ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದ ಹೊಳಲು ಗ್ರಾಮಸ್ಥರು

Apr 15, 2026 - 16:50
 0  29
ಡಾ.ಬಿ.ಆರ್.ಅಂಬೇಡ್ಕರ್ ರವರ  135 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದ ಹೊಳಲು ಗ್ರಾಮಸ್ಥರು
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಮಂಡ್ಯ ತಾಲೂಕು ಹೊಳಲು ಗ್ರಾಮದ ಭಾರತ ರತ್ನ, ಸಂವಿಧಾನ ಶಿಲ್ಪಿ.

ಡಾ.ಬಿ.ಆರ್. ಅಂಬೇಡ್ಕರ್ ಪರಿವರ್ತನಾ ಟ್ರಸ್ಟ್ ಹಾಗೂ ಜೈ ಭೀಮ್ ಗೆಳೆಯರ ಬಳಗ ಹಾಗೂ ಹೊಳಲು ಗ್ರಾಮಸ್ಥರಿಂದ ಅದ್ದೂರಿಯಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೇಲುಕೋಟೆ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ನವರ ಅನುಪಸ್ಥಿತಿಯಲ್ಲಿ ಅವರ ಸಹೋದರ ರೈತ ನಾಯಕ ರಾಘವ ಪ್ರಕಾಶ್ ರವರು ಜ್ಯೋತಿ ಬೆಳಗಿಸುವುದರ ಮೂಲಕ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ವಿಜೃಂಭಣೆಯಿಂದ ಜನ್ಮೋತ್ಸವವನ್ನು ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಂಬೇಡ್ಕರ್ ಅವರು ಒಬ್ಬ ಮಹಾನ್ ವ್ಯಕ್ತಿ ಈ ದಿನ ಅವರ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಸಂತೋಷ ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿರುವುದು ಹೆಮ್ಮೆ. ಆದ್ದರಿಂದ ಅವರ ಜೀವನವನ್ನು ಇವತ್ತಿನ ಯುವಕರು ಮೈಗೂಡಿಸಿಕೊಂಡು ಮುಂದೆ ಬರಬೇಕು ಇವತ್ತು ನಾವುಗಳು ರಾಜಕೀಯದಲ್ಲಿ ಬೆಳೆಯುತ್ತಿರುವುದು ಅವರು ಹಾಕಿಕೊಟ್ಟ ಸಂವಿಧಾನದ ಮಹತ್ವದ ಕೊಡುಗೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ಮಾಜಿ ಮುದ್ರಣಾಲಯ ನಿರ್ದೇಶಕರಾದ ಎಚ್.ಎಸ್.ನಂದೀಶ್ ರವರು ಮಾತನಾಡುತ್ತಾ 

ಡಾ.ಬಿ. ಆರ್.ಅಂಬೇಡ್ಕರ್ ಅವರು ಒಂದು ವರ್ಗಕ್ಕೆ ಒಂದು ಜಾತಿಗೆ ಸೀಮಿತವಾಗಬಾರದು ಅವರು ಧೀಮಂತ ನಾಯಕ,

 ರಾಷ್ಟ್ರ, ಸಂವಿಧಾನ ಶಿಲ್ಪಿ,

 ಅವರು ಚಿಕ್ಕಂದಿನಿಂದ ಹೋರಾಟ ಮಾಡುತ್ತಾ ಕಷ್ಟದಲ್ಲಿ ಬೆಳೆದು ಬಂದವರು ಆದ್ದರಿಂದ ಎಲ್ಲರೂ ಅವರನ್ನ ಸ್ಮರಿಸಿ ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕು ಎಂದರು.

ಮಂಡ್ಯ ಆರ್‌.ಎ.ಪಿ.ಸಿ.ಎಂ.ಎಸ್. ನಿರ್ದೇಶಕರಾದ ಎಚ್.ಎಸ್. ಯೋಗೇಶ್ ಕುಮಾರ್ ರವರು ಅಂಬೇಡ್ಕರ್ ಅವರ ಜೀವನ ಚರಿತೆಯ ಬಗ್ಗೆ ಮಾತನಾಡಿದರು.

ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮುಖಾಂತರ ಮೆರವಣಿಗೆಗೆ ಸೊಸೈಟಿ ಅಧ್ಯಕ್ಷರಾದ ಎಚ್.ಪಿ. ಸಚ್ಚಿದಾನಂದ (ಪಪ್ಪಿ) ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಹೆಚ್. ಸಿ. ಹರಿಪ್ರಸಾದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಲ್. ಅಭಿನಂದನ್,

ಮಾಜಿ ಉಪಾಧ್ಯಕ್ಷರಾದ ನಾರಾಯಣಪ್ಪ, 

ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ನಾರಾಯಣ್, ಡೈರಿ ಅಧ್ಯಕ್ಷ ಸಾವಿತ್ರಮ್ಮ, ಜೆಟ್ಟಿಕುಮಾರ್, ಚಂದನ್, ನಾರಾಯಣ, 

ಪಟೇಲ್ ರಾಮ್, 

ಸೊಸೈಟಿ ನಿರ್ದೇಶಕರಾದ ಸದಾಶಿವಮೂರ್ತಿ, 

ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿವರ್ತನಾ ಟ್ರಸ್ಟ್ ಅಧ್ಯಕ್ಷರಾದ ಎಚ್‌.ಬಿ.ಮೂರ್ತಿ, ಗೌರವ್ಯಾಧ್ಯಕ್ಷ ಎಚ್.ಎಸ್.ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ಜಯಶಂಕರ್, ಹೆಚ್‌.ಬಿ.ಕೃಷ್ಣ, ಯುವ ನಾಯಕ ಎಚ್.ಎಸ್.ಮಂಜು, ಹರಿಕುಮಾರ್,

ಮಾಸ್ಟರ್ ಸಿದ್ದರಾಜ್,

 ಪರಿವರ್ತನಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ

 ಜೈ ಭೀಮ್ ಗೆಳೆಯರ ಬಳಗದ ಪದಾಧಿಕಾರಿಗಳು ಹೊಳಲು ಗ್ರಾಮಸ್ಥರು ಉಪಸ್ಥಿತರಿದ್ದರು.

ಡಾ.ಬಿ.ಆರ್ .ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಅದ್ದೂರಿಯಾಗಿ ಸೆಟ್ ರೊಂದಿಗೆ ಮೆರವಣಿಗೆ ಮಾಡಲಾಯಿತು.

ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಅನ್ನ ಸಂತರ್ಪಣೆ ಎನ್ನುವ ಏರ್ಪಡಿಸಲಾಗಿತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456