ಬಂಗಾರುತಿರುಪತಿ : ಜ.26 ರಿಂದ ಫೆ.4ರ ವರೆಗೆ ವಾರ್ಷಿಕ ಬ್ರಹ್ಮೋತ್ಸವಗಳು

Jan 16, 2026 - 13:25
 0  99
ಬಂಗಾರುತಿರುಪತಿ : ಜ.26 ರಿಂದ ಫೆ.4ರ ವರೆಗೆ ವಾರ್ಷಿಕ ಬ್ರಹ್ಮೋತ್ಸವಗಳು
•ಚಿತ್ರ ಶೀರ್ಷಿಕೆ: 16ಕೆಜಿಎಫ್01: ಗುಟ್ಟಹಳ್ಳಿ ಬಂಗಾರುತಿರುಪತಿಯ ಶ್ರೀ ಅಲುವೇಲು ಮಂಗಮ್ಮ ಸಮೇತ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಚಿತ್ರಣ

     ಕೆಜಿಎಫ್., ಜ. 16: ಕೆಜಿಎಫ್ ತಾಲ್ಲೂಕು, ಬೇತಮಂಗಲ ಹೋಬಳಿ, ಬಂಗಾರುತಿರುಪತಿ (ಗುಟ್ಟಹಳ್ಳಿ) ಶ್ರೀ ವೆಂಕಟರಮಣ ಸ್ವಾಮಿಯವರ ಮುಜರಾಯಿ ದೇವಾಲಯದ ವಾರ್ಷಿಕ ಬ್ರಹ್ಮೋತ್ಸವಗಳು ಜ.26 ರಿಂದ ಫೆ.4ರ ವರೆಗೆ ನಡೆಯಲಿದೆ.
ಪ್ರತಿ ವರ್ಷದ ಪದ್ದತಿಯಂತೆ ಶ್ರೀ ಅಲುವೇಲು ಮಂಗಮ್ಮ ಸಮೇತ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಾರ್ಷಿಕ ಜಾತ್ರಾ ಬ್ರಹ್ಮೋತ್ಸವಗಳು ಜ.26 ರಂದು ಪ್ರಾರಂಭವಾಗುವುದು. ಪ್ರತಿನಿತ್ಯ ಉತ್ಸವಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು.

ಜ.26 ರಂದು ಸೋಮವಾರ ಅಂಕುರಾರ್ಪಣೆ, ಧ್ವಜಾರೋಹಣೋತ್ಸವ, ಜ.27 ರಂದು ಸಿಂಹವಾಹನೋತ್ಸವ, ಜ.28 ರಂದು ಹನುಮಂತವಾಹನೋತ್ಸವ, ಜ.29 ರಂದು ಶೇಷವಾಹನೋತ್ಸವ, ಜ.30 ರಂದು ಗಜವಾಹನೋತ್ಸವ, ಜ.31 ರಂದು ಗರುಡವಾಹನೋತ್ಸವ, ವಿಶೇಷ ತೆಪ್ಪೋತ್ಸವ, ರಾತ್ರಿ 9 ಗಂಟೆಗೆ ಶ್ರೀ ವೆಂಕಟರಮಣಸ್ವಾಮಿಯವರ ಕಲ್ಯಾಣೋತ್ಸವ, ಫೆ.1 ರಂದು ಭಾನುವಾರ ಬ್ರಹ್ಮರಥೋತ್ಸವ, ಫೆ. 2 ರಂದು ಪಾರ್ವಟೋತ್ಸವ, ಫೆ. 3 ರಂದು ವಸಂತೋತ್ಸವ, ಶಯನೋತ್ಸವ, ಫೆ. 4 ರಂದು ಪುಷ್ಪಯಾನೋತ್ಸವ ನಡೆಯಲಿದೆ.  

ಗುಟ್ಟಹಳ್ಳಿ ಶ್ರೀ ಅಲುವೇಲು ಮಂಗಮ್ಮ ಸಮೇತ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ವಿಶೇಷವಾದ ರೀತಿಯಲ್ಲಿ ಅಲಂಕಾರಿಕ ಉತ್ಸವಗಳನ್ನು ಮತ್ತು ಹಲವು ವಿವಿಧ ರೀತಿಯ ಭಕ್ತರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 ಬಂಗಾರುತಿರುಪತಿ (ಗುಟ್ಟಹಳ್ಳಿ) ಶ್ರೀ ಅಲುವೇಲು ಮಂಗಮ್ಮ ಸಮೇತ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಿ, ಜಾತ್ರೆಯನ್ನು ಯಶಸ್ವಿಗೊಳಿಸಲು ದೇವಾಲಯದ ಪ್ರಕಟಣೆಯಲ್ಲಿ ಕೋರಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456