ನೂರನಕ್ಕಿ ಗೇಟ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಶ್ರೀಮತಿ ವೀಣಾ ಚನ್ನಕೇಶವ ಅವಿರೋಧವಾಗಿ ಆಯ್ಕೆಗೊಂಡರು
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ನೂರನಕ್ಕಿ ಗೇಟ್ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ನಡೆದು ವೀಣಾ ಕೇಶವ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಶ್ರೀಮತಿ ವೀಣಾ ಕೇಶವ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾದ ವೀಣಾ ಮಾತನಾಡಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ಕಾರಣಕರ್ತರಾದ ಡಾ. ಸೂರಜ್ ರೇವಣ್ಣನವರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.
ನನ್ನ ಆಯ್ಕೆಗೆ ಸಂಪೂರ್ಣ ಸಹಕಾರ ನೀಡಿದ ಮಾಜಿ ಮಂತ್ರಿ ಎಚ್ ಡಿ ರೇವಣ್ಣ ಹಾಗೂ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಹಾಗೂ ನಮ್ಮ ಪಂಚಾಯ್ತಿಯ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಮುಖಂಡರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ನನಗೆ ಕೊಟ್ಟಿರುವ ಈ ಅವಧಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾಯ ವಾಚ ದುಡಿಯುತ್ತೇನೆ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಪಿಡಿಒ ನವೀನ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವೀಣಾ ಕೇಶವ್, ಉಪಾಧ್ಯಕ್ಷರಾದ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಜಬೀರ್ ಖಾನ್, ಲಕ್ಷ್ಮಮ್ಮ, ಕೋಮಲಾಕ್ಷಿ,ಗೀತಾ, ವಸಂತರಾಣಿ, ಪುಟ್ಟತಾಯಮ್ಮ, ಗಂಗಾಧರ್, ರಘು, ತಿಮ್ಮೇಗೌಡ, ಮಂಜೇಗೌಡ, ಲಿಂಗೇಗೌಡ,ಜೆಡಿಎಸ್ ಯುವ ಮುಖಂಡರಾದ ನಾಡನಹಳ್ಳಿ ಕೇಶವ್, ಎನ್ ಬಿಂಡೇನಹಳ್ಳಿ ಸತೀಶ್,ಗುಂಡೇಶ್, ಬೋಜರಾಜು,ಪಡುವನಹಳ್ಳಿ ರಾಮಕೃಷ್ಣೇಗೌಡ, ನಾರಾಯಣಪುರ ರಂಗಸ್ವಾಮಿ, ಮಿಲ್ ಮಂಜು, ಶ್ರೀನಿವಾಸ್, ನಾಗೇಶ್,ಶಿವಕುಮಾರ್, ರಂಗೇಗೌಡ, ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
