ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೆನ್ನಿಗೆ ನಿಂತ ಸವಿತಾ ಸಮಾಜದ ಸಮುದಾಯ
ಭಾಗ್ಯನಗರ: ಸರ್ಕಾರವನ್ನ ಯಾವುದೇ ರೀತಿ ಮೋಸ ಮಾಡಬೇಕು ಎನ್ನುವ ವ್ಯಕ್ತಿಯಲ್ಲ ಇದು ಆಕಸ್ಮಿಕವಾಗಿ ಕೈಬಿಟ್ಟಂತಹ ದಾಖಲೆಗಳಿಂದ ಅವರು ಅಸಿಂದು ಎಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ ಅದನ್ನು ಎಲ್ಲರೂ ಗೌರವಿಸುತ್ತೇವೆ ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದು ಎಸ್. ಎನ್. ಸುಬ್ಬಾರೆಡ್ಡಿ ಅವರಿಗೆ ಭಗವಂತ ಒಳ್ಳೆಯದನ್ನ ಮಾಡಲಿ ಎಂದು ಸವಿತಾ ಸಮುದಾಯದ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಪಟ್ಟಣದ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ರವರ ಗೃಹ ಕಚೇರಿಯ ಮುಂಭಾಗದಲ್ಲಿ ಸವಿತಾ ಸಮಾಜ ಸಮುದಾಯದ ಪದಾಧಿಕಾರಿಗಳು ಸುಮಾರು ಒಂದು ಗಂಟೆಯ ಕಾಲ ಮಂಗಳ ವಾದ್ಯಗಳನ್ನು ನುಡಿಸುವ ಮೂಲಕ ಶಾಸಕ ಎಸ್ಎನ್. ಸುಬ್ಬಾರೆಡ್ಡಿ ಅವರಿಗೆ ಶುಭವಾಗಲಿ ಅವರಿಗೆ ಎಂದಿಗೂ ನಮ್ಮ ಸಮುದಾಯ ಕೈ ಜೋಡಿಸುತ್ತದೆ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಜೇಂದ್ರ ಮಾತನಾಡಿ ಶಾಸಕರಾದ ಎಸ್ಎನ್ ಸುಬ್ಬಾರೆಡ್ಡಿ ರವರು ಯಾವುದೇ ಜಾತಿಭೇದವಿಲ್ಲದೆ ಹಲವಾರು ದಶಕಗಳಿಂದ ಸಮಾಜಸೇವೆ ಮಾಡುತ್ತಾ ಎಲ್ಲಾ ಸಮುದಾಯದವರೆಗೂ ಸಹ ತಮ್ಮದೇ ಆದ ನಗುಮುಖದಿಂದ ಅನೇಕ ಜನಪರ ಕಾರ್ಯಕ್ರಮಗಳನ್ನ ಮಾಡಿ ಜನಪ್ರಿಯತೆ ಪಡೆದು ಮೂರು ಬಾರಿ ಶಾಸಕರಾಗಿ ದಾಖಲೆ ಮಾಡಿದ ವ್ಯಕ್ತಿ ಅವರು ಇನ್ನಷ್ಟು ಸಮಾಜ ಸೇವೆ ಮಾಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನ ಮಾಡಲಿ ಎಂದು ನಾವು ಶುಭ ಕೋರುತ್ತೇವೆ ನಮ್ಮ ಸಮುದಾಯದ ಎಲ್ಲರೂ ಸಹ ಅವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸವಿತ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ್ ಉಪಾಧ್ಯಕ್ಷ ಏ ಗಜೇಂದ್ರ ಗೌರವಾಧ್ಯಕ್ಷ ಬಿಜಿ ಮಹೇಶ್ ಪ್ರಧಾನ ಕಾರ್ಯದರ್ಶಿ ಜಿ ಎನ್ ನಾಗರಾಜ್ ಖಜಾಂಚಿ ಬಿ ಆರ್ ಸುದರ್ಶನ್ ಉಪ ಕಾರ್ಯದರ್ಶಿ ಶ್ರೀನಿವಾಸ್ ಜಂಟಿ ಕಾರ್ಯದರ್ಶಿ ಜಿಎನ್ ನರಸಿಂಹಮೂರ್ತಿ ಸಂಘಟನಾ ಕಾರ್ಯದರ್ಶಿ ಹೇಮಂತ್ ಕುಮಾರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕಾರ್ತಿಕ್ ಸಂಚಾಲಕರಾದ ರಾಮಾಂಜನೇಯಲು ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು...
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
