ಮಹಾಯೋಗಿ ವೇಮನ ರವರ ತತ್ವಗಳನ್ನು ನಾವು ಮೈಗೂಡಿಸಿಕೊಳ್ಳಬೇಕು: ಶಾಸಕಿ ರೂಪಕಲಾ ಅಭಿಮತ
ಕೆಜಿಎಫ್: ಮಹಾ ಯೋಗಿ ವೇಮನ ರವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಅವರ ದಾರಿಯಲ್ಲಿ ನಡೆದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಕೆಜಿಎಫ್ ತಾಲೂಕ್ ಕಚೇರಿಯಲ್ಲಿ ರಾಷ್ಟ್ರೀಯ ನಾಡ ಹಬ್ಬದ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕಿ ರೂಪ ಕಲಾ ಶಶಿಧರ್.
ನಾವು ಏನೇ ಒಂದು ಕಾರ್ಯ ಮಾಡುವಾಗ ನಮಗೆ ಸಹಾಯ ಮಾಡಿರುತ್ತಾರೆ ಅಂತವರನ್ನು ನಾವು ಎಂದಿಗೂ ಮರೆಯಬಾರದು. ಕ್ಷೇತ್ರದಲ್ಲಿ ನನ್ನನ್ನು ಹದಿನೈದು ವರ್ಷಗಳಿಂದ ಸಮುದಾಯದ ಮುಖಂಡರು ಕೆಲವು ಸಲಹೆ ಸೂಚನೆಗಳನ್ನು ನೀಡಿ ನನ್ನನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಅವರ ಸೇವೆಯನ್ನು ಎಂದಿಗೂ ಮರೆಯೋದಿಲ್ಲ ಸಮಾಜದ ಮುಖಂಡರಿಗೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ.
ನೀವು ಏನು ಬೇಡಿಕೆಗಳನ್ನು ಇಟ್ಟಿದ್ದೀರಿ ಅದರಲ್ಲಿ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಕೆ ಸಿ ರೆಡ್ಡಿ ರವರ ಸ್ಮಾರಕ ನಿರ್ಮಾಣ ಮಾಡುವುದು ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯ ಇದನ್ನು ನಾನು ಮಾಡೇ ಮಾಡುತ್ತೇನೆ. ನನ್ನ ಮೇಲೆ ಏನೇ ಆರೋಪ ಬಂದರು ಸಹಿಸಿಕೊಳ್ಳುತ್ತೇನೆ. ಮಾತಿನಲ್ಲಿ ಮಾಡದೆ ಕೆಲಸದಲ್ಲಿ ಮಾಡಿ ತೋರಿಸುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.
ರಾಜ್ಯ ರೆಡ್ಡಿ ಜನ ಸಂಘದ ತಾಲೂಕು ಅಧ್ಯಕ್ಷರು. ವಿ .ಪ್ರಸನ್ನ ರೆಡ್ಡಿ ಮಾತನಾಡಿ ನಮ್ಮ ಸಮುದಾಯವನ್ನು ರಾಜಕೀಯವಾಗಿ ಆರ್ಥಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಪಂಚಾಯತಿಯ ವ್ಯಾಪ್ತಿಯಲ್ಲಿ ಸಂಘಟನೆಯನ್ನು ಬಲಪಡಿಸಿಕೊಂಡು ತಾಲೂಕು ಮಟ್ಟ ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಮ್ಮ ರೆಡ್ಡಿಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಕಲ್ಪಿಸಿ ಕೊಡುವುದೇ ನನ್ನ ಉದ್ದೇಶ. ಇದಕ್ಕೆ ಪ್ರತಿಯೊಬ್ಬ ನಮ್ಮ ಸಮುದಾಯದ ನಾಯಕರ ಬೆಂಬಲ ಬೇಕು ಎಂದು ಸಭೆಯಲ್ಲಿ ಕೋರಿದರು.
ಸಮುದಾಯದ ಹಿರಿಯ ಮುಖಂಡರು ವೆಂಕಣ್ಣ ಮಾತನಾಡಿ ವೇಮನ ಹಾಗೂ ಮಲ್ಲಮಾರನ್ನು ನಮ್ಮ ಸಮುದಾಯದ ಮುಖಂಡರು ಎಂದಿಗೂ ಮರೆಯಬಾರದು ಅವರ ಜಯಂತಿಗಳನ್ನು ಅದ್ದೂರಿಯಾಗಿ ಮಾಡಿಕೊಂಡು ಬರಬೇಕು. ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿಜಯ ರಾಘವ ರೆಡ್ಡಿ ಮಾತನಾಡಿದರು. ತಹಶೀಲ್ದಾರ್. ಎಚ . ಜೆ. ಭರತ್. ನಗರಸಭೆ ಪೌರಾಯುಕ್ತರು. ವಿ. ಶ್ರೀಧರ್. ಕೂಡ ಆಯುಕ್ತರು. ಧರ್ಮೇಂದ್ರ.ಇ ಓ. ವೆಂಕಟೇಶಪ್ಪ. ಸಿಡಿಪಿಓ. ರಾಜೇಶ್. ಪಿಡಬ್ಲ್ಯೂ ಇಲಾಖೆ ಅಧಿಕಾರಿ ರಾಜಶೇಖರನ್. ರೆಡ್ಡಿ ಸಮುದಾಯದ ಮುಖಂಡರಾದ ಪದ್ಮನಾಭ ರೆಡ್ಡಿ. ಅಪ್ಪಿ ರೆಡ್ಡಿ. ರಾಧಾಕೃಷ್ಣ ರೆಡ್ಡಿ. ರವಿ ರೆಡ್ಡಿ. ಭಾಸ್ಕರ್ ರೆಡ್ಡಿ. ನಾರಾಯಣ ರೆಡ್ಡಿ. ರಾಮಕೃಷ್ಣ ರೆಡ್ಡಿ. ಇನ್ನು ಹಲವಾರು ಹಿರಿಯ ಮುಖಂಡರು ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
