ಶ್ರೀ ಕಾಳಿಕಾಂಬ ಅಮ್ಮನವರ 26ನೇ ವರ್ಷದ ಪ್ರತಿಷ್ಠಾಪನ ವಾರ್ಷಿಕೋತ್ಸವ

May 13, 2025 - 10:25
 0  12
ಶ್ರೀ ಕಾಳಿಕಾಂಬ ಅಮ್ಮನವರ 26ನೇ ವರ್ಷದ ಪ್ರತಿಷ್ಠಾಪನ ವಾರ್ಷಿಕೋತ್ಸವ

ಚಾಮರಾಜನಗರ: ಹನೂರು ತಾಲೋಕಿನ ಬಂಡಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಸಮುದಾಯದ ವತಿಯಿಂದ ಶ್ರೀ ಕಾಳಿಕಾಂಬ ಅಮ್ಮನವರ 26 ನೇ ವರ್ಷದ ಪ್ರತಿಷ್ಠಾಪನ ವಾರ್ಷಿಕೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷ ಬಿ. ವೆಂಕಟೇಶ್ ಮಾತನಾಡಿ ಬಂಡಳ್ಳಿ ಗ್ರಾಮದಲ್ಲಿ ಶ್ರೀ ಕಾಳಿಕಾಂಬ ದೇವಾಲಯದ ನಿರ್ಮಾಣ ಕಾರ್ಯ ಭವ್ಯ ಹಾಗೂ ಶಾಶ್ವತ ಆಧಾರದಲ್ಲಿ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿತ್ತು. ಇಂದು ಈ ದೇವಾಲಯ ಲೋಕಾರ್ಪಣೆ ಆಗುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ಧರ್ಮ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಇಂಥ ಮಹತ್ವದ ದೇವಾಲಯಗಳು ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು. ನಂತರ 

ದೇವಸ್ಥಾನಗಳು ನೆಮ್ಮದಿಯ ತಾಣಗಳಾಗಿವೆ. ನಮ್ಮ ಕೆಲಸ ಕಾರ್ಯಗಳ ಒತ್ತಡದ ಮಧ್ಯೆ ದೇವಸ್ಥಾನಕ್ಕೆ ತೆರಳಿದರೆ ಅಲ್ಲಿ ನೆಮ್ಮದಿಯ ಶಾಂತಿ ಸಿಗುತ್ತದೆ. ಈ ದುಡ್ಡಿನಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಸನಾತನ ಧರ್ಮವನ್ನು ಉಳಿಸುತ್ತಿರುವುದು ಸಂತಸದ ವಿಚಾರ ವಿಶ್ವಕರ್ಮ ಸಮಾಜದವರು ಪ್ರತಿ ಬಾರಿಯೂ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರೀತಿ, ವಾತ್ಸಲ್ಯ ವಿಶ್ವಾಸದಿಂದ ಕರೆಯುತ್ತಿದ್ದಾರೆ ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದರು. 

ನಂತರ ಕರ್ನಾಟಕ ಪ್ರಾದೇಶಿಕ ವಿಶ್ವಕರ್ಮ ಮಹಾಸಂಘದ ರಾಜ್ಯ ಅಧ್ಯಕ್ಷ ಶ್ರೀನಿವಾಸ್ ಚಾರ್ ಮಾತನಾಡಿ 35 ಲಕ್ಷಕ್ಕೂ ವಿಶ್ವಕರ್ಮ ಜನಸಂಖ್ಯೆ ಇದ್ದರು ಯಾವುದೇ ಸರ್ಕಾರ ಬಂದರು ವಿಶ್ವಕರ್ಮರ ಬಗ್ಗೆ ಕಾಳಜಿ ವಹಿಸಿದ ರಾಜಕಾರಣಿಗಳಿಗೆ ನಾಚಿಕೆ ಆಗಬೇಕು ನಮ್ಮ ಸಮುದಾಯವನ್ನು ಅವರ ಇಷ್ಟಕ್ಕೆ ತಕ್ಕಂತೆ ಬಳಸಿಕೊಂಡು ಅಭಿವೃದ್ಧಿಯಲ್ಲಿ ಮಾತ್ರ ದೂರ ತಳ್ಳುವುದು ದುರ್ದೈವ ಎಂದರು. ನಮ್ಮನ್ನು ತುಳಿಯುವ ಕೆಲಸ ಮಾಡುವವರ ವಿರುದ್ಧ ನಾವು ಸಂಘಟಿತರಾಗಿ ಸರ್ಕಾರಗಳಿಗೆ ಎಚ್ಚರಿಕೆ ನೀಡಬೇಕು ಎಂದು ಕಟುವಾಗಿ ಟೀಕಿಸಿದರು. ಜಾತಿ ಗಣತಿ ಮಾಡುವಂತಹ ಅಧಿಕಾರಿಗಳಿಗೆ ವಿಶ್ವಕರ್ಮ 2a ಅಂತ ಹೇಳುವಲ್ಲಿ ಮುಂದಾಗಬೇಕು, ವಿಶ್ವಾಕರ್ಮ ಜನಾಂಗ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಹಾಗಿದ್ದಲ್ಲಿ ಬರುವಂತ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಮುಂದಾಗಲು ಕಾರಣವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅರೆ ಮಾದನಹಳ್ಳಿ, ಶ್ರೀ ಫಲಹಾರ ಪ್ರಭುಸ್ವಾಮೀಜಿ ಬಂಡಳ್ಳಿ, ಶಾಸಕ ಆರ್ ಮಂಜುನಾಥ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಮಂಟೇಲಿಂಗಚಾರ್, ಡಾ ಜಯಂತ್, ಡಾ ನಾಗಾಲಿಂಗಪ್ಪ,ರವಿಕುಮಾರ್, ಗುರುರಾಜ್ ಚಾರ್, ಶ್ರೀನಿವಾಸ ಚಾರ್, ರಾಚಪ್ಪ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456