ಕೆಜಿಎಫ್ ಸರ್ಕಾರಿ ಆಸ್ಪತ್ರೆಯ ವೈದ್ಯನ ನಿರ್ಲಕ್ಷ, ಪ್ರತಿಭಟನೆ
ಕೆಜಿಎಫ್: ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಡಿಎಸ್. ಡಾ. ಸುರೇಶ್ ಕುಮಾರ್. ಅವರ ಹತ್ತಿರ ಜಗದೀಶ್ ಎಂಬ 12 ವರ್ಷದ ಹುಡುಗನಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಅವರ ಎಡಗಟ್ಟಿನಿಂದ ಹುಡುಗನಿಗೆ ಕೈ ತೆಗೆಯಲಾಗಿದೆ. ಇದನ್ನು ಪೋಷಕರು ಪ್ರಶ್ನಿಸಿದರೆ. ನಿಮ್ಮ ಕೈಯಲ್ಲಿ ಏನಾಗುತ್ತೆ ಮಾಡಿಕೊಳ್ಳಿ ಉಡಾಫೆ ಉತ್ತರ ನೀಡುತ್ತಾರೆ ಎಂದು. ದಲಿತ ಸಂಘದ ಮುಖಂಡ ನಾಸ್ತಿ ಕ್. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು. ಕೆಜಿಎಫ್ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ದಲಿತ ಪರ ಸಂಘಟನೆಗಳಿಂದ ಧರಣಿ ಪ್ರತಿಭಟನೆ ನಡೆಸಿ ಮಾತನಾಡಿದರು. ಡಿಎಸ್ ಡಾ. ಸುರೇಶ್ ರವರು ಮತ್ತು ಅವರ ಸಹಚಾರರು. ಹಲವಾರು ರೋಗಿಗಳ ಹತ್ತಿರ ಹಣವನ್ನು ತಿನ್ನುವ ಮೂಲಕ ನನ್ನ ಸಂಬಳಕ್ಕಿಂತ ಹೆಚ್ಚಾಗಿ ದುಡಿದುಕೊಳ್ಳುತ್ತಾರೆ. ಬಡವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ದುಡ್ಡಿದ್ದರೆ ಚಿಕಿತ್ಸೆ ಇಲ್ಲಾಂದ್ರೆ ಇಲ್ಲ. ಇದು ಯಾವ ನ್ಯಾಯ. ಅಧಿಕಾರಿಗಳ ವಿರುದ್ಧ ಜನಪ್ರಿಯ ಶಾಸಕರು ರೂಪಕಲಾ ಶಶಿಧರ್. ಸೂಕ್ತ ಕ್ರಮ ಕೈಗೊಳ್ಳಬೇಕು. ಜಗದೀಶ ಹುಡುಗನಿಗೆ ಸರ್ಕಾರದಿಂದ ಒಂದು ಕೋಟಿ ಪರಿಹಾರ ಅದೇ ರೀತಿಯಾಗಿ ಮಗುವಿನ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಬರಿಸಬೇಕು. ವಿದ್ಯಾಭ್ಯಾಸದ ನಂತರ ಸರ್ಕಾರಿ ಕೆಲಸ ಕೊಡಿಸಬೇಕು. ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ಅನ್ವರ್ಸನ್. ಮಾತನಾಡಿ. ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಭ್ರಷ್ಟಾಚಾರ ನಡೆಯುತ್ತಿದೆ. ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡುತ್ತಿಲ್ಲ. ಜಗದೀಶ್ ಎನ್ನುವ ಹುಡುಗನ ಪರಿಸ್ಥಿತಿ. ಇದಕ್ಕಿನ ಉದಾರಣೆ ಏನು ಬೇಕು. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಹೋರಾಟಕ್ಕೆ ಕೊನೆಯಾಗುವುದಿಲ್ಲ. ಹಂತ ಹಂತವಾಗಿ ಮೇಲಾಧಿಕಾರಿಗಳ ಹತ್ತಿರ ಹೋಗಿ ಪ್ರತಿಭಟನೆ ಮಾಡುತ್ತೇವೆ. ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ. ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
