ಕೆಜಿಎಫ್ ಶ್ರೀ ಪ್ರಸನ್ನ ಬಾಲ ಸೋಮೇಶ್ವರ ದೇವಾಲಯದಲ್ಲಿ ಚಂಡಿಕಾ ಯಾಗ ಪೂಜೆ

Feb 11, 2026 - 11:39
 0  19
ಕೆಜಿಎಫ್ ಶ್ರೀ ಪ್ರಸನ್ನ ಬಾಲ ಸೋಮೇಶ್ವರ ದೇವಾಲಯದಲ್ಲಿ ಚಂಡಿಕಾ ಯಾಗ ಪೂಜೆ

      ಕೆಜಿಎಫ್: ನಗರದ  ಉರಿಗಾಂ ಪೇಟೆ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಬಾಲ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಉತ್ತಮ ಮಳೆ ಬೆಳೆ ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರಬೇಕು ಎಂದು ಪ್ರತಿ ವರ್ಷದಂತೆ ಈ ವರ್ಷ ಚಂಡಿಕಾ ಯಾಗ ಪೂಜಾ ಕಾರ್ಯಕ್ರಮ ನಡೆಯಿತು. 

ಪ್ರಧಾನ ಅರ್ಚಕದ ಮಂಜುನಾಥ ದೀಕ್ಷಿತ್ ಮಾತನಾಡಿ ಭೂಮಿ ಮೇಲೆ ಇರೋ ಎಲ್ಲ ಜೀವಿಗಳು ಒಲಿತಾಗಬೇಕೆಂದು. ದೇವರ ಸಂಕಲ್ಪ ಮಾಡಿಕೊಳ್ಳುವದಕ್ಕೆ ಈ ಚಂಡಿಕಾ ಯಾಗ ಮಾಡುವುದು. ಇಂತಹ ಪೂಜೆಗಳಲ್ಲಿ ಪ್ರತಿಯೊಬ್ಬ ಭಕ್ತಾದಿಗಳು ಭಾಗವಹಿಸಿ ನಿಮ್ಮ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿಕೊಂಡು ತಮ್ಮ ಕೋರಿಕೆಗಳನ್ನು ನೆರವೇರಿಸಿಕೊಳ್ಳಬೇಕು ಎಂದು ತಿಳಿಸಿದರು.

ಈಗಿನ ಹೈಟೆಕ್ ಜೀವನದಲ್ಲಿ ನಾವು  ಕೆಲಸದ ಒತ್ತಡದಲ್ಲಿ ಇರುತ್ತೇವೆ ಇದರಿಂದ ಹಲವಾರು ಸಮಸ್ಯೆ ಎದುರಾಗುತ್ತದೆ . ಈ ನಿಟ್ಟಿನಲ್ಲಿ ನಾವು ಅಧ್ಯಾತ್ಮಿಕ ಜೀವನವನ್ನು ಅನ್ವಯಿಸಿಕೊಳ್ಳಬೇಕು. ದೇವಾಲಯದಲ್ಲಿ ಕುಟುಂಬ ಸಮೇತರಾಗಿ ಪೂಜೆ ಕಾರ್ಯಕ್ರಮಗಳ ಭಾಗವಹಿಸಬೇಕು. ಆಗ ನಾವು ಒತ್ತಡ ಮುಕ್ತರಾಗಿ ಜೀವನ ನಡೆಸಲು ಸಾಧ್ಯ.

ಈಗಿನ ಮಕ್ಕಳು ಅಧ್ಯಾತ್ಮಿಕ ಕಡೆ ಗಮನ ಹರಿಸದೆ ಮೊಬೈಲ್ ಗೀಲು ಬಿದ್ದಿದ್ದಾರೆ ಇದರಿಂದ ಹೊರ ಬರಬೇಕು. ಮಕ್ಕಳಲ್ಲಿ ದೇವರ ಭಕ್ತಿಯ ಬಗ್ಗೆ ಅರಿವು ಮೂಡಿಸಬೇಕು. ಆಗ ಓದುವ ಆಸಕ್ತಿ ಬೆಳೆಯುತ್ತದೆ ಎಂದು ಭಕ್ತಾದಿಗಳಿಗೆ ಕಿವಿ ಮಾತು ಹೇಳಿದರು. 
ಚಂಡಿಕಾ ಯಾಗ ಪೂಜೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿರು ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿ ದೇವರ ಕೃಪೆಗೆ ಪಾತ್ರರಾದರು. ಪೂಜಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕಿ ರೂಪಕಲಾ ಶಶಿಧರ್ ಭಾಗವಹಿಸಿ ದೇವರ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಈಗಾಗಲೇ ಯಾಗ ಶಾಲೆ ಮಂಟಪಕ್ಕೆ 15 ಲಕ್ಷ ರುಪಾಯಿ ನೀಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456