ಬಿಜಿಎಂಎಲ್ ಕಾರ್ಮಿಕರ ಹತ್ತಿರ ಹಣ ವಸೂಲಿ ಮಾಡಿಲ್ಲ ಕೆ. ರಾಜೇಂದ್ರನ್ ಸ್ಪಷ್ಟನೆ

Jan 9, 2026 - 15:51
 0  4
ಬಿಜಿಎಂಎಲ್ ಕಾರ್ಮಿಕರ ಹತ್ತಿರ ಹಣ ವಸೂಲಿ ಮಾಡಿಲ್ಲ ಕೆ. ರಾಜೇಂದ್ರನ್ ಸ್ಪಷ್ಟನೆ

   ಕೆಜಿಎಫ್: ಬಿಜಿಎಂಎಲ್ ಕಾರ್ಮಿಕರ ಹತ್ತಿರ ಮನೆಗಳನ್ನು ನೀಡುತ್ತೇನೆ ಎಂದು ಹಣವನ್ನು ವಸೂಲಿ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಏನಾದರೂ ಸಾಕ್ಷಿ ಸಮೇತ ಸಾಬೀತುಪಡಿಸಿದರೆ ನಾನು ಜೈಲಿಗೆ ಹೋಗಲು ಸಿದ್ದ ಎಂದು ಜೆಡಿಎಸ್ ಮುಖಂಡ ಕೆ. ರಾಜೇಂದ್ರನ್ ಆಕ್ರೋಶ ಹೊರ ಹಾಕಿದರು. 

ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಕಾರ್ಮಿಕ ಸಂಘಟನೆಗಳು ಬಿಜಿಎಂಎಲ್ ಕಾರ್ಮಿಕರ ಹೆಸರುಗಳನ್ನು ದುರ್ಬಲಕೆ ಮಾಡಿಕೊಂಡು. ನನ್ನ ಮೇಲೆ ಇಲ್ಲ ಸಲದ ಗೂಬೆಗಳನ್ನು ಕೂರಿಸಿದ್ದಾರೆ. ಯಾಕೆಂದರೆ ಅವರಿಗೆ ನಾನು ಕಾರ್ಮಿಕರಿಗೆ ನ್ಯಾಯ ಕೊಡಿಸಲು ಮುಂಚೂಣಿಗೆ ಬಂದಿದ್ದು, ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಮೇಲೆ ಇನ್ನು ಎಷ್ಟೇ ಆರೋಪಗಳು ಮಾಡಲಿ ನಾನು ಇದಕ್ಕೆ ಎದುರುವುದಿಲ್ಲ. ಬಿಜಿಎಂಎಲ್‌ನ ಪ್ರತಿಯೊಬ್ಬರ ಕುಟುಂಬಕ್ಕೂ ಮನೆಗಳನ್ನು ಒದಗಿಸಿ ಕೊಡುವಂತೆ ಶತ ಪ್ರಯತ್ನ ಮಾಡುತ್ತಿದ್ದು, ಇದನ್ನು ನಾನು ಮಾಡುವರೆಗೂ ಬಿಡೋದಿಲ್ಲ. ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಚರ್ಚಿಸಿದ್ದು, ಇದನ್ನೆಲ್ಲಾ ಸಹಿಸದ ಕಾರ್ಮಿಕ ಸಂಘಟನೆಗಳು ವಾಮ ಮಾರ್ಗವಾಗಿ ನನ್ನನ್ನು ಮಟ್ಟ ಹಾಕಲು ತಯಾರಿ ನಡೆಸಿದೆ. ಈಗ ನಾವು ಕಾರ್ಮಿಕ ಕುಟುಂಬಗಳಿಗೆ  ನೀಡಿರುವ ಅಪ್ಲಿಕೇಶನ್ ನಲ್ಲಿ ಮನೆ ವಿಳಾಸ ದೂರವಾಣಿ ಸಂಖ್ಯೆ ಸಹ ಇದೆ ಯಾರಾದರೂ ಇದಕ್ಕೆ ಸಂಪರ್ಕಿಸಿ ಹಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ನೀವೇನೇ ಹೇಳಿದರೂ ನಾನು ಅದಕ್ಕೆ ತಲೆ ಭಾಗವೆ ಎಂದರು.

ಯಾವುದೇ ಒಂದು ಸುದ್ದಿ ಪ್ರಚಾರ ಮಾಡಲು ಸೂಕ್ತವಾದ ದಾಖಲೆಗಳನ್ನು ಸಂಗ್ರಹಿಸಿ ಸುದ್ದಿ ಪ್ರಚಾರ ಮಾಡಬೇಕು ಆಗ ಸುದ್ದಿಗೆ ಪ್ರಾಮುಖ್ಯತೆ ಸಿಗುತ್ತದೆ. ಎಂದರು. 

ಸಹಕಾರಿ ಸಂಘದ ಹೆಸರಿನಲ್ಲಿ ಕೆಲವು ಮುಖಂಡರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು, ನಕಲಿ ಪತ್ರದ ಮೂಲಕ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆ ಪತ್ರದಲ್ಲಿ ಯಾರು ಸಹಿ ಹಾಕಿದ್ದಾರೆ ಅವರ ಉದ್ದೇಶ ಏನು ಇದರ ಬಗ್ಗೆ ನನಗೆ ವಿವರಣೆ ಬೇಕು. ಈ ನಿಟ್ಟಿನಲ್ಲಿ ನಾನು ಎಸ್ಪಿ ರವರಿಗೆ ದೂರು ನೀಡಿದ್ದು ತನಿಖೆ ಮಾಡುವಂತೆ ಮನವಿ ಸಲ್ಲಿಸಿದ್ದು. ನಂತರ ಅವರ ಮೇಲೆ ಕ್ರಮ ಕೈಗೊಳ್ಳಲು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.  

ನಕಲಿ ಮಾಜಿ ಕಾರ್ಮಿಕರ ನೌಕರ ಸಂಘಟನೆಗಳನ್ನು ರಚನೆ ಮಾಡಿಕೊಂಡು. ಕೆಲವೊಂದು ಅಂತರಾಷ್ಟ್ರೀಯ ಮೈನಿಂಗ್. ಕಂಪನಿಗಳ ಹತ್ತಿರ. ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಆ ಮುಖಂಡರ ಮನೆಗಳು. ದೊಡ್ಡ ಬಂಗಲೆಗಳು. ಕಾರುಗಳು. ಹೈಟೆಕ್ ಜೀವನ ನಡೆಸುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬಿಜಿಎಂಎಲ್ ಮಾಜಿ ಕಾರ್ಮಿಕರು. ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಅಂತಹ ಅಮಾಯಕರನ್ನು ನಕಲಿ ಸಂಘಟನೆಗಳನ್ನು ಮಾಡಿಕೊಂಡು ವಂಚಿಸುತ್ತಿದ್ದಾರೆ. 25 ವರ್ಷಗಳಿಂದ ಏನು ಮಾಡಿದ್ದಾರೆಂದು ಆಕ್ರೋಶದಿಂದ ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ. ದಯಾನಂದ್. ಬಲರಾಮ್ .ಚುಡರ್. ಜೋಸೆಫ್. ಗಣೇಶ್. ಪಟ್ಟಾಭಿ ರಾಮನ್. ಮೊದಲಾದವರು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456