ಮಕ್ಕಳು ಆಹಾರ ವಿಚಾರದಲ್ಲಿ ಎಚ್ಚರ ವಹಿಸಿ-ತಾಲ್ಲೂಕು ಅರೋಗ್ಯ ಆಡಳಿತಧಿಕಾರಿ-ಡಾ! ಸತ್ಯನಾರಾಯಣ ರೆಡ್ಡಿ

May 6, 2025 - 11:44
 0  7
ಮಕ್ಕಳು ಆಹಾರ ವಿಚಾರದಲ್ಲಿ ಎಚ್ಚರ ವಹಿಸಿ-ತಾಲ್ಲೂಕು ಅರೋಗ್ಯ ಆಡಳಿತಧಿಕಾರಿ-ಡಾ! ಸತ್ಯನಾರಾಯಣ ರೆಡ್ಡಿ

ಬಾಗೇಪಲ್ಲಿ: ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ತಯಾರು  ಮಾಡುವಾಗ ಅಡುಗೆ ತಯಾರಿಕರು ಶುಚಿತ್ವಕ್ಕೆ ಹೆಚ್ಚು ಅದ್ಯತೆ ನೀಡಬೇಕೆಂದು ಹಾಗೂ ಆಹಾರ ವಿಚಾರದಲ್ಲಿ ಮಕ್ಕಳು ಎಚ್ಚರ ವಹಿಸಬೇಕು ಎಂದು ತಾಲ್ಲೂಕು ಅರೋಗ್ಯ ಆಡಳಿತಧಿಕಾರಿ-ಡಾ! ಸತ್ಯನಾರಾಯಣ ರೆಡ್ಡಿ ತಿಳಿಸಿದರು.

ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  ದೇವರಾಜು ಅರಸು ಭವನದಲ್ಲಿ ಜಿಪಂ,ತಾಪA ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ   ಅಡುಗೆ ತಯಾರಿಕಗರಿಗೆ ಏರ್ಪಡಿಸಿದ್ದ ಪುನಶ್ವೇತನ ಕಾರ್ಯಾಗಾರವನ್ನು ಉದ್ಟಾಟಿಸಿ ಮಾತನಾಡಿ ಅಡುಗೆ ತಯಾರಕರು ಪಾಕ ಶಾಲೆಗೆ ಬರುವ ಮೊದಲು ಸ್ನಾನ ಮಾಡಿ ಬಂದಿರಬೇಕು ಮಕ್ಕಳು ತಿನ್ನುವ ಊಟದಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು ತರಕಾರಿ ಚನ್ನಾಗಿ ನೀರಿನಲ್ಲಿ ತೊಳೆದು ಸಾಂಬರ್‌ಗೆ ಬಳಸಬೇಕು ಕೊಳೆತ ತರಕಾರಿ ಬಳಸಬಾರದು ಕೊಳತ ತರಕಾರಿ ಬಳಸಿದರೆ ಮಕ್ಕಳ ಅರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಅಡುಗೆ ತಯಾರು ಮಾಡುವಾಗ ತಯಾರಕರು ಕಡ್ಡಾಯವಾಗಿ ಕೈಗಳಿಗೆ ಗ್ಲೌಸ್ ಧರಿಸಿರಬೇಕು ಅಡುಗೆ ಕೊಣೆಯಲ್ಲಿ ಜಿರಳೆ,ಹಲ್ಲಿ ಮತ್ತು ಮತ್ತಿತರ ನೊಣಗಳು ಹರಿದಾಡದಂತೆ ನೋಡಿಕೊಳ್ಳಬೇಕು ಇಲ್ಲದಿದ್ದಲ್ಲಿ ಅಹಾರವನ್ನು ಹಾಳು ಮಾಡುತ್ತದೆ.

ಅನ್ನ ಮಾಡುವಾಗ ಅಕ್ಕಿಯನ್ನು ಚನ್ನಾಗಿ ನೀರಿನಲ್ಲಿ ತೊಳೆದು ಅನ್ನ ಮಾಡಬೇಕು,ಅತಿ ಹೆಚ್ಚು ಮಾಗಿದ ಹಣ್ಣು ಮತ್ತು ತರಕಾರಿಗಳನ್ನು ಬಳಸಬಾರದು ಬಿಸಿ ಊಟ ತಯಾರು ಮಾಡುವಾಗ ಮಕ್ಕಳನ್ನು ಪಾತ್ರೆಗಳ ಹತ್ತಿರಕ್ಕೆ ಸೇರಿಸಬೇಡಿ ಏಕೆಂದರೆ ರಾಜ್ಯದಲ್ಲಿ ಅನೇಕ ಸಂದರ್ಭದಲ್ಲಿ ಸಾಂಬರ್ ಪಾತ್ರೆಗಳಿಗೆ ಮಕ್ಕಳು  ಬಿದ್ದು ಮೃತಪಟ್ಟಿರುವ ಘಟನೆಗಳು ನಡೆದಿವೆ.ಸಾಂಬರ್‌ಗೆ  ಬೇಳೆ,ತರಕಾರಿ ಹಾಗೂ ಸರಕಾರಿ ಮಾನದಂಡ ಪ್ರಕಾರ ಸಾಂಬರ್ ಪದಾರ್ಥಗಳನ್ನು ಬಳಕೆ ಮಾಡಿ ತಯಾರಿಬೇಕಾಗಿದೆ ಏಕೆಂದರೆ ಮಕ್ಕಳು ಬೆಳಗ್ಗೆ ತಿಂಡಿ ಸೇವನೆ ಮಾಡಿ ಶಾಲೆಗಳಿಗೆ ಹೋಗಿರುತ್ತಾರೆ ಮಧ್ಯಾಹ್ನ ಹಾಸ್ಟೆಲ್ ಬಂದಾಗ ಉತ್ತಮ ಊಟ ಬಡಿಸಬೇಕಾಗಿರುವುದು ಅಡುಗೆಯವರ ಕರ್ತವ್ಯ ಮಕ್ಕಳಿಗೆ ಶುದ್ದ  ಕುಡಿಯುವ ನೀರು ಕಡ್ಡಾಯವಾಗಿ ನೀಡಬೇಕಾಗಿದೆ ಅಡುಗೆ ಯಾವುದಾದರೂ ಸಮಸ್ಯೆಗಳು ಉಂಟಾಗುದು ಕಂಡು ಬಂದರೆ  ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮನಿಷಾ ಎಸ್.ಪತ್ರಿ,ಶಿಕ್ಷಣ ಇಲಾಖೆಯ ಬಿಆರ್‌ಸಿ ಆರ್.ವೆಂಕಟರಾಮಪ್ಪ,ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಕೆ.ವಿ.ಮುನಿರತ್ನಮ್ಮ,ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಆರ್.ಶಿವಪ್ಪ,ಜಿಲ್ಲಾ ವಿವಿಧ ತಾಲೂಕುಗಳ   ವಿಸ್ತರಣಾಧಿಕಾರಿಗಳಾದ ಕುಸುಮಾ ಭಟ್,ವನಜಾಕ್ಷಿ,ಎನ್.ಶಂಕರ್,ಸಕ್ಪಾಲ್,ಸAಗಪ್ಪ ಹಾಗೂ ವಾರ್ಡ್ನಗಳಾದ ಎಸ್.ವೆಂಕಟೇಶ್,ಬಿ.ಎಸ್.ಕವಿತ,ರತ್ನಮಾಲಾ,ಎo.ಸಿ.ನರಸಿoಹಪ್ಪ,ಶೇಕ್ ಕಾದರ್‌ಸಾಬ್,ಮಂಜುನಾಥ್ ಮತ್ತಿತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456