ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ಗೆ 3ನೇ ಸಂಸ್ಥಾಪನಾ ದಿನ

Feb 25, 2026 - 15:47
Feb 25, 2026 - 16:15
 0  63
ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ಗೆ 3ನೇ ಸಂಸ್ಥಾಪನಾ ದಿನ

ಬೆಂಗಳೂರು : ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) ವತಿಯಿಂದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಮಂಗಳವಾರ ಬೆಂಗಳೂರಿನ *ಜೆ.ಪಿ. ನಗರದ 7ನೇ ಹಂತದ ಕೊತ್ತನೂರು ದಿಣ್ಣೆಯಲ್ಲಿರುವ 'ಗಾಯತ್ರಿ ತಪೋವನ'*ದಲ್ಲಿ ಅರ್ಥಪೂರ್ಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆ:

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖರಿಂದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ವೇದಿಕೆಯ ಮೇಲೆ ಪವಿತ್ರ ವೇದೋಕ್ತ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮದಲ್ಲಿ, ಸಂಘಟನೆಗಾಗಿ ಶ್ರಮಿಸಿ, ಅಗಲಿದ ನಾಯಕರಿಗೆ ಮೌನ ಆಚರಣೆಯ ಮೂಲಕ ಗೌರವವನ್ನು ಸಲ್ಲಿಸಲಾಯಿತು. ಶಿಸ್ತಿನಿಂದ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದೇಶಪ್ರೇಮದ ಸಂದೇಶವ ಸಾರಲಾಯಿತು.

  ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಮಾತ್ರವಲ್ಲದೆ, ನಮ್ಮ ದೇಶದ ಆಂಧ್ರ ಪ್ರದೇಶ, ತಮಿಳುನಾಡು, ಮಧ್ಯ ಪ್ರದೇಶ ಹಾಗೂ ಇತರೆ ರಾಜ್ಯಗಳಿಂದಲೂ ಆಗಮಿಸಿದ್ದ ಆಹ್ವಾನಿತರು ಹಾಗೂ ಸಭಿಕರನ್ನು ಉದ್ದೇಶಿಸಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಂ.ಬಿ. ಅನಂತಮೂರ್ತಿರವರು ಮಾತನಾಡುತ್ತಾ,

ಕಳೆದ 14 ವರ್ಷಗಳ ಹೋರಾಟದ ಹಾದಿಯನ್ನು ಸ್ಮರಿಸಿ, ಪ್ರಸ್ತುತ ಸರ್ಕಾರವು ಪುರೋಹಿತ ವರ್ಗವನ್ನು ಗುರುತಿಸಿ ಲೇಬರ್ ಕಾರ್ಡ್ ನೀಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಜೊತೆಗೆ, ಸರ್ಕಾರವು ಇನ್ನೂ ಹೆಚ್ಚಿನ ಅನುದಾನಗಳನ್ನು ಈ ವರ್ಗಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

 ಇದೇ ವೇಳೆ ರಾಷ್ಟ್ರೀಯ ಯುವ ನಾಯಕ ಶ್ರೀ ಶಶಾಂಕ್ ಶರ್ಮ ಮಾತನಾಡಿ,

"ಸಂಘಟನೆಯ ಯುವಶಕ್ತಿಯೇ ನಮ್ಮ ಭವಿಷ್ಯ. ಇಂದು ಅಸಂಘಟಿತ ವಲಯದ ಪುರೋಹಿತರಿಗೆ ಮತ್ತು ಅಡುಗೆ ಕಾರ್ಮಿಕರಿಗೆ ಡಿಜಿಟಲ್ ಯುಗದ ಸೌಲಭ್ಯಗಳು ಸಿಗುವಂತೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇ-ಶ್ರಮ್ ಮತ್ತು ಲೇಬರ್ ಕಾರ್ಡ್‌ಗಳ ಮಹತ್ವವನ್ನು ಪ್ರತಿ ಹಳ್ಳಿಯ ಪುರೋಹಿತರಿಗೂ ತಲುಪಿಸಿ, ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ನಾವು ಶ್ರಮಿಸುತ್ತಿದ್ದೇವೆ. ಯುವ ಪುರೋಹಿತರು ಕೇವಲ ಧಾರ್ಮಿಕ ವಿಧಿಗಳಿಗಷ್ಟೇ ಸೀಮಿತವಾಗದೆ, ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಮುಂದೆ ಬರಬೇಕು," ಎಂದು ಕರೆ ನೀಡಿದರು.

"ನಮ್ಮ ಫೆಡರೇಶನ್ ಇಂದು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ, ದಕ್ಷಿಣ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಪುರೋಹಿತ ಮತ್ತು ಅಡುಗೆ ಕಾರ್ಮಿಕ ವರ್ಗವು ಸಮಾಜದ ಬೆನ್ನೆಲುಬು. ಮುಂಬರುವ ದಿನಗಳಲ್ಲಿ ಎಲ್ಲಾ ಸದಸ್ಯರಿಗೂ ಆರೋಗ್ಯ ವಿಮೆ ಮತ್ತು ರಿಯಾಯಿತಿ ದರದ ಚಿಕಿತ್ಸಾ ಸೌಲಭ್ಯಗಳು ಸಿಗುವಂತೆ ಆಸ್ಪತ್ರೆಗಳೊಂದಿಗೆ ಹೆಚ್ಚಿನ ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು", ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಬಿ.ಎನ್. ಮಹೇಶ್ ಕುಮಾರ್ ವಿವರಿಸಿದರು.

  ಇದೇ ಸಂದರ್ಭದಲ್ಲಿ ಫೆಡರೇಶನ್ ವತಿಯಿಂದ

ರಕ್ತದಾನ ಶಿಬಿರ, ನೇತ್ರ ತಪಾಸಣೆ ಮತ್ತು ಫಿಸಿಯೋಥೆರಪಿ ಕ್ಯಾಂಪ್ ಜೊತೆಗೆ ರಕ್ತ ಪರೀಕ್ಷೆಗೂ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಅಡುಗೆ ಕಾರ್ಮಿಕರಿಗೆ ಮತ್ತು ಪುರೋಹಿತರಿಗೆ ವಿಶೇಷ ಸಬ್ಸಿಡಿ ದರದ ರಿವಿಲೈಜ್ ಕಾರ್ಡ್ಗಳನ್ನು ಸಹ ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ರಾಜ್ಯಗಳ ಪದಾಧಿಕಾರಿಗಳು, ವೈದ್ಯಕೀಯ ವರ್ಗ, ಕಾನೂನು ಸಲಹೆಗಾರರು ಮತ್ತು ಮಾಧ್ಯಮ ಮಿತ್ರರಿಗೆ ಸಂಘಟನೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

   ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) ನ ಮಾಧ್ಯಮ ಮತ್ತು ಪ್ರಚಾರ ವಿಭಾಗದವರು, ಗೋವರ್ಧನ ಪಣಿರವರ ಮಾರ್ಗದರ್ಶನದಲ್ಲಿ ಶ್ರಮವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456