ಚರಿತ್ರೆಯನ್ನು ಯುವ ಪೀಳಿಗೆ ಹೆಚ್ಚು ಓದಬೇಕು; ಪ್ರೊ. ನಾರಾಯಣಘಟ್ಟ
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಾಸುದೇವ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರಿನ ಮಲ್ಲತಳ್ಳಿಯ ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ವಿನಾಯಕ ಪೆಟ್ಲೆ ಬರೆದಿರುವ ಇಂಗ್ಲಿಷ್ ಅವತರಣಿಕೆಯ "ಇಮ್ಮಡಿ ಪುಲಿಕೇಶಿ" ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಾಪಕರಾದ ಡಾ. ವಾದಿರಾಜ್ ಮತ್ತು ಆರ್.ಆರ್. ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಡಾ. ಹೆಚ್ ತುಕಾರಾಂ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ಭಾಷಾ ಭಾರತೀಯ ಸದಸ್ಯರಾದ ಪ್ರೊಫೆಸರ್ ನಾರಾಯಣಘಟ್ಟ ರವರು ವಹಿಸಿದ್ದರು.
ಕೃತಿಯನ್ನು ಬಿಡುಗಡೆ ಮಾಡಿ ಪ್ರೊಫೆಸರ್ ನಾರಾಯಣಘಟ್ಟರವರು ಮಾತನಾಡುತ್ತಾ ಚರಿತ್ರೆಯ ಕೃತಿಗಳನ್ನು ಓದುವ ಮೂಲಕ ಯುವ ಪೀಳಿಗೆಗೆ ರಾಜರ ಮತ್ತು ಮಹಾರಾಣಿಯರ ಆಡಳಿತವನ್ನು ತಿಳಿಯುವಂತೆ ಮಾಡಬೇಕು ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಇಂತಹ ಕೃತಿಗಳು ಅನುವಾದದಿಂದ ಹೆಚ್ಚು ಓದುಗರಿಗೆ ನಮ್ಮ ರಾಜರ ಪರಂಪರೆ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಡಾ. ವಾದಿರಾಜರವರು ಮಾತನಾಡುತ್ತಾ ಚರಿತ್ರೆಯಲ್ಲಿ ರಾಜ, ಮಹಾರಾಜರುಗಳ, ಸಾಮಂತರ, ರಾಣಿ, ಮಹಾರಾಣಿಯರ ನಡೆದು ಬಂದ ದಾರಿಯಲ್ಲಿ ನಡೆಸಿದ ಆಡಳಿತದಲ್ಲಿ, ಹೋರಾಟಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ಚರಿತ್ರೆಯನ್ನು ತಿರುಚಿರುವ ಸನ್ನಿವೇಶಗಳಿಂದ ನೈಜ ಚರಿತ್ರೆಯನ್ನು ತಿಳಿಯಲು ಚರಿತ್ರೆಯನ್ನು ಸರಿಯಾದ ರೀತಿಯಲ್ಲಿ ಓದಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಡಾ. ಹೆಚ್. ತುಕಾರಾಮರವರು ಮಾತನಾಡುತ್ತಾ ನಮ್ಮ ಯುವ ಪೀಳಿಗೆಗೆ ಹಿಂದಿನ ಎಷ್ಟೋ ರಾಜರ ರಾಣಿಯರ ಬಗ್ಗೆ ಅವರ ಸಾಧನೆಗಳು ಆಡಳಿತಗಳು ಹೋರಾಟಗಳು ಸರಿಯಾಗಿ ತಿಳಿಯದೆ ಇರುವುದು ವಿಪರ್ಯಾಸವೇ ಸರಿ ಪಠ್ಯಗಳಲ್ಲಿ ಹೆಚ್ಚಾಗಿ ಅಳವಡಿಸುವುದರಿಂದ ವಿದ್ಯಾರ್ಥಿಗಳು ತಿಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೃತಿಕಾರ ವಿನಾಯಕ ಪೆಟ್ಲೆ ಅವರು ಮಾತನಾಡುತ್ತಾ ಇಮ್ಮಡಿ ಪುಲಿಕೇಶಿಯಂತೆ, ಅಮೋಘವರ್ಷ, ಚಂದ್ರಗುಪ್ತ ಮೌರ್ಯ ಮುಂತಾದ ರಾಜರುಗಳ ಬಗ್ಗೆ ಇಂಗ್ಲಿಷ್ ನಲ್ಲಿ ಕೃತಿಗಳನ್ನು ರಚಿಸುವ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆರ್ ಆರ್ ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉದಂತ ಶಿವಕುಮಾರ್ ಲೇಖಕ ಡಾ. ಬ್ಯಾಡರಹಳ್ಳಿ ಶಿವರಾಜ್, ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ತಾ.ಸಿ. ತಿಮ್ಮಯ್ಯ, ಆರ್ ಆರ್ ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಿ. ಎಂ. ಗೋಪಾಲಕೃಷ್ಣ, ಕವಿ ಮುದಲ್ ವಿಜಯ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಎಂ. ಗಿರಿಯಪ್ಪ, ಭಾಗವಹಿಸಿದ್ದರು. ಮತ್ತು ಐಎಎಸ್ ಜ್ಞಾನಿ ಮದುನಂದನ್, ನನ್ ಮಿನಿ ರೇಡಿಯೋದ ವ್ಯವಸ್ಥಾಪಕ ಹರೀಶ್, ಶಶಿಕುಮಾರ್, ನಾಗರಾಜ್, ಇದ್ದರು. ಪ್ರಾರ್ಥನೆಯನ್ನು ಜ್ಯೋತಿಯವರು, ಸ್ವಾಗತ ಮತ್ತು ನಿರೂಪಣೆಯನ್ನು ಉದಂತ ಶಿವಕುಮಾರ್, ಪ್ರಾಸ್ತಾವಿಕ ನುಡಿ ಮತ್ತು ವಂದನಾರ್ಪಣೆಯನ್ನು ಡಾ. ಹೆಚ್. ತುಕಾರಾಂ ಮಾಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
