ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಯಿತು
ಢವಳಗಿ ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ 21 ಬುಧವಾರ ದಂದು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ರಮೇಶ ಮೂಲಿಮನಿ ಹಾಗೂ ಸಹ ಶಿಕ್ಷಕರುಗಳಾದ ಜೆ ಎಸ್ ಪಾಟೀಲ್, ಬಿಎಸ್ ಪಾಟೀಲ್, ಎಸ್ ಬಿ ಬಿರಾದಾರ , ಹರಿನಾಥ್ ಎನ್, ಎಸ್ ಎಸ್ ಅವಟಿ ಹಾಗೂ ಅತಿಥಿ ಶಿಕ್ಷಕರುಗಳಾದ ಪರಶುರಾಮ ಮೂಲಿಮನಿ ವಿಜಯಲಕ್ಷ್ಮಿ ಕಟ್ಟಿಮನಿ ಹಾಗೂ ಶಾಲೆಯ ಮುದ್ದು ವಿದ್ಯಾರ್ಥಿನಿಯರು ಹಾಜರಿದ್ದರು. ಶಾಲೆಯ ಮುಖ್ಯ ಗುರುಗಳು ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ ಮತ್ತು ಅವರು ಮಾಡಿದ ಸಮಾಜ ಸುಧಾರಣೆ ಕಾರ್ಯಗಳು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದಿದ ರೀತಿಯನ್ನು ಮಕ್ಕಳಿಗೆ ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
