ರಾಯರ ಸನ್ನಿಧಿಯಲ್ಲಿ ಸಂಧ್ಯಾ-ಸೌಮ್ಯಾ ಯುಗಳ ಗಾಯನ
ಬೆಂಗಳೂರು: ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ ಮತ್ತು ನೂತನ ವ್ಯವಸ್ಥಾಪಕರಾದ ಶ್ರೀ ನಂದಕೀಶೋರಾಚಾರ್ ನೇತೃತ್ವದಲ್ಲಿ ಗುರುವಾರದಂದು ಪ್ರಯುಕ್ತ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ಮತ್ತು ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಇವರ ಶಿಷ್ಯೆಯರಾದ ಶ್ರೀಮತಿ ಸೌಮ್ಯ ಗಿರೀಶ್ ಮತ್ತು ಶ್ರೀಮತಿ ಸಂಧ್ಯಾ ರಂಗನಾಥ್ ಅವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ಶ್ರೀ ಟಿ.ಎಸ್. ರಮೇಶ್ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ಸಾಥ್ ನೀಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
