ಕೆಜಿಎಫ್ ನಲ್ಲಿ ಎ ಆರ್ ಟಿ ಓ ನೂತನ ಕಚೇರಿ ಕಟ್ಟಡ ಲೋಕಾರ್ಪಣೆಗೊಳಿಸಿದ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Aug 29, 2025 - 14:02
 0  43
ಕೆಜಿಎಫ್ ನಲ್ಲಿ ಎ ಆರ್ ಟಿ ಓ ನೂತನ ಕಚೇರಿ ಕಟ್ಟಡ ಲೋಕಾರ್ಪಣೆಗೊಳಿಸಿದ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಕೆಜಿಎಫ್: ಬಂಗಾರದ ಗಣಿ ಗ್ರಾಮದ ಸರ್ವೆ ನಂಬರ್ ಎರಡರಲ್ಲಿ ಐದು ಎಕರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕೆಎ 08 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಕಟ್ಟಡವನ್ನು ಹಾಗೂ ಸ್ವಯಂ ಚಾಲಿತ ವಾಹನ ಚಾಲನ ಪರೀಕ್ಷಾ ಪತ ವನ್ನು ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರು ಉದ್ಘಾಟಿಸಿ ಮಾತನಾಡಿದರು ಸದರಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಕಟ್ಟಡಕ್ಕೆ ಹತ್ತು ಕೋಟಿ ವೆಚ್ಚವಾಗಿದ್ದು ಇದು ಕಾಂಗ್ರೆಸ್ ಸರ್ಕಾರದ ಕೆಜಿಎಫ್ ಶಾಸಕಿ ಶ್ರೀ ರೂಪಕಾಲ ಶಶಿಧರ್ ರವರ ಸಾಧನೆ ಎಂದು ವರ್ಣಿಸಿದರು ಈ ಸಮಯದಲ್ಲಿ ಬಂಗಾರಪೇಟೆ ಶಾಸಕ ಎಸ್ ನಾರಾಯಣಸ್ವಾಮಿ ರವರು ಕೋರಿಕೆಯಂತೆ ಬಂಗಾರಪೇಟೆಯಲ್ಲಿ ಹೊಸದಾಗಿ ಬಸ್ ಡಿಪೋ ನಿರ್ಮಾಣಕ್ಕೆ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ರವರ ಬೇಡಿಕೆಯಂತೆ ಕೆಜಿಎಫ್ ಬಸ್ ಡಿಪೋಗೆ ಹೆಚ್ಚಿನ ಹೊಸ ಬಸ್ಸುಗಳನ್ನು ನೀಡುವುದಾಗಿ.

 ಸಚಿವರಾದ ಶ್ರೀ ರಾಮುಲಿಂಗಾರೆಡ್ಡಿ ರವರು ಆಶ್ವಾಸನೆ ನೀಡಿದರು

ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ರವರು ಮಾತನಾಡಿ ನಾನು ಸಚಿವರಾಗಿದ್ದಾಗ ಕಡಪದಿಂದ ಮುಳಬಾಗಿಲು ಕೋಲಾರ ಬೆಂಗಳೂರು ಮಾರ್ಗ ರೈಲು ದಾರಿಗೆ ಬಂಗಾರದ ಗಣಿ ಗ್ರಾಮದ ಸುಮಾರು 12 ಸಾವಿರ ಎಕರೆ ಕೈಗಾರಿಕೆಗಾಗಿ ಶ್ರೀನಿವಾಸಪುರ ತಾಲೂಕಿನಲ್ಲಿ 12,000 ಎಕರೆ ಜಮೀನು ರೈಲ್ವೆ ಕೋಚ್ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿತ್ತು ಆದರೆ ಕೈ ಗೂಡಲಿಲ್ಲ ಈಗ ಕೆಜಿಎಫ್ ನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ನನ್ನ ಮಗಳಾದ ಶಾಸಕಿ ಶ್ರೀ ರೂಪಕಲಾ ಶಶಿಧರ್ ರವರು ಸತತ ಪ್ರಯತ್ನ ಮಾಡುತ್ತಿದ್ದು ಅತಿ ಶೀಘ್ರದಲ್ಲೇ ಕೈಗಾರಿಕೆಗಳನ್ನು ಸ್ಥಾಪನೆಯಾಗಿ ಕೆಜೆಪಿ ನ ಸಾರ್ವಜನಿಕರಿಗೆ ಉದ್ಯೋಗಗಳು ಲಭಿಸಲಿದೆ ಮತ್ತು ಬೆಂಗಳೂರು ಗ್ರಾಮಾಂತರ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 18 ಟಿಎಂಸಿ ಕುಡಿಯುವ ನೀರು ಅತಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರದಲ್ಲಿ ಬರಲಿದೆ ಎಂದು ಹೇಳಿದರು.

ಬಂಗಾರಪೇಟೆ ಶಾಸಕ ಎಸ್ ನಾರಾಯಣಸ್ವಾಮಿ ಕೆ ಜಿ ಎಫ್ ಶಾಸಕಿ ಶ್ರೀ ರೂಪಕಾಲ ಶಶಿಧರ್ ರವರು ಜಂಟಿಯಾಗಿ ಮಾತನಾಡಿ ಬಂಗಾರ ಬಂಗಾರದ ಗಣಿ ಗ್ರಾಮದ ಸರ್ವೇ ನಂಬರ್ ಎರಡರಲ್ಲಿ ಮೀಸಲಿರುವ 967 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಮತ್ತು 292 ಎಕರೆ ಪ್ರದೇಶದಲ್ಲಿ ಟೌನ್ಶಿಪ್ ನಿರ್ಮಾಣ ಮಾಡಿ ಕೆಜಿಎಫ್ ಮತ್ತು ಬಂಗಾರಪೇಟೆಯ 25000 ಸಾರ್ವಜನಿಕರಿಗೆ ಉದ್ಯೋಗಗಳನ್ನು ಶಪಥ ಮಾಡಿದರು.

ಈ ಸಮಯದಲ್ಲಿ ಮಾಜಿ ಶಾಸಕರಾದ ಕೆಎಂ ನಾರಾಯಣಸ್ವಾಮಿ ಮಾಜಿ ಸದಸ್ಯ ಮು ಲಕ್ಷ್ಮೀನಾರಾಯಣ್ ಕೆಜಿಎಫ್ ಸಿಎಂಸಿ ಅಧ್ಯಕ್ಷರು ಶ್ರೀಮತಿ ಇಂದಿರಾಗಾಂಧಿ ದಯಾಶಂಕರ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷರು ಶ್ರೀ ರಾಧಾಕೃಷ್ಣ ರೆಡ್ಡಿ. ಶ್ರೀ ಮಲ್ಲಿಕಾರ್ಜುನ ಕೋಲಾರ ಜಿಲ್ಲಾಧಿಕಾರಿ ಡಾ. ಎಂ ಆರ್. ರವಿ, ತಹಶೀಲ್ದಾರ್ ಶ್ರೀ ಭರತ್ ಹೆಚ್ ಜಿ. ನಗರಸಭೆ ಸದಸ್ಯರು ಮಾಣಿಕ್ಯ0 ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456