ಕ್ರೀಡೆ ಆರೋಗ್ಯಕ್ಕೆ ಉತ್ತೇಜನ-ಧಾತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಪ್ರಶಾಂತ್ ಕುಮಾರ್
ಬಾಗೇಪಲ್ಲಿ : ಕ್ರೀಡೆಗಳಲ್ಲಿ ಸೋಲು ಗೆಲುವು
ಮುಖ್ಯವಲ್ಲ ಭಾಗವಹಿಸುವುದು ಬಹಳ ಮುಖ್ಯ ಎಂದು ಧಾತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಪ್ರಶಾಂತ್ ಕುಮಾರ್ ತಿಳಿಸಿದರು.
ಪಟ್ಟಣದ ಹೊರ ವಲಯದ ಬಿಸಿಸಿ ಮೈದಾನದಲ್ಲಿ ರಿಯಲ್ ಫೈಟರ್ಸ್ ಮತ್ತು ಫ್ರೆಂಡ್ಸ್ ಕ್ರಿಕೆಟರ್ಸ್ ಆಯೋಜಿಸಿದ್ದ ರಿಯಲ್ ಫೈಟರ್ಸ್ ಕಪ್ 2025 - ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗೆದ್ದ ತನ್ವಿ ಕ್ರಿಕೆಟರ್ಸ್ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಅವರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ನಾಯಕತ್ವ ಗುಣ ರೂಪುಗೊಳ್ಳುತ್ತದೆ.
ಇತ್ತೀಚಿನ ದಿನಗಳಲ್ಲಿ ಯುವಕರು ಕ್ರೀಡೆಗಿಂತ, ವಾಟ್ಸ್ಆ್ಯಪ್, ಫೆಸ್ ಬುಕ್ ನಂತಹ ತಂತ್ರಜ್ಞಾನದೊಂದಿಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ ಮೊಬೈಲ್, ಕಂಪ್ಯೂಟರ್ ಮೂಲಕ ವಿವಿಧ ರೀತಿಯ ಆಟಗಳನ್ನು ಆಡುತ್ತಿದ್ದಾರೆ ಆದರೆ ಯುವಕರು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಇದು ಪೂರಕವಾಗಲ್ಲ ಇದನ್ನು ಮೊದಲು ಯುವಕರು ಬಿಡಬೇಕು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಜೀವನದಲ್ಲಿ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಮಹತ್ವವಿದೆ. ಕ್ರೀಡೆಗಳಿಂದ ದೇಹದ ಆರೋಗ್ಯ ಮಾನಸಿಕ ಮತ್ತು ಭೌತಿಕ ಸ್ಥಿಮಿತ
ಕಾಪಾಡಿಕೊಳ್ಳಬಹುದು ಜಾಗತಿಕ ಮಟ್ಟದಲ್ಲಿ ಕ್ರೀಡೆಗಳಿಗೆ
ಮಹತ್ವವಾದ ಅವಕಾಶಗಳಿವೆ ಎಂದರು.
ಗೆದ್ದ ತಂಡಗಳು : ಪ್ರಥಮ ಬಹುಮಾನವನ್ನು ಪಟ್ಟಣದ ತಮನ್ವಿ ಕ್ರಿಕೆಟರ್ಸ್ ತಂಡ, ರೂ. 61,111 ಟ್ರೋಫಿ ಮತ್ತು ದ್ವಿತೀಯ ಬಹುಮಾನವನ್ನು ಬಿಳ್ಳೂರು ಆದೆಮ್ ಸಾಬ್ ತಂಡ ರೂ. 31,111 ಮತ್ತು ಟ್ರೋಫಿ ಗೆದ್ದುಕೊಂಡಿತು.
ಕಾರ್ಯಕ್ರಮದಲ್ಲಿ ಪಟ್ಟಣ ಠಾಣೆ ಆರಕ್ಷಕ ಉಪ ನಿರೀಕ್ಷಕ ಮುನಿರತ್ನಂ, ಇತಿಹಾಸ ಅಕಾಡೆಮಿ ತಾಲ್ಲೂಕು ಅಧ್ಯಕ್ಷ ಬಿ.ಆರ್. ಕೃಷ್ಣ, ಆಯೋಜಕರಾದ ಚಿನ್ನಿ ವೆಂಕಿ, ರಾಮಾಂಜಿ, ಚೇತನ್, ವಿಕ್ಕಿ, ಶೇಖರ್, ಉಗ್ರಂ, ಸಿದ್ದಪ್ಪ, ಹಿತೇಶ್, ಟಿಂಗು, ಅನಿಲ್ ರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
