ದೇವರ ದಾಸಿಮಯ್ಯ ಅವರು ಇಂದಿನ ಯುವ ಪೀಳಿಗೆಗೆ ದಾರಿ ದೀಪ- ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ
ಭಾಗ್ಯನಗರ: ಮಾನವ ಶರೀರವನ್ನು ಸಂರಕ್ಷಣೆ ಮಾಡಲು ವಸ್ತ್ರ ತಯಾರು ಮಾಡುವ ಕಾಯಕವನ್ನು ಮೊದಲು ಮಾಡಿದ್ದು ವಚನಕಾರ ಶ್ರೀ ದೇವರ ದಾಸಿಮಯ್ಯ ಎಂದು ತಾಲ್ಲೂಕು ದಂದಾಧಿಕಾರಿ ತಹಸೀಲ್ದಾರ್ ಮನೀಷ ಮಹೇಶ್ ಪತ್ರಿ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ತೊಗಟುವೀರ(ನೇಕಾರ) ಕ್ಷೇಮಾಭಿವೃದ್ದಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು 11ನೇ ಶತಮಾನದಲ್ಲಿ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿ ರಾಮಯ್ಯ ಶಂಕರಿ ಎಂಬ ದಂಪತಿಗಳಿಗೆ ಜನ್ಮ ತಾಳಿದ ದಾಸಿಮಯ್ಯ ಅವರು ಶಿವನ ಪರಮ ಭಕ್ತರಾಗಿದ್ದರು ಇವರು ದುಗ್ಗಳೆ ಎಂಬ ಮಹಿಳೆಯನ್ನು ಮದುವೆ ಮಾಡಿಕೊಂಡು ಸುವರ್ಚಲೆ ಎಂಬ ಮಗಳಿಗೆ ಜನ್ಮ ನೀಡಿದರು ನಂತರ ತಮ್ಮ ಸಾಂಸಾರಿಕಾ ಜೀವನ್ನು ಬದಿಗೊತ್ತಿ ಸನ್ಯಾಸತ್ವ ಸ್ವೀಕಾರ ಮಾಡಿ ದಟ್ಟ ಕಾಡಿನಲ್ಲಿ ಘೋರ ತಪಸ್ಸು ಮಾಡಿದಾಗ ಶಿವನು ಪ್ರತ್ಯಕ್ಷವಾಗಿ ಏನು ವರ ಬೇಕು ಎಂದು ಕೇಳಿದಾಗ ಇನ್ನು ಸಾಂಸಾರಿಕ ಜೀವನ ಸಾಕಾಗಿದೆ ನಿಮ್ಮ ಸೇವೆಯನ್ನು ಮಾಡುವಂತೆ ವರ ನೀಡಿ ಎಂದು ಬೇಡಿಕೊಂಡಾಗ ಶಿವನು ನೀನು ಮಾನವನ ಶರೀರ ಕಾಪಾಡುವ ವಸ್ತç ನಿರ್ಮಾಣ ಮಾಡುವ ಕಾಯಕವನ್ನು ಮಾಡು ಎಂದು ಆದೇಶ ನೀಡಿದ ಮೇರೆಗೆ ಆಗಿನಿಂದ ಬಟ್ಟೆ ತಯಾರು ಮಾಡುವ ಪವಿತ್ರ ನೇಕಾರ ವೃತ್ತಿಯನ್ನು ಮಾಡತೊಡಗಿದನು ಇವರು 150 ಕ್ಕೂ ಹೆಚ್ಚೂ ವಚನಗಳನ್ನು ರಚನೆ ಮಾಡಿ ಆದ್ಯ ವಚನಕಾರ ಪಿತಾಮಹ ಜನಪದ ಜಗದ್ಗುರು ಎಂಬ ಬಿರುದುಗಳನ್ನು ಪಡೆದ ಮಹಾನ್ ವಚನಕಾರ ಎಂದರು.
ಈ ಸಂದರ್ಭದಲ್ಲಿ ತೊಗಟುವೀರ ಕ್ಷೇತ್ರಿಯರ ಸಂಘ ಅಧ್ಯಕ್ಷ ಬಿ.ಸಿ.ಲಕ್ಷ್ಮಯ್ಯ,ಕಾರ್ಯದರ್ಶಿ ವೆಂಕಟೇಶ್, ನೇಕಾರರ ಉಕ್ಕೂಟ ಸಮುದಾಯದ ಅಧ್ಯಕ್ಷ ಪ್ರಭಾರ್, ಕಾರ್ಯದರ್ಶಿ ಕೃಷ್ಣಾಮೂರ್ತಿ, ಸಮುದಾಯದ ಮುಖಂಡರಾದ ಅಶ್ವಥ್ ನಾರಾಯಣ, ಗಂಗಾಧರ್,ನಾರಾಯಣ ಸ್ವಾಮಿ, ಜಯ ಲಕ್ಷ್ಮಿ, ಪದ್ಮಾ, ಬಿ, ಆರ್, ಸಿ. ಶಿವಪ್ಪ,ಬಿ ಸಿ ಎಂ ಇಲಾಖೆ ಶಿವಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ಸೇರಿದಂತೆ, ಮತ್ತಿತರರು ಇದ್ದರು..
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
