ವಿಶ್ವಮಾನವ ಶಿಕ್ಷಕರತ್ನ ಪ್ರಶಸ್ತಿ ಹುಲಿಕುಂಟೆ ಡಾ.ರಾಮಕೃಷ್ಣ ಹೆಚ್.ಕೆ
ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಕಲಾಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರ ಕವಿ ಕುವೆಂಪುರವರ 122ನೇ ಜಯಂತ್ಯುತ್ಸವ ಸಮಾರಂಭವನ್ನು ಆಯೋಜಿಸಿಲಾಗಿತ್ತು. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಹುಲಿಕುಂಟೆ ಗ್ರಾಮದ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಮಕೃಷ್ಣ ಹೆಚ್ ಕೆ ಅವರ ಶೈಕ್ಷಣಿಕ ಹಾಗೂ ಸಾಹಿತಿಗಳಾಗಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ. ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನವು ವಿಶ್ವಮಾನವ ಶಿಕ್ಷಕರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು. ವಚನ ಸಾಹಿತ್ಯ ಚಿಂತಕರಾದ ಡಾ.ಶೀಲಾದೇವಿ ಎಸ್.ಮಳೀಮಠ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಸಮಾರಂಭವನ್ನು ಉದ್ಘಾಟಿಸಿದರು. 120 ಬಾರಿ ರಕ್ತದಾನ ಮಾಡಿ ವಿಶ್ವ ಗಿನ್ನಿಸ್ ದಾಖಲೆಮಾಡಿದ ಮಧುರಾ ಅಶೋಕ್ ಕುಮಾರ್.ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಧಾ ನಾಡೀಗ್ . ನಿವೃತ್ತ ಪ್ರಾಧ್ಯಾಪಕರಾದ ಶ್ರೀಲಕ್ಷ್ಮಿ. ಸಮಾಜ ಸೇವಕರಾದ ಡಾ.ಸಿ.ಜಯಲಕ್ಷ್ಮಿ. ಮತ್ತು ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಪುಟ್ಟರಾಜು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
