ಢವಳಗಿಯಲ್ಲಿ ನಡೆದ ತರಬಂಡಿ ಸ್ಪರ್ಧೆಯಲ್ಲಿ ದೇವರ ಹಿಪ್ಪರಗಿ ಮಂಡಲ ಅಧ್ಯಕ್ಷರ ಎತ್ತುಗಳು ಪ್ರಥಮ
ಢವಳಗಿ:-ಗ್ರಾಮದ ಶ್ರೀ ಮಡಿವಾಳೇಶ್ವರರ 519ನೇ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರುವರಿ 27 ಮತ್ತು 28 ರಂದು ಎರಡು ದಿನಗಳ ವರೆಗೆ ನಡೆದ ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 35ಕ್ಕೂ ಹೆಚ್ಚು ಜೋಡಿ ಎತ್ತುಗಳು ಭಾಗವಹಿಸಿದ್ದವು. ದೇವರ ಹಿಪ್ಪರಗಿ ವಿಧಾನ ಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಅವ್ವಣ್ಣಗೌಡ ಗ್ವಾತಗಿ ಅವರ ಎತ್ತುಗಳು ಕಮೀಟಿಯ 2ನಿಮೀಷದ ನಿಗದಿತ ಸಮಯದಲ್ಲಿ 915 ಪೂಟ ದೂರ ಕ್ರಮಿಸಿ ಮೊದಲ ಬಹುಮಾನ ಸೆಲ್ಪ ಎಚ್ ಎಪ್ ಡಿಲಕ್ಸ್ ಸೈಕಲ್ ಮೊಟರ್ ಪಡೆದುಕೊಂಡುವು.
ದ್ವೀತಿಯ ಬಹುಮಾನವನ್ನು ರೂಡಗಿ ಗ್ರಾಮದ ರಾಮಣ್ಣ ಕಲ್ಲಪ್ಪ ದೊಡಮನಿ ಅವರ ಎತ್ತುಗಳು 882 ಪೂಟ ದೂರ ಕ್ರಮಿಸಿ ದ್ವೀತಿಯ ಸ್ಥಾನ ಪಡೆದು ಎಚ್ ಎಪ್ 100 ಸೈಕಲ್ ಮೊಟರ್ ಅನ್ನು ಪಡೆದು ವಿಜಯ ಪತಾಕೆ ಹಾರಿಸಿದವು. 867ಪೂಟ ದೂರ ಕ್ರಮಿಸಿ ಬ್ಯಾಕೋಡ ಗ್ರಾಮದ ಎತ್ತುಗಳು ತೃತೀಯ ಸ್ಥಾನ ಪಡೆದವು.
ಅದರಂತೆ ನಾಲ್ಕನೇ ಬಬಲಾದಿ, ಐದನೇ ಸ್ಥಾನ ನವಲಕಲ್ಲ, ಆರನೇ ಸ್ಥಾನ ಬ್ಯಾಲ್ಯಾಳ, ಏಳನೇ ಸ್ಥಾನ ಶಿರೋಳ,ಎಂಟನೇ ಸ್ಥಾನ ಅಂಬಳೂರ, ಒಂಬತ್ತನೇ ಮಂಜಲಾಪೂರ, ಹತ್ತನೇ ಬ್ಯಾಲ್ಯಾಳ,ಹನ್ನೊಂದು ರೂಡಗಿ, ಹನ್ನೆರಡು ಹೆಬ್ಬಾಳ, ಹದಿಮೂರು ಜಮಖಂಡಿ, ಹದಿನಾಲ್ಕು ಕುರಕುಂದ , ಹದಿನೈದು ಬಿದರಿ ಹೀಗೆ ಸ್ಥಾನವನ್ನು ಪಡೆದುಕೊಂಡು ಉತ್ತಮ ಬಹುಮಾನವನ್ನು ತಮ್ಮದಾಗಿಸಿಕೊಂಡವು. ಎಂದು ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದರು. ಬ್ಯಾಲ್ಯಾಳ ಗ್ರಾಮದ ಅವ್ವಣ್ಣ ಗ್ವಾತಗಿ ಅವರ ಎತ್ತುಗಳು ಪ್ರಥಮವಾಗುತ್ತಿದ್ದಂತೆ ಎತ್ತಿನ ಮಾಲಿಕರು ಮತ್ತು ಬೆಂಬಲಿಗರು ವಿಜಯೋತ್ಸವವನ್ನು ಸಂಭ್ರಮಿಸಿದರು. ವಿಜೇತ ಸ್ಪರ್ಧಾಳುಗಳಿಗೆ ದೇವಸ್ಥಾನದ ಧರ್ಮಾಧಿಕಾರಿಯಾದ ಪೂಜ್ಯ ಶ್ರೀ ಘನಮಠೇಶ್ವರ ಸ್ವಾಮೀಜಿ, ಶರಣಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಮಲ್ಲನಗೌಡ ಕಡಕಲ್ಲ, ಸಂಗನಾಥ ಬಿರಾದಾರ (ಸಾಲಮನಿ), ಎಮ್ ಕೆ ಗುಡಿಮನಿ ಸೇರಿದಂತೆ ಇತರರು ಸೇರಿ ಬಹುಮಾನವನ್ನು ವಿತರಿಸಿದರು.
ತರಬಂಡಿ ನೋಡಲು ವಿವಿಧ ತಾಲೂಕಿನಿಂದ ಬಹುಸಂಖ್ಯಾತ ರೈತರು ಆಗಮಿಸಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
