"ಮೇಲುಕೋಟೆ ಕ್ಷೇತ್ರದ ಗಾಣದಾಳು ಹಾಗೂ ಚಂದಗಾಲು ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ"
ಮಂಡ್ಯ ತಾಲೂಕು ಗಾಣದಾಳು ಗ್ರಾಮದಲ್ಲಿ ಇಂದು ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 5 ಕೋಟಿ ರೂಗಳ ವೆಚ್ಚದಲ್ಲಿ ವಿ.ಸಿ.ಫಾರಂ ಗೇಟ್ ಇಂದ ಗಾಣದಾಳು ಮಾರ್ಗವಾಗಿ ಗಾಣದಾಳು ಗ್ರಾಮದಿಂದ ಚಂದಗಾಲು ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಗುದ್ದಲಿ
ಪೂಜೆ ನೆರವೇರಿಸಿದರು.
ನಂತರ ಮಾತನಾಡುತ್ತಾ ಸುಮಾರು ವರ್ಷಗಳಿಂದ ಈ ರಸ್ತೆ ಹಾಳಾಗಿದ್ದು ಈ ದಿನ ಯೋಗ ಕೂಡಿ ಬಂದಿದೆ ಆದ್ದರಿಂದ ಗಾಣದಾಳು ಗ್ರಾಮದಿಂದ ಚಂದಗಾಲು ಗ್ರಾಮದವರೆಗೆ ಮುಖ್ಯರಸ್ತೆ ಹೊರತುಪಡಿಸಿ ಗ್ರಾಮಗಳ ಒಳಗೆ ಕಾಂಕ್ರೀಟ್ ರಸ್ತೆ ಚಂದಗಾಲು ಕಾಲುವೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಾಡುತ್ತಿದ್ದೇವೆ.
ಗ್ರಾಮಸ್ಥರಿಗೆ ಹಾಗೂ ಎಲ್ಲರಿಗೂ ಅನುಕೂಲವಾಗಲಿದೆ. ಒಳ್ಳೆಯದಾಗಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ
ಗಾಣದಾಳು ಗ್ರಾಮದ ಮುಖಂಡರಾದ ಯಜಮಾನ್ ಶಿವರಾಮ್, ಯಜಮಾನಚಂದ್ರು,
ವಿಜಿಕುಮಾರ್, ಕೃಷ್ಣೇಗೌಡ ನಂದೀಶ್ ಮತ್ತು ಚಂದನ್,
ಚಂದಗಾಲು ಗ್ರಾಮದ ಮುಖಂಡರಾದ ಸಿ.ಕೆ.ನಾಗರಾಜ್ ಚಂದ್ರಶೇಖರ್ ಸಿ ಕೆ
ಸಿ.ಜೆ.ಸಿದ್ದರಾಜು, ಜೋಗಿಗೌಡ, ಆನಂದ್ , ಉಮೇಶ್, ರಾಜೇಶ್, ಪುಟ್ಟಸ್ವಾಮಿ,
ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್,
ಸಹಾಯಕ ಇಂಜಿನಿಯರ್ ಜಗದೀಶ್,
ಗುತ್ತಿಗೆದಾರರಾದ ಅರವಿಂದ್ ಕುಮಾರ್, ಹಾಗೂ ಗ್ರಾಮಸ್ಥರು ರೈತ ಸಂಘದ ಮುಖಂಡರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
