ಯುವಪೀಳಿಗೆ ಹುತಾತ್ಮ ವೀರ ಯೋಧ ಮುರಳಿ ನಾಯ್ಕ್ ಮತ್ತೊಬ್ಬ ಭಗತ್ ಸಿಂಗ್ ಆಗಿ ಆದರ್ಶ-ಶ್ರೀನಿವಾಸ್ ನಾಯ್ಕ್
ಬಾಗೇಪಲ್ಲಿ: ದೇಶಕ್ಕೆ ಸೇವೆ ಮತ್ತು ತ್ಯಾಗ ಮಾಡುವ ಪುಣ್ಯದ ಅವಕಾಶ ಪ್ರಯೊಬ್ಬರಿಗೂ ಸಿಗಲು ಸಾಧ್ಯವಿಲ್ಲ ಆದರೆ ನಮ್ಮ ಲಂಬಾಣಿ ಸಮುದಾಯದಲ್ಲಿ ಹುಟ್ಟಿ ದೇಶಕ್ಕೆ ಸೇವೆ ಮಾಡಬೇಕು ಎಂಬ ಹಠದಿಂದ ಕೇವಲ 23 ವರ್ಷಕ್ಕೆ ದೇಶಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮ ವೀರಯೋಧ ಮರಳಿ ನಾಯ್ಕ್ ಅವರು ಈಗಿನ ಯುವಕರಿಗೆ ದೇಶ ಪ್ರೇಮಿ ಮತ್ತೊಬ್ಬ ಭಗತ್ ಸಿಂಗ್ ಆಗಿ ಮಾದರಿಯಾಗಿದ್ದಾರೆ ಎಂದು ಗೋರ್ ಬಂಜಾರ (ಲಂಬಾಣಿ) ಸಮುದಾಯದ ಮಾಜಿ ಪ್ರಧಾನ ಕಾರ್ಯದರ್ಶಿನಿ ಶ್ರೀನಿವಾಸ್ ನಾಯ್ಕ್ ಅಭಿಪ್ರಾಯ ಪಟ್ಟರು.
ಪಟ್ಟಣದ ಗೂಳೂರು ವೃತ್ತದಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣ ಜಾಗದಲ್ಲಿ ಪೆಹಾಲ್ಗಮ್ ಯುದ್ಧದ್ದ ಆಪರೇಷನ್ ಸಿಂಧೂರ ಸಮಯದಲ್ಲಿ ತನ್ನ ದೇಶಕ್ಕಾಗಿ ಪಾಕಿಸ್ತಾನ್ ಉಗ್ರರ ವಿರುದ್ಧ ಹೋರಾಡಿ ಯುದ್ಧದಲ್ಲಿ ವೀರಮರಣ ಹೊಂದಿದ ದೇಶ ಪ್ರೇಮಿ ಪ್ರಾಣತ್ಯಾಗಿ ಅಮರ ವೀರ ಮುರಳಿ ನಾಯ್ಕ್ ಅವರ 11 ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ಬಾಗೇಪಲ್ಲಿ ಬಂಜಾರ (ಲಂಬಾಣಿ ) ಸಮುದಾಯದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವು ಆಯೋಜಿಸಲಾಗಿದ್ದು ವೀರಯೋಧ ಮುರಳಿ ನಾಯ್ಕ್ ಅವರ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಗಡಿ ಭಾಗದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಸಂಘರ್ಷದಲ್ಲಿ ನಮ್ಮ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶದ ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮದ ವೀರಯೋಧ ಮುರಳಿ ನಾಯ್ಕ್ ಹುತಾತ್ಮರಾಗಿದ್ದಾರೆ.
ಅವರು ದೇಶ ಸೇವೆ ಮಾಡುತ್ತಾ ವೀರ ಮರಣವನ್ನಪ್ಪಿರುವ ವೀರ ಯೋಧ, ಹುತಾತ್ಮ ಮುರಳಿ ನಾಯಕ್ ಅವರಿಗೆ ಗೌರವಪೂರ್ವಕ ನಮ್ಮ ಸಮುದಾಯದ ಪರವಾಗಿ ಪ್ರಣಾಮಗಳನ್ನು ಸಲ್ಲಿಸುತ್ತೇವೆ. ದೇಶ ಸೇವೆಯಲ್ಲಿನ ಅವರ ಅದಮ್ಯ ಧೈರ್ಯ, ಶೌರ್ಯ ಹಾಗೂ ಸಂಕಲ್ಪ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಹುತಾತ್ಮ ವೀರಯೋಧra ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾಥಿಸುತ್ತೇವೆ, ಮುಖ್ಯವಾಗಿ ಇಂದಿನ ಯುವ ಪೀಳಿಗೆ ಮುರಳಿ ನಾಯ್ಕ್ ಅವರ ಆದರ್ಶಗಳನ್ನು ರೂಡಿಸಿಕೊಂಡು ದೇಶಕ್ಕಾಗಿ ಸೇವೆ ಮಾಡುವ ಮನೋಭಾವನೆ ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್ ನಾಯ್ಕ್, ಗೋರ್ ಬಂಜಾರ (ಲಂಬಾಣಿ) ಸಮುದಾಯದ ಮುಖಂಡರಾದ ಶ್ರೀರಾಮ ನಾಯ್ಕ,ಜಿ. ವೆಂಕಟರವಣಪ್ಪ, ಆರ್. ನಾರಾಯಣನಾಯ್ಕ, ನಾಗಭೂಷಣ,ಬಿಳ್ಳೂರು ಶ್ರೀನಿವಾಸ್ ನಾಯ್ಕ, ಬಾಂಬೆ ನಾರಾಯಣನಾಯ್ಕ, ಸದ್ದಪಲ್ಲಿ ಶಂಕರ್ ನಾಯ್ಕ್,ಬಾಲು ನಾಯ್ಕ್, ಬಾಲಾಜಿ ನಾಯ್ಕ್, ಗೋರ್ತಪಲ್ಲಿ ಸೀನೆ ನಾಯ್ಕ್, ಬಿ.ಎಸ್.ಎನ್.ಎಲ್ ನಾಯ್ಕ್,ಸೇರಿದಂತೆ ಅನೇಕ ಮುಖಂಡರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
