ತಾತಯ್ಯನವರ ತತ್ವಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ

Mar 3, 2026 - 19:27
 0  102
ತಾತಯ್ಯನವರ ತತ್ವಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಭಾಗ್ಯನಗರ: ಸಮಾಜದಲ್ಲಿ ನಡೆಯುತಿದ್ದ ಅಂಕುಡೊoಕುಗಳನ್ನು ತಮ್ಮ ಹಾಡುಗಳ ಮೂಲಕ ಅರಿವು ಮೂಡಿಸುತ್ತಿದ್ದರು ಅಂತಹ ಮಹಾನ್ ಯೋಗಿಗಳನ್ನು ನಾವು ಎಂದೂ ಮರೆಬಾರದು ದಿನ ಬೆಳಗಾದರೆ ಅವರನ್ನು ನೆನೆದರೆ ಅವತ್ತಿನ ಕೆಲಸ ಅತ್ಯಂತ ಸಂತೋಷಕದಾಯವಾಗಿರುತ್ತದೆ,ಅವರು ತಮ್ಮ ತಾಯಿಯ ಗರ್ಭದಲ್ಲಿ ಇರುವಾಗಲೇ ಕೊಲ್ಲುವ ಪ್ರಯತ್ನಗಳು ನಡೆದವು ಆದರೆ ದೈವಾಂಶ ಸಂಭೂತರಾದ ಅವರನ್ನು ಕೊಲ್ಲಲು ಸಾದ್ಯವಾಗಲಿಲ್ಲ ಇಂದಿನ ಯುವ ಪೀಳಿಗೆ ತಾತಯ್ಯನವರ ಆದರ್ಶಗಳನ್ನು ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಯೋಗಿ ನಾರೇಯಣ ಯತೀಂದ್ರರ(ಕೈವಾರ ತಾತಯ್ಯ)ನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೈವಾರ ತಾತಯ್ಯ ನವರು ಮಹಾ ಕಾಲಜ್ಞಾನಿ ಅವರು ಸಿದ್ಧಿ ಪಡೆದ ಸಾಧಕ ಯೋಗಿ. ಮಾತ್ರವಲ್ಲಸಮಾಜ ಸುಧಾರಕರೂ ಹೌದು. ವೇದಾಂತ ಸಾರಾವಳಿ ತತ್ತ್ವ ಕೀರ್ತನೆಗಳು ಸೇರಿದಂತೆ ಹಲವಾರು ಪ್ರಕಾರಗಳ ಆಧ್ಯಾತ್ಮಿಕ ಗ್ರಂಥಗಳನ್ನು ಬರೆದ ಅವರು ತಪಸ್ಸಿದ್ಧಿಯಿಂದ ಮನುಕುಲಕ್ಕೆ ಭವಿಷ್ಯ ನುಡಿದ ಕಾಲಜ್ಞಾನಿ ಎಂದೇ ಹೆಸರು ಗಳಿಸಿದ್ದಾರೆ. ಎಲ್ಲರೊಂದಿಗೂ ಹೃದಯವಂತಿಕೆಯಿಂದಲೇ ಸ್ಪಂದಿಸುತ್ತಿದ್ದ ಯತೀಂದ್ರ ಅವರು ತಾತಯ್ಯ ಎಂದೇ ಪ್ರಸಿದ್ಧರಾಗುತ್ತಾರೆ ಹಾಗೂ ಈ ಕಾಲಜ್ಞಾನ ಕೃತಿಯಲ್ಲಿ ಶ್ರೀ ತಾತಯ್ಯನವರು ಅಧರ್ಮದಿಂದ ಭೂಮಿಗೆ ಭಾರವಾಯಿತೆಂಬ ಕಥನದಿಂದಲೇ ಕಾಲಜ್ಞಾನ ಆರಂಭಿಸಿದ್ದಾರೆ ಪ್ರಕೃತಿ ಸಂಪತ್ತಿನ ನಾಶ, ಸರ್ಕಾರಗಳ ವೈಫಲ್ಯ,ಸಮಾಜದಲ್ಲಿನೈತಿಕ ಪತನ, ಭಾರತದಲ್ಲಿನ ಪ್ರಜಾಪ್ರಭುತ್ವದ ವೈಖರಿ, ಭವಿಷ್ಯದಲ್ಲಿನ ಸಂಭಾವ್ಯ ಪ್ರಳಯ ಇವೇ ಮೊದಲಾದ ಘಟನೆಗಳ ಬಗ್ಗೆ ಹೇಳಿದ್ದಾರೆ. ಅವುಗಳು ನಿಜ ಆಗಿರುವುದು ಕೂಡಾ ಕಾಲಜ್ಞಾನದ ಮಹತ್ವವನ್ನು ಹೊಂದಿದಿದೆ ಎಂದರು.

ಸಮುದಾಯದ ಹಿರಿಯ ಮುಖಂಡ ಎ. ಜಿ.ಸುಧಾಕರ್ ಮಾತನಾಡಿ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅವರಿಗೆ ನಮ್ಮ ಬಲಿಜ ಸಮುದಾಯದ ಮೇಲೆ ಇರುವ ಕಾಳಜಿಯಿಂದ ಮತ್ತು ತಹಸೀಲ್ದಾರ್ ಮನಿಷಾ ಪತ್ರಿ ಅವರ ಮುತುವರ್ಜಿಯಿಂದ ಬಲಿಜ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು ಒಂದು ಎಕರೆ ಜಿಮೀನು ಗುರ್ತಿಸಿ ಮಂಜೂರು ಮಾಡಿಸಿರುವರಿಗೆ ನಮ್ಮ ಸಮುದಾಯದ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದ ಅವರು ತಾತಯ್ಯ ನವರ ಕಾಲಜ್ಞಾನ ಎಂದರೆ ಯೋಗ ಸಿದ್ಧಿ ಪಡೆದ ತಪಸ್ವಿಯ ಮುಖದಿಂದ ವಿಶ್ವಕಲ್ಯಾಣಕ್ಕಾಗಿ ಹೊರಬೀಳುವ ದೈವವಾಣಿ. ಭವಿಷ್ಯದಲ್ಲಿಘಟಿಸಲಿರುವ ವಿಶ್ವದ ಸ್ಥಿತಿಗತಿಗಳು ವಾಕ್ಸಿದ್ಧಿಯುಳ್ಳ ಮಹಾಪುರುಷರ ವಾಣಿಯ ಮೂಲಕ ಕಥನಗಳಾಗಿ ಹೊರಬೀಳುತ್ತವೆ. ಅದು ವಿಪತ್ತಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸೂಚನೆ ನೀಡುತ್ತದೆ. ತಾತಯ್ಯನವರ ಕಾಲಜ್ಞಾನದಂತೆ ಅನೇಕ ಘಟನೆಗಳು ನಡೆದಿವೆ ಹಾಗೂ ನಾರೇಯಣ ಯತೀಂದ್ರರು ಭಕ್ತಕೋಟಿಗೆ ಆತ್ಮೋದ್ಧಾರದ ಮಾರ್ಗದರ್ಶನ ಮಾಡಿದ ತಾತಯ್ಯನವರೆನಿಸಿದ್ದಾರೆ.

ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ದು ಮಾತನಾಡಿ ಕೈವಾರ ತಾತಯ್ಯ ನವರು ಆದರ್ಶ ಜೀವನದ ದೃಷ್ಠಿಯಿಂದ ಅವರು ಸದ್ಗೃಹಸ್ಥರು, ಜನತೆಯಲ್ಲಿನ ಮಿಥ್ಯಾಚರಣೆಗಳನ್ನು ತೊಲಗಿಸಿ ಪ್ರಗತಿ ಪಥವನ್ನು ನಿರ್ಮಿಸಿದ ಸಮಾಜ ಸುಧಾರಕರು, ಧೀನದಲಿತರ ಬಗೆಗೆ ಸೇವಾಭಾವನೆಯನ್ನು ಮೂಡಿಸಿ, ಅಲೌಕಿಕ ಮಹಿಮೆಗಳನ್ನು ತೋರಿದ ಪವಾಡ ಪುರುಷರು, ಭೌತಿಕ ಸುಖಗಳನ್ನು ತುಚ್ಛವಾಗಿ ಪರಿಗಣಿಸಿ ತ್ಯಾಗ ಮಾಡಿದ ವೈರಾಗ್ಯ ಪುರುಷರು, ಅಷ್ಷಾಂಗಯೋಗ, ಹಠಯೋಗ, ರಾಜಯೋಗಾದಿ ಮಾರ್ಗದಿಂದ ಶೋಧನೆ ಮಾಡಿದ ಬ್ರಹ್ಮಜ್ಞಾನಿಗಳು ಎಂದು ಅವರು ರಚಿಸಿರುವ ಗ್ರಂಥಗಳಿoದ ತಿಳಿದುಬರುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕೈವಾರ ತಾತಯ್ಯ ನವರ 300 ನೇ ಜಯಂತಿ ಹಾಗೂ ಕದಿರಿ ಹುಣ್ಣಿಮೆ ಪ್ರಯುಕ್ತ ಬಲಿಜ ಸಮುದಾಯದಿಂದ ಹೃದಯ ಭಾಗದ ಶ್ರೀ ಬೈಲಾoಜಿನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ, ಬಲಿಜ ಸಮುದಾಯದ ಅಧ್ಯಕ್ಷ ಶ್ರೀನಿವಾಸ್,ಅಪ್ಪಯ್ಯ ಬಾಬು, ಎಸ್ ಟಿ ಡಿ ಮೂರ್ತಿ,ಡಿ. ಎನ್. ರಘು, ಪ್ರಾಂಶುಪಾಲ ನವೀನ್,ಲೋಕೇಶ್ ಡಾಬಾ ರಾಮಚಂದ್ರ,ಮಾರ್ಕೆಟ್ ಸುರೇಶ್, ಟಿ ಎಂ ಎಸ್ ಶ್ರೀನಿವಾಸ್, ಮಾರ್ಕೆಟ್ ಶ್ರೀನಿವಾಸ್, ಕೊತ್ತ ಪಲ್ಲಿ ನಾರಾಯಣ ಸ್ವಾಮಿ,ಅಂಜಿನಪ್ಪ,ರೈತ ಮುಖಂಡ ಕೊತ್ತಕೊಟ್ಟ ರಾಮಾಂಜಿ, ರೈತ ಸಂಘ ನಾರಾಯಣ ಸ್ವಾಮಿ, ಪರಗೋಡು ನರೇಶ್,ಲಾಯರ್ ಸತೀಶ್,ಗೂಳೂರು ಸುಬ್ರಾಮ್, ಮಿಲ್ಕ್ ವೀರ, ನೇತಾಜಿ ಸರ್ಕಲ್ ಮಂಜು,ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟರಾಮ್, ಬಿ ಸಿ ಎಂ ಶಿವಪ್ಪ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ,ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿ ಶಶಿಕಲಾ,ಲೋಕೋಪಯೋಗಿ ಇಲಾಖೆ ಶ್ರೀಕಾಂತ್ ಕಂದಾಯ ಇಲಾಖೆ ಸಿಬ್ಬಂದಿ ಪ್ರೀತಮ್, ಮಾರುತಿ,ಸಂತೋಷ್,ಜಿಲ್ಲಾ ಪಂಚಾಯಿತಿ ಖದಿರ್,ಸೇರಿದಂತೆ ಮತ್ತಿತರರು ಇದ್ದರು.... 

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456