ಗಂಗಾನಿಕೇತನ್ ಫೌಂಡೇಶನ್ ಹಾಗೂ ರೋಟರಿ ಸಂಸ್ಥೆಯಿಂದ ಅರ್ಥಪೂರ್ಣ ಮಹಿಳಾ ದಿನಾಚರಣೆ
ಕೆಜಿಎಫ್ : ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದ್ದು, ಮಹಿಳಾ ಸಬಲೀಕರಣದಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಗಂಗನಿಕೇತನ್ ಫೌಂಡೇಶನ್ ಅಧ್ಯಕ್ಷ ಎಚ್. ರಾಮಚಂದ್ರಪ್ಪ ಹೇಳಿದರು.
ಪಟ್ಟಣದ ಸಮೀಪದ ರಾಮಸಾಗರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಮಹಿಳೆ ಕೇವಲ ಕುಟುಂಬದ ಕಣ್ಣಲ್ಲ, ಇಡೀ ಸಮಾಜದ ಪ್ರೇರಣಾ ಶಕ್ತಿ. ಅವರಿಗೆ ಸೂಕ್ತ ಅವಕಾಶ ಮತ್ತು ವೇದಿಕೆ ಕಲ್ಪಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾದಾಗ ಮಾತ್ರ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಲಿಂಗ ತಾರತಮ್ಯ ಹೋಗಲಾಡಿಸಲು ಮಹಿಳಾ ಸಬಲೀಕರಣವನ್ನು ಬೆಂಬಲಿಸಲು ಸಮಾಜಕ್ಕೆ ಮಹಿಳೆಯರು ನೀಡಿರುವ ಕೊಡುಗೆಗಳನ್ನು ಸ್ಮರಿಸಲು ಪ್ರಮುಖವಾಗಿ ಜಾಗೃತಿಯನ್ನು ಮೂಡಿಸಲು ನಮ್ಮ ಗಂಗಾನಿಕೇತನ ಫೌಂಡೇಶನ್ ಹಾಗೂ ಸಿರಿಗನ್ನಡ ವೇದಿಕೆ. ಮತ್ತು ರೋಟರಿ ಸಂಸ್ಥೆ ಕೋಲಾರ ನಿರಂತರವಾಗಿ ಕಾರ್ಯವನ್ನು ನಿರ್ವಹಿಸುತ್ತದೆ
ಮತ್ತು ಭಾಗಗಳಲ್ಲಿ ಕನ್ನಡ ಉಳಿಸಲು ಬೆಳೆಸಲು ನಾಡು ನುಡಿ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ನಮ್ಮ ಸಂಸ್ಥೆ ನಿರಂತರವಾಗಿ ಧ್ವನಿ ಎತ್ತುತ್ತದೆ.
ಸಾಧಕರಿಗೆ ಸನ್ಮಾನ: ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಮತ್ತು ಕೃಷಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಹಿಳಾ ಮಣಿಗಳಿಗೆ ಹಾಗೂ ಅಸಂಘಟಿತ ಮಹಿಳಾ ಕಾರ್ಮಿಕರಿಗೆ 20ಕ್ಕೂ ಹೆಚ್ಚು ಕಾರ್ಮಿಕರಿಗೆ ಕಗಂಗನಿಕೇತನ್ ಫೌಂಡೇಶನ್ ಹಾಗೂ ರೋಟರಿ ಸಂಸ್ಥೆ ವತಿಯಿಂದ ಸ್ಫೂರ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕ್ಯಾಲೆಂಡರ್ ಬಿಡುಗಡೆ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2026 ನೇ ನೂತನ ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಿ ಎಲ್ಲಾ ಮಹಿಳೆಯರಿಗೂ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗಂಗನಿಕೇತನ ಫೌಂಡೇಶನ್ ಅಧ್ಯಕ್ಷ ಹೆಚ್. ರಾಮಚಂದ್ರಪ್ಪ, ಶಾಲೆಯ ಮುಖ್ಯಸ್ಥೆ ನುಸರತ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ಶ್ವೇತಾ ಅಶ್ವಥ್, ಕೇಶವ ರೆಡ್ಡಿ, ಪಿಎಂ .ಕೃಷ್ಣಪ್ಪ, ಡಾ ಮುನಿರಾಜು, ಮುನಿ ಕೃಷ್ಣಪ್ಪ, ಪ್ರಭಾಕರ್, ಕನ್ನಡ ಹೋರಾಟಗಾರರಾದ, ವೀರವೆಂಕಟಪ್ಪ, ದೇಶಪಾಂಡೆ. ಮ ದಿರಪ್ಪ. ಫ್ರೂಟ್ಸ. ವಿ.ಮಂಜುನಾಥ್ ಗೌಡ. ಹಾಗೂ ಅನಿಲ್ ಕುಮಾರ್ ಪಿವಿ. ಚಂದ್ರಶೇಖರ್, ದುರ್ಗಮ್ಮ, ವಾರ್ಡನ್ ಶ್ರೀಮತಿ, ಪ್ರಕಾಶ್, ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
