ಮೇ 27ರಂದು ಹಾಸನದಲ್ಲಿ ಪ್ರತಿಭಟನೆ ಎಚ್ಎಸ್ ಮಂಜುನಾಥ್
ಚನ್ನರಾಯಪಟ್ಟಣ: ಪಟ್ಟಣದ ತಾಲೂಕು ಕಚೇರಿ ಮುಂಬಾಗ 13 ದಿನಗಳ ಕಾಲ ತಾಲೂಕು ತಹಶೀಲ್ದಾರ್ ಹಾಗೂ ಇತರ ಇಲಾಖೆಗಳ ಭ್ರಷ್ಟಾಚಾರ ಖಂಡಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು. ತಾಲೂಕು ಕಚೇರಿ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದರು.
ಇದೀಗ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಮೇ 27ರ ಮಂಗಳವಾರದಂದು ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಒಂದು ದಿನದ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಭ್ರಷ್ಟಾಚಾರ ವಿರೋಧ ಆಂದೋಲನ ವೇದಿಕೆ ಸಂಚಾಲಕ ಹೆಚ್ ಎಸ್ ಮಂಜುನಾಥ್ ಹೇಳಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂಕು ತಹಸಿಲ್ದಾರ್ ಭ್ರಷ್ಟ ಅಧಿಕಾರಿಯಾಗಿದ್ದು, ಭ್ರಷ್ಟರಿಗೆ ತಾಲೂಕು ಹುಲ್ಲುಗಾವಲಾಗಿದೆ, ತಾಲೂಕಿನ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಅದನ್ನು ತಡೆಗಟ್ಟುವುದು ನಮ್ಮ ಉದ್ದೇಶವಾಗಿದೆ, ತಾಲೂಕಿನ ಆಡಳಿತ ನಡೆಸುವೆ ತಹಶೀಲ್ದಾರ್ ಕೆ.ಎ.ಎಸ್. ಅಧಿಕಾರಿಯೇ ಹೀಗಾದರೆ ಹೇಗೆ? ಕಾರ್ಯಂಗ ನಡೆದರೆ ಭ್ರಷ್ಟಾಚಾರವನ್ನು ಶಾಸಕಾಂಗ ತಡೆಯಬೇಕು. ರಾಜ್ಯ ಕಂದಾಯ ಸಚಿವರಿಗೆ, ಜಿಲ್ಲಾ ಉಸುವಾರಿ ಸಚಿವರಿಗೆ, ಸಂಸದರಿಗೆ ಶಾಸಕರಿಗೆ ಪತ್ರ ನೀಡಿದೆ. ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿದ್ದು, ಅವರ ಕ್ರಮದ ಬಗ್ಗೆ ನಿರೀಕ್ಷಣೆಯಲ್ಲಿದ್ದೇವೆ, ಉಪವಿಭಾಗಾಧಿಕಾರಿ “ಮಾರುತಿ ಮಹಾಭ್ರಷ್ಟ ಅಧಿಕಾರಿಯಾಗಿದ್ದಾರೆ. ನಮ್ಮ ಪ್ರತಿಭಟನೆಯನ್ನ ಹೆಚ್ಚಿಸುವ ಕಾರ್ಯ ನಡೆಯಿತು, 30 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ, ಭ್ರಷ್ಟಾಚಾರವನ್ನು ಹಂತ ಹಂತವಾಗಿ ಕಡಿಮೆ ಮಾಡುವ ಕಾರ್ಯ ನಮ್ಮದಾಗಿದೆ. ಮಿತಿ ಮೀರಿದ ಭ್ರಷ್ಟಾಚಾರ ನಡೆಯುತ್ತಿದ್ದು ಮುಂದಿನ ಪೀಳಿಗೆ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿ, ಸಮಾಜದಲ್ಲಿ ವ್ಯವಸ್ಥೆ ಬದಲಾಗಬೇಕು, ತಾಲೂಕಿನ ವಿವಿಧ ಇಲಾಖೆಗಳು ಶುದ್ದೀಕರಣಿವಾಗಬೇಕು ಎಂದರು.
ಪ್ರಗತಿಪರ ಹೋರಾಟಗಾರರಾದ ರವಿ ಗೌಡ, ಉತ್ತೇನಹಳ್ಳಿ ಚಂದ್ರಣ್ಣ, ಶಂಕರಣ್ಣ, ಮಹೇಶ್ ಗುಲಸಿಂದ, ಕಲ್ಕೆರೆ ವಾಸು, ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
