ಗ್ರಾಮ ದೇವತೆ ಶ್ರೀಪಾತಕೋಟ ಗಂಗಮ್ಮ ದೇವಿ4ನೇ ವರ್ಷದ ಹೂವಿನ ಕರಗ ಮಹೋತ್ಸವ-ಎಸ್.ಎಸ್.ರಮೇಶ್ ಬಾಬು

May 23, 2025 - 10:49
 0  5
ಗ್ರಾಮ ದೇವತೆ ಶ್ರೀಪಾತಕೋಟ ಗಂಗಮ್ಮ ದೇವಿ4ನೇ ವರ್ಷದ ಹೂವಿನ ಕರಗ ಮಹೋತ್ಸವ-ಎಸ್.ಎಸ್.ರಮೇಶ್ ಬಾಬು

ಬಾಗೇಪಲ್ಲಿ: ತಾಲೂಕಿನ ಗೂಳೂರು ಗ್ರಾಮದ ಗ್ರಾಮ ದೇವತೆ ಪಾತಕೋಟ ಶ್ರೀಗಂಗಮ್ಮ ದೇವಿಯ ಸನ್ನಿಧಿಯಲ್ಲಿ ಶ್ರೀಧರ್ಮರಾಯರಸ್ವಾಮಿಯ 4ನೇ  ಹೂವಿನ ಕರಗ ಮಹೋತ್ಸವ ಇಂದು ನಡೆಯಲಿದೆ ಎಂದು ಕರಗ ಸಮಿತಿ ಮುಖ್ಯಸ್ಥ ಹಾಗೂ ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಹೂವಿನ ಕರಗ ಮಹೋತ್ಸವ ಅಂಗವಾಗಿ ಮೇ 22ರಂದು ಹಸಿ ಕರಗ ನಡೆಯಲಿದ್ದು, ಇಂದು ಶ್ರೀಪಾತಕೋಟ ಗಂಗಮ್ಮ ದೇವಿಗೆ ಮದ್ಯಾಹ್ನ 1ಗಂಟೆಗೆ ಜ್ಯೋತಿಗಳ ಕಾರ್ಯಕ್ರಮ ನಡೆಯಲಿದೆ.  ಹೂವಿನ ಕರಗವನ್ನು ಪ್ರತಿ   ಸಲದಂತೆ ಈ ಸಲವೂ ಎಸ್.ಅಗ್ರಹಾರದ ಪಿ.ಶಿವರಾಜ್ ಹೂವಿನ ಕರಗ ಹೊರೆಯಲಿದ್ದು.

ಶುಕ್ರವಾರ ರಾತ್ರಿ 8ಗಂಟೆಗೆ ಬಳೆ ತೊಡಿಸುವ ಕಾರ್ಯಕ್ರಮದ ಮುಗಿದ ಕೂಡಲೇ ತಮಟೆ ವಾದ್ಯಗಳೊಡನೆ  ವೀರಕುಮಾರರೊಂದಿಗೆ ಪಾತಕೋಟ ಶ್ರೀಗಂಗಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಗಳು ನಡೆಯಲಿವೆ ನಂತರ ಕರಗ ಹೊತ್ತ ಶಿವರಾಜ್ ಗ್ರಾಮದ ಪ್ರತಿ ಮನೆ ಮನೆಗೂ ತೆರಳಿ ಭಕ್ತರಿಂದ ಪೂಜೆ ಸ್ವೀಕರಿಸುವರು ಈ ಸಂದರ್ಭದಲ್ಲಿ ಇಡೀ ರಾತ್ರಿ  ಆರ್ಕೆಸ್ಟಾç,ದಾಸೋಹ ಡೊಳ್ಳು ಕುಣಿತ ಕಾರ್ಯಕ್ರಮಗಳು ನಡೆಯಲಿದ್ದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೂವಿನ ಕರಗಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456