ಭಾರತೀಯ ಜನತಾ ಪಾರ್ಟಿಯ ಮಹಿಳಾ ಘಟಕದ ವತಿಯಿಂದ ಕೆ ಆರ್ ಸರ್ಕಲ್ ನಲ್ಲಿ ಪ್ರತಿಭಟನೆ
ಚನ್ನರಾಯಪಟ್ಟಣ: ಶ್ರವಣಬೆಳಗೊಳ ಮಂಡಲ ಭಾರತೀಯ ಜನತಾ ಪಾರ್ಟಿಯ ಮಹಿಳಾ ಘಟಕದ ವತಿಯಿಂದ ಶೇ 33% ಮಹಿಳಾ ಮೀಸಲಾತಿ ಕಾಯ್ದೆಯನ್ನು ವಿರೋಧಿಸಿದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಮಹಿಳಾ ವಿರೋಧಿ ನಡೆಯನ್ನು ಖಂಡಿಸಿ ಚನ್ನರಾಯಪಟ್ಟಣದ ನಗರದ ಕೆ ಆರ್ ಸರ್ಕಲ್ ನಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಬಿಜೆಪಿ ಶ್ರವಣಬೆಳಗೊಳ ಮಂಡಳದ ಅಧ್ಯಕ್ಷರಾದ ಪರಮ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಗನ್ನಿ ವಿಶ್ವನಾಥ್ ಜಿ ಆರ್, ಈ ಸಂಧರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳಾದ ಶ್ರುತಿಗಿರೀಶ್, ಅರ್ಪಿತಾ ಪಟೇಲ್, ಕಲಾವತಿ, ಭವಾನಿ, ಶೋಭ, ತಾಲೋಕು ಬಿಜೆಪಿ ಉಪಾಧ್ಯಕ್ಷರುಗಳಾದ ಅಶೋಕ್ ಶೆಟ್ಟಿಹಳ್ಳಿ, ಸತೀಶ್ ಗೌಡಗೆರೆ, ವೆಂಕಟೇಶಚಾರ್, ಶ್ರೀಹರಿಗೌಡ, ಮಂಜುನಾಥ್ ನಿಂಬೆಹಳ್ಳಿ,ಹಿರಿಯ ಬಿಜೆಪಿ ಮುಖಂಡರುಗಳಾದ ನಂಜುಂಡ ಮೈಮ್, ಎ ಆರ್ ನಾಗರಾಜ್, ಬಿಜೆಪಿ ಯುವ ಮುಖಂಡರಾದ ವೈ ಈ ಶರತ್ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
