ಮಾನವೀಯತೆಗಿಂತ ಅವಕಾಶ ಮುಖ್ಯ ತಾಳಿಕೋಟಿಮಠ

Dec 3, 2025 - 20:11
 0  21
ಮಾನವೀಯತೆಗಿಂತ ಅವಕಾಶ ಮುಖ್ಯ ತಾಳಿಕೋಟಿಮಠ

ನವಲಗುಂದ: ಪ್ರತಿಯೊಂದು ಕ್ಷೇತ್ರದಲ್ಲಿ ವಿಕಲಚೇತನರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಮಾನವೀಯತೆಗಿಂತ ಅವಕಾಶಗಳು ತುರ್ತು ಅಗತ್ಯವಾಗಿವೆ. ಸರಕಾರದ ಸರ್ವ ಸೌಲಭ್ಯಗಳನ್ನು ವಿಕಲಚೇತನ ಮಕ್ಕಳಿಗೆ ಒದಗಿಸಿ ಕೊಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ ವಾಗಿದೆ. ಅಂಗವಿಕಲತೆ ಶಾಪವಲ್ಲ- ಅದು ವರವಾಗಿದೆ. ಸಮಾಜದಲ್ಲಿ ಅಂಗವಿಕಲತೆಯನ್ನು ಹೀಯಾಳಿಸುವುದು ನಿಲ್ಲಬೇಕಾಗಿದೆ, ಎಂದು ತಾಲೂಕ ವಿಕಲಚೇತನ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಿಲಯ್ಯ ಎಸ್. ತಾಳಿಕೋಟಿಮಠ ಕರೆ ನೀಡಿದರು.

 ಸ್ಥಳೀಯ ಸರಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಅಂಗವಿಕಲರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ತಾಳಿಕೋಟಿಮಠ ಮಾತನಾಡಿದರು.

        ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಧಾನ ಗುರುಗಳಾದ ಡಾ. ಸಿದ್ಧಲಿಂಗೇಶ ಎಸ್ ಹಂಡಿಗಿ ಮಾತನಾಡಿ, ವಿಕಲಚೇತನರಲ್ಲಿ ಸುಪ್ತವಾಗಿ ಅಡಗಿರುವ ಸಾಮರ್ಥ್ಯವನ್ನು ಗುರುತಿಸಿ, ಅವಕಾಶಗಳನ್ನು ಒದಗಿಸುವುದು ಹಾಗೂ ಸಮಾಜದಲ್ಲಿ ಅವರಿಗೂ ಸಮಾನ ಗೌರವ ಕೊಡುವುದು ಅಗತ್ಯವಾಗಿದೆ ಎಂದರು 

          ಶಿಕ್ಷಕರಾದ ಡಿ ಎಚ್ ಮಳಲಿ,ಆರ್ ಎಸ್ ಕಲ್ಲೂರ, ಶ್ರೀನಿವಾಸ ನವೀಂದ್ರಕರ, ಜಯಶ್ರೀ ಹೊಸಮಠ ಹಸೀನಮಾ ಬೈರೆಕದಾರ ಅತಿಥಿಗಳಾಗಿದ್ದರು. ಲಕ್ಷ್ಮಿ ವಾಲೀಕಾರ, ಉಡಚಮ್ಮ ಬೋವಿ, ಶಶಿಕಲಾ ಸವಣೂರ,ಮಲ್ಲಮ್ಮ ಭೋವಿ,ದೇವಕ್ಕ ಮುರುಡಿ, ರೇಣುಕಾ ಸಂಭನವರ,ಬಸಮ್ಮ ಗುತ್ತೆಪ್ಪನವರ, ಪಾರವ್ವ ಯಾವಗಲ್ಲ ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456