ಖಿದ್ಮಾ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

Jun 1, 2025 - 15:49
 0  39
ಖಿದ್ಮಾ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟಣೆಯಾಗಿದೆ. ಪ್ರಥಮ ಹಿರಿಯ ವೈದ್ಯ ಅಧಿಕಾರಿ ಡಾ. ಸುರೇಶ್ ನೆಗಳಗುಳಿ, ದ್ವಿತೀಯ: ಶ್ರೀಮತಿ ಸ್ವಪ್ನ ಆರ್.ಎ ಹಾಗೂ ತೃತೀಯ ಸ್ಥಾನ ಡಾ. ಪೂರ್ಣಿಮಾ ಧಾಮಣ್ಣವರ ಪಡೆದುಕೊಂಡರೆ ತೀರ್ಪುಗಾರರಿಂದ ಝುಲೇಖ ಮಮ್ತಾಝ್, ಕು. ಜ್ಯೋತಿ ಆನಂದ ತಂದುಕೊಂಡರು, ರೇಣುಖಾ ಬಂಗಾರಪ್ಪನವರ, ಪಲ್ಲವಿ ಎಂ.ಓ ಹಾಗೂ ಪ್ರತಿಭಾ ಬಿ ತಲ್ಲೂರ ಅವರು ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಲೇಖನ ಸ್ಪರ್ಧೆಗೆ ಹಿರಿಯ ಸಾಹಿತಿಗಳು ಹಾಗೂ ವಕೀಲರಾದ ಬಿ. ಎಸ್. ಅಪರಂಜಿ, ಶಿಕ್ಷಕರು, ಲೇಖಕರಾದ ಮೊಹಮ್ಮದ್ ಹುಮಾಯುನ್ ಎನ್ ಹಾಗೂ ಶಿಕ್ಷಕಿ, ಅಂಕಣ ಬರಹಗಾರರಾದ ಅಶ್ವಿನಿ ಎಸ್ ಅಂಗಡಿ ಬಾದಾಮಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. 

ಶನಿವಾರ ಸಂಜೆ ಗೂಗಲ್ ಮೀಟ್ ಮೂಲಕ ನಡೆದ ಫಲಿತಾಂಶ ಪ್ರಕಟಣಾ ಕಾರ್ಯಕ್ರಮದಲ್ಲಿ ಯುವ ಲೇಖಕ ಮೆಹಬೂಬಸಾಹೇಬ.ವೈ.ಜೆ., ಖಿದ್ಮಾ ಫೌಂಡೇಶನ್ ಅಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು, ಯುವ ಲೇಖಕಿ ಕುಮಾರಿ ಅಮರಲತಾ ಬೆಂಗಳೂರು ಭಾಗವಹಿಸಿದ್ದರು ಎಂದು ಖಿದ್ಮಾ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 1
Wow Wow 1
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456