ನ್ಯಾಯ ಒದಗಿಸುವಂತೆ ಆಗ್ರಹಿಸಿ ಚೌಡಪ್ಪ ಕುಟುಂಬಸ್ಥರ ಅನಿರ್ಧಿಷ್ಟಾವಧಿ ಧರಣಿ 8ನೇದಿನ

May 17, 2025 - 12:33
 0  7
ನ್ಯಾಯ ಒದಗಿಸುವಂತೆ ಆಗ್ರಹಿಸಿ ಚೌಡಪ್ಪ ಕುಟುಂಬಸ್ಥರ ಅನಿರ್ಧಿಷ್ಟಾವಧಿ ಧರಣಿ 8ನೇದಿನ

ಬಾಗೇಪಲ್ಲಿ: ನಮಗೆ ಜಮೀನು ಕ್ರಯ ಮಾಡಿಕೊಡುವುದಾಗಿ ಮಾತು ಕೊಟ್ಟು ಬೇರೆಯವರಿಗೆ ಜಮೀನನ್ನು ಕ್ರಯ ಮಾಡಿಕೊಟ್ಟಿರುವುದರಿಂದ ನನಗೆ ಅನ್ಯಾಯವಾಗಿದೆ ಎಂದು ರಾಯದುರ್ಗಂಪಲ್ಲಿ ಚೌಡಪ್ಪ ಕುಟುಂಬದವರು ಕಳೆದ 8 ದಿನಳಿಂದ ನಲ್ಲಪರೆಡ್ಡಿಪಲ್ಲಿ ಗ್ರಾಮದ ಶಾನುಭೋಗರಾದ ಸುರೇಂದ್ರನಾಥ್ ರವರ ಮನೆ ಮುಂದೆ ಮಹಾತ್ಮಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿಟ್ಟು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಯದುರ್ಗಂಪಲ್ಲಿ ಚೌಡಪ್ಪ ಅವರು ಮಾತನಾಡಿ ತಾಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮದ ಶಾನುಭೋಗರಾದ ಕೃಷ್ಣಮೂರ್ತಿರವರು ನಮ್ಮ ತಂದೆ ಗೋವಿಂದಪ್ಪರವರಿoದ 25 ವರ್ಷಗಳ ಹಿಂದೆ ಪೋತೇಪಲ್ಲಿ ಸ.ನಂ 91/1ರಲ್ಲಿ ಖುಷ್ಕಿ ಜಮೀನು ಕ್ರಯ ಮಾಡಿಕೊಡುವುದಾಗಿ 28 ಸಾವಿರ ರೂ.ಗಳ ಹಣವನ್ನು ತೆಗೆದುಕೊಂಡಿದ್ದರು.

ಅಂದಿನಿoದ ಇಂದಿನವರೆವಿಗೂ ಈ ಜಮೀನಿನನಲ್ಲಿ ಅನುಭವದಲ್ಲಿದ್ದೇವೆ. ಸಾವಿರಾರು ರೂ.ಗಳು ಸಾಲ ಮಾಡಿ ಈ ಜಮೀನನಲ್ಲಿದ್ದ ದೊಡದೊಡ್ಡ ಕಲ್ಲಿನ ಬಂಡೆಗಳನ್ನು ಹೊಡೆದು ಸಮತಟ್ಟು ಮಾಡಿದ್ದೇವೆ. ಶಾನುಭೋಗರು ಭೂಮಿಯನ್ನು ನಿಮಗೆ ಕ್ರಯ ಮಾಡಿಕೊಡುತ್ತೇನೆ ಎಂದು ನಂಬಿಸಿ ಬೇರೆಯವರಿಗೆ ಕ್ರಯ ಮಾಡಿಕಕೊಟ್ಟು ನಮಗೆ ವಂಚನೆ ಮಾಡಿದ್ದಾರೆ ಆದ್ದರಿಂದ ಈ ಬಗ್ಗೆ ನಾವು ಕಳೆದ 8 ದಿನಳಿಂದ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ ಆದರೆ ಇದುವರೆಗೂ ಯಾರು ನಮಗೆ ಸ್ಪಂದನೆ ನೀಡಿಲ್ಲ ಇಂದು ನಿಮಗೆ ನ್ಯಾಯ ಒದಗಿಸುತ್ತೇವೆ ಎಂದು ಪೋಲೀಸ್ ಅಧಿಕಾರಿಗಳು ಭರವಸೆ ನೀಡಿದ್ದರಿಂದ ನಾವು ಪೋಲೀಸ್ ಠಾಣೆಗೆ ಹೋಗುತ್ತಿದ್ದೇವೆ ಅಲ್ಲಿ ನಮಗೆ ನ್ಯಾಯ ಸಿಕ್ಕರೆ ಧರಣಿ ವಾಪಸ್ ಪಡೆಯಲಾಗುವುದು ಇಲ್ಲವೆಂದರೆ ಧರಣಿಯನ್ನು ಮುಂದುವರೆಸುತ್ತೇವೆ ಎಂದರು.

ಈ ಧರಣಿಯಲ್ಲಿ ಚೌಡಪ್ಪ ಕುಟುಂಬದ ಗಿರಿಜಮ್ಮ, ಗಾಯತ್ರಮ್ಮ, ಸುವರ್ಣ,ಮಮತಾ ಶ್ರೀರಾಮ, ಗಂಗೂಲಿ, ರಮೇಶ್, ಸಂದ್ಯಾ, ಪ್ರಭಾವತಮ್ಮ, ಗಾಯತ್ರಿ, ನಂದಿನಿ, ಪ್ರತಾಪ್, ಗಣೇಶ್ ಸಂದೀಪ್ ಮತ್ತಿತರರು ಇದ್ದರು....

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456