ಬೃಹತ್ ರಕ್ತದಾನ ಶಿಬಿರದ ಪ್ರಯುಕ್ತ ಗೂಳೂರು ಗ್ರಾಮದಲ್ಲಿ ಬೈಕ್ ರ್ಯಾಲಿ
ಬಾಗೇಪಲ್ಲಿ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹುಟ್ಟು ಹಬ್ಬದ ಪ್ರಯುಕ್ತ ಗೂಳೂರು ಗ್ರಾಮದಲ್ಲಿ ಬೈಕ್ರ‍್ಯಾಲಿ ನಡೆಸಿ ಕೇಕ್ ಕತ್ತರಿಸಿ ಪಟ್ಟಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್‌ಬಾಬು ಮಾತನಾಡಿ ಶಾಸಕ ಸುಬ್ಬಾರೆಡ್ಡಿ ಅವರು ಸತತ 3ನೇ ಬಾರಿ ಶಾಸಕರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಅವರ ದೂರದೃಷ್ಟಿಯ ಅಭಿವೃದ್ದಿಯಿಂದ ಬಾಗೇಪಲ್ಲಿ ಕ್ಷೇತ್ರಕ್ಕೆ ಅತೀ ಶೀಘ್ರದಲ್ಲೇ ಎಲ್ಲಾ ಕೆರೆಗಳಿಗೂ ನೀರು ಹರಿಯಲಿದೆ ಹಾಗೆಯೇ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಬೃಹತ್ ಕೈಗಾರಿಕೆ ನಿರ್ಮಾಣ ಮಾಡಲಿದ್ದಾರೆ ಆದ್ದರಿಂದ ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ದಿ ಕೆಲಸಗಳು ನಡೆಯಲಿ ಎಂದು ಅವರ ಹುಟ್ಟು ಹಬ್ಬದಂದು ನೂರಾರು ಮುಖಂಡರು ಬೈಕ್ರ‍್ಯಾಲಿ ನಡೆಸಿ ಬಾಗೇಪಲ್ಲಿ ಪಟ್ಟಣದಲ್ಲಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಎಸ್.ಜಿ.ಶಂಕರನಾಯ್ಕ್, ಸೊಸೈಟಿ ಅಧ್ಯಕ್ಷ ಸಿ.ಎನ್.ಬಾಬುರೆಡ್ಡಿ, ಡೇರಿ ಅಧ್ಯಕ್ಷ ಟಿ.ನರಸಿಂಹಪ್ಪ, ಗ್ರಾಪಂ ಸದಸ್ಯರಾದ ಆದಿನಾರಾಯಣ, ಸೀಮಾವಲು ಕೃಷ್ಣಪ್ಪ, ವೆಂಕಟರಾಮನಾಯ್ಕ್, ವೆಂಕಟರಾಯಪ್ಪ, ಮಾಜಿ ಅಧ್ಯಕ್ಷ ಮುನ್ನಾಖಾನ್ ಮುಖಂಡರಾದ ಯಶ್ವಂತ್, ನಾಗು, ವೀರನಾರಾಯಣ, ಗೂಳೂರು ಬಾಬು, ಬಾಬು, ಸೂರಿ, ಶ್ರೀರಾಮರೆಡ್ಡಿ, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
