಾಲೆಗಳಲ್ಲಿ ರಾಮಾಯಣ ಮಹಾಭಾರತ ಬಗ್ಗೆ ಅರಿವು ಮೂಡಿಸಲು ಸಾಧ್ಯವಿಲ್ಲ. ಆದ್ದರಿಂದ ನಾವು ಮಕ್ಕಳಿಗೆ ಧರ್ಮದ ಬಗ್ಗೆ ಹಾಗೂ ಸಂಸ್ಕಾರದ ಬಗ್ಗೆ ಚಿಕ್ಕಂದಿನಿಂದಲೇ ತಿಳಿ ಹೇಳಬೇಕು. 
ಮನೆಯಲ್ಲಿ ಮಹಿಳೆಯರು ಕುಟುಂಬದ ಸಂಪ್ರದಾಯವನ್ನು ಮರೆತು ಮನೆಹಾಳು ಮಾಡುವ ಧಾರವಾಹಿಗಳನ್ನು ನೋಡುತ್ತಾರೆ ಅದನ್ನು ಬಿಡಬೇಕು. 
ಸಂಜೆ ಆದರೆ ಮನೆಯಲ್ಲಿ ಪೂಜೆ ಪುನಸ್ಕಾರ ಭಜನೆ ಕೀರ್ತನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. 

ವಿಶ್ವಕ್ಕೆ ನಮ್ಮ ದೇಶ ಯೋಗವನ್ನು ನೀಡಿದೆ. ಇದನ್ನು ವಿದೇಶಿಗರು ಅಳವಡಿಸಿಕೊಳ್ಳುತ್ತಿದ್ದಾರೆ ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಎಂದರು. 

ಡಾ. ನಾಗಪ್ಪ. ಮಾತನಾಡಿ ನಮ್ಮ ಸನಾತನ ಧರ್ಮವನ್ನು ಉಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ನಮ್ಮ ಭಾರತದ ದೇಶದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಯು ಹಿಂದೂ ಧರ್ಮವನ್ನು ಒಪ್ಪಲೇಬೇಕು. ನಾವೆಲ್ಲ ಹಿಂದೂಗಳೇ ಜಾತಿಯನ್ನು ಬದಗಿಟ್ಟು ಧರ್ಮವನ್ನು ರಕ್ಷಣೆ ಮಾಡಲು ಮುಂದೆ ಬನ್ನಿ ಎಂದು ಯುವಕರಿಗೆ ಕರೆ ನೀಡಿದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರು. ಶ್ರೀಮತಿ ಗೀತಾ ವಿವೇಕಾನಂದ ಮಾತನಾಡಿ. ಈಗಿನ ಯುವತಿಯರು. ಹಾಗೂ ಯುವಕರು ಹಿಂದೂ ಸಂಪ್ರದಾಯದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಹಿಂದೂ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಈ ಬೃಹತ್ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು ಡಿವೈಎಸ್ಪಿ. ಲಕ್ಷ್ಮಯ್ಯ. ಸರ್ಕಲ್ ಇನ್ಸ್ಪೆಕ್ಟರ್ ಮಾರ್ಕೊಂಡೊಯ್ಯ. ನವೀನ್ ರೆಡ್ಡಿ ಇದ್ದರು.
ಕಾರ್ಯಕ್ರಮದ ಪ್ರಮುಖ ಆಯೋಜಕರಾದ. ಮುನಿರತ್ನಂ ನಾಯ್ಡು. ಜೈಪ್ರಕಾಶ್ ನಾಯ್ಡು. ನವೀನ್ ರಾಮ್. ಮಾಜಿ ಸಂಸದ. ಎಸ್ ಮುನಿಸ್ವಾಮಿ. ಮಾಜಿ ಶಾಸಕ ವೈ.  ಸಂಪಂಗಿ. ಸಮಾಜ ಸೇವಕರು ವಿ. ಮೋಹನ್ ಕೃಷ್ಣ. ಕಮಲ್ ನಾಥ್. ರವಿ ರೆಡ್ಡಿ. ವಿ .ಪ್ರಸನ್ನ ರೆಡ್ಡಿ. ದಾಮೋದರ್ ರೆಡ್ಡಿ. ಇನ್ನು ಹಲವಾರು ಮುಖಂಡರು ಭಾಗವಹಿಸಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456