ಶಾಲಿನಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿಶ್ವ ಯೋಗ ಆಚರಣೆ ನಡೆಯಿತು
ಚನ್ನರಾಯಪಟ್ಟಣ: ಶಾಲಿನಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿಶ್ವ ಯೋಗ ಆಚರಣೆ ನಡೆಯಿತು. ಪಟ್ಟಣದ ಗಾಂಧಿ ಸರ್ಕಲ್ ನಲ್ಲಿರುವ ಶಾಲಿನಿ ವಿದ್ಯಾಸಂಸ್ಥೆಯ ಮಕ್ಕಳಿಂದ 11ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿವಿಧ ಬಂಗಿಯ ಯೋಗಾಸನ ಪ್ರದರ್ಶನ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಅರುಣ ಕುಮಾರಿ ಮಾತನಾಡಿ ಪ್ರತಿಯೊಬ್ಬರು ಯೋಗ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಪ್ರತಿಯೊಬ್ಬರು ದಿನದಲ್ಲಿ 10 ನಿಮಿಷವಾದರೂ ಯೋಗಾಸನ ಮಾಡುವುದರಿಂದ ರೋಗ ಬರದಂತೆ ಆರೋಗ್ಯವಾಗಿ ಜೀವಿಸಬಹುದು ಎಂದು ತಿಳಿಸಿದರು. ಈ ದಿನ ಪ್ರಪಂಚದ ವಿವಿಧ ದೇಶಗಳಲ್ಲಿ ವಿಶ್ವ ಯೋಗ ದಿನ ಎಂದು ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ವಿಚಾರವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣ ಕುಮಾರಿ, ಸಿವಿಲ್ ನ್ಯಾಯಾಧೀಶರಾದ ಕುಸುಮ, ಪರಿಸರ ಪ್ರೇಮಿ ಸಿ ಎನ್ ಅಶೋಕ್, ಶಾಲಿನಿ ವಿದ್ಯಾ ಶಾಲೆ ಸಂಸ್ಥಾಪಕ ನಂಜುಂಡೇಗೌಡರು, ಪುರಸಭೆ ಮುಖ್ಯ ಅಧಿಕಾರಿ ಯತೀಶ್ ಕುಮಾರ್, ಸಮಾಜ ಸೇವಕ ಮನೋಹರ್ ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
