ದೊಡ್ಡದೊಂದು ಗೆಲುವು..

Feb 20, 2026 - 10:50
Feb 20, 2026 - 11:15
 0  9
ದೊಡ್ಡದೊಂದು ಗೆಲುವು..

     ನಿನ್ನೆಯಷ್ಟೇ ತುೞುವೇಶ್ವರನ ಸನ್ನಿಧಿಯಲ್ಲಿ ನನಗೆ ನ್ಯಾಯ ಕೊಡಿಸು 
ಅನ್ಯಾಯದ ವಿರುದ್ದದ ಹೋರಾಟಕ್ಕೆ ಇಂಬು ಕೊಡು ಎಂದು ಕೇಳಿಕೊಂಡಿದ್ದೆ

ಈವತ್ತೇ ಫಲ ಸಿಕ್ಕಿತು

ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ ನಮ್ಮ‌ಮೇಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಫಾಲ್ಸ್ ಕೇಸ್ ಹಾಕಿದ್ದಲ್ಲದೆ ನನ್ನ ಪರ್ಸ್ ನಲ್ಲಿದ್ದ 25,000₹ cash ,ಗೋಲ್ಡ್ ಪರ್ಲ್ ಪೆಂಡೆಂಟ್ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸಿದ ಬಗ್ಗೆ ಸಿಸಿಟಿವಿ ಫೂಟೇಜ್ ದೊರೆತಿದೆ

ನಾನು ಮಾಹಿತಿ ಹಕ್ಕಿನಡಿಯಲ್ಲಿ ಕೇಳಿದಾಗ ನಾನಾ ಕಾರಣ ಒಡ್ಡಿ ನೀಡಿರಲಿಲ್ಲ ಹಾಗಾಗಿ ನಾನು ಮಾಹಿತಿ ಹಕ್ಕು ಆಯುಕ್ತರಲ್ಲಿ ಅಪೀಲ್ ಮಾಡಿದ್ದು ಕಳೆದ ತಿಂಗಳು 19/01/2026 ರಂದು ಸಿಸಿಟಿವಿ ಫೂಟೇಜ್ ಮತ್ತು ಸಬ್ ಇನ್ಸ್ಪೆಕ್ಟರ್ ಸುರೇಖ ಧರಿಸಿದ ಬಾಡಿ ಕೆಮರ ವೀಡಿಯೋ  ನೀಡಲು ಮಾಹಿತಿ ಆಯುಕ್ತರು ಮಾಹಿತಿ ಹಕ್ಕು ಅಧಿಕಾರಿಯಾಗಿರುವ ಸಬ್ ಇನ್ಸ್ಪೆಕ್ಟರ್ ಮೋಹನ್ ಅವರಿಗೆ ಆದೇಶಿದ್ದರು.ಅದರಂತೆ ಈವತ್ತು ನಮಗೆ ಕೊಟ್ಟಿದ್ದಾರೆ.. ದುರಂತ ಏನೆಂದರೆ ನಾವು ಬಹಳ ಒಳ್ಳೆಯ ವ್ಯಕ್ತಿ ಎಂದು ಭಾವಿಸಿದ್ದ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಮೋಹನ್ ಕೂಡ ಭಾಗಿಯಾಗಿರುದು ವೀಡಿಯೋ ದಲ್ಲಿ ಕಂಡು ಬಂದಿದೆ..

ಪ್ರಾಚೀನ ಕಾಲದಲ್ಲಿ ಅಮಾಯಕರನ್ನು ಹಿಂಸಿಸುವ  ಅಸುರರಿದ್ದರು ಈಗಿನ ಕಾಲದಲ್ಲಿ ಈ ಕೆಲಸಕ್ಕೆ  ಪೊಲೀಸರು ಇದ್ದಾರೆ ಎಂಬ ಮಾತು ಸತ್ಯ ಎಂದೆನಿಸಿತು ನನಗೆ 
ಜ್ಞಾನ ಭಾರತಿ ಠಾಣೆಯಲ್ಲಿ ಮೂವರು ಇನ್ಸ್ಪೆಕ್ಟರ್ ಗಳು ಲಕ್ಷ್ಮಣ ನಾಯಕ್ ,ಮಂಜುನಾಥ್ ,ರವಿ  ಸಾಲಾಗಿ ಒಬ್ಬರ ನಂತರ ಒಬ್ಬರು ಸಸ್ಪೆಂಡ್ ಆಗಿದ್ದಾರೆ..
ಇವರೆಲ್ಲರೂ ಅಮಾಯಕರ ಮೇಲೆ ಫಾಲ್ಸ್ ಕೇಸ್ ಹಾಕಿದ ಕಾರಣಕ್ಕಾಗಿ ಕರ್ತವ್ಯ ಲೋಪದ ಕಾರಣಕ್ಕಾಗಿ ಸಸ್ಪೆಂಡ್ ಆದವರು..
ಆದರೂ ದುಡ್ಡಿಗಾಗಿ ಫಾಲ್ಸ್ ಕೇಸ್ ಹಾಕುವ ಚಾಳಿ ಇಲ್ಲಿನವರನ್ನು ಬಿಟ್ಟಿಲ್ಲ..
ಸಿಸಿಟಿವಿ ಫೂಟೇಜ್ ಸಿಕ್ಕಿದೆ ಮುಂದೆ ಕಾನೂನಾತ್ಮಕ ಹೋರಾಟ ಮುಂದುವರಿಸುವೆ 
ಇವರುಗಳು ಸಸ್ಪೆಂಡ್ ಆದರೆ ಸಾಲದು ಕೆಲಸದಿಂದ ಡಿಸ್ಮಿಸ್ ಆಗಿ ಜೈಲಿಗೆ ಹೋಗಬೇಕು ಅಲ್ಲಿಯ ವರೆಗೆ ನನ್ನ ಹೋರಾಟ ಮುಂದುವರಿಯುತ್ತದೆ
ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಪಡೆಯಲು ಸೂಕ್ತ ಮಾರ್ಗ ದರ್ಶನ ನೀಡಿದ Vijayaraghava Marathe ಹಾಗೂ ಅಡ್ವಕೇಟ್ ಕಿರಣ್ ರವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456