"ಭಾವ ಝೇಂಕಾರ" ಕೃತಿ ಬಿಡುಗಡೆ
ಬೆಂಗಳೂರು ದಕ್ಷಿಣ ಜಿಲ್ಲೆ, ಕನಕಪುರದಲ್ಲಿನ ರಂಗನಾಥ ಬಡಾವಣೆಯಲ್ಲಿರುವ "ಹೊಂಗಿರಣ" ಸಭಾಂಗಣದಲ್ಲಿ ಜಿಲ್ಲಾಮಟ್ಟದ ಸಂಕ್ರಾಂತಿ ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಡಾ. ಕೂ. ಗಿ. ಗಿರಿಯಪ್ಪನವರು ಸಂಗ್ರಹಿಸಿದ ಕನ್ನಡದ ಖ್ಯಾತ ಕವಿಗಳ ಜನಪ್ರಿಯ ಕವಿತೆಗಳ "ಭಾವ ಝೇಂಕಾರ" ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕನಕಪುರ ತಾಲೂಕಿನ ಪ್ರಗತಿಪರ ಸಂಘಟನೆಗಳ ಅಧ್ಯಕ್ಷರಾದ ಕುಮಾರಸ್ವಾಮಿಯವರು, ಲೇಖಕರಾದ ಡಾ. ಎಚ್. ತುಕರಾಂರವರು, ಗಾಯಕರಾದ ಕಾಕೋಳು ಶೈಲೇಶ್, ಕವಿ ತೋಟದಮನೆ ಗಿರೀಶ್, ವಚನಸಾಹಿತ್ಯ ಅಕಾಡೆಮಿಯ ರಾಜ್ಯಾಧ್ಯಕ್ಷರಾದ ಎಲ್ಲೇಗೌಡ ಬೆಸಗರಹಳ್ಳಿ, ರೈತ ಸಂಘದ ರಾಜ್ಯ ಸಂಚಾಲಕರಾದ ಚೀಲೂರು ಮುನಿರಾಜು, ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ನಮನ ಎಂ ಚಂದ್ರು, ಜಾನಪದ ಗಾಯಕರಾದ ಚಿಕ್ಕಮರಿಗೌಡ, ಅಧ್ಯಾಪಕರಾದ ವಿ.ಎಚ್. ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
