ಸಾಮಾಜಿಕ ಕಾರ್ಯಕರ್ತರನ್ನು ಹತ್ತಿಕ್ಕಲು ಕಾಯ್ದೆಗಳ ದುರುಪಯೋಗ ಮಾಡಿಕೊಳ್ಳುತ್ತಿರುವ ಕಾರ್ಯಾoಗ...
ಹಿರಿಯ ಸಾಮಾಜಿಕ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಹೆಚ್ ಎಸ್ ದೊರೆಸ್ವಾಮಿ ಜೊತೆ ಹೋರಾಟಗಳಲ್ಲಿ ಬಾಗವಹಿಸಿದವರು ಶ್ರೀಯುತ ನಾಗೇಶ್ವರ ರಾವ್ @ ಕೆ. ಎನ್. ಬಾಬು ರವರ ಮೇಲೆ ಬಲಾತ್ಕಾರ, ಬ್ಲಾಕ್ಮೇಲ್, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆಂದು ಅವರ ವಿರುದ್ಧ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿ ಶ್ರೀ ರೋಹಿತ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಬಿ ಬಿ ಎಂ ಪಿ ಉತ್ತರಹಳ್ಳಿ ಉಪ ವಿಭಾಗ & ವಾರ್ಡ್ ನೋಡಲ್ ಅಧಿಕಾರಿ ರವರು ದೂರು ನೀಡಿದ ಹಿನ್ನಲೆಯಲ್ಲಿ ನಿನ್ನೆ ಸೋಮವಾರದಂದು ಶ್ರೀಯುತ ನಾಗೇಶ್ವರ ರಾವ್ @ ಕೆ. ಎನ್. ಬಾಬು, ಹಿರಿಯ ಸಾಮಾಜಿಕ ಹೋರಾಟಗಾರರು ಶ್ರೀಯುತ ನರಸಿಂಹಮೂರ್ತಿ, ನಾನು @ ಮಲ್ಲಿಕಾರ್ಜುನ ರಾಜು, ಸಾಮಾಜಿಕ ಹೋರಾಟಗಾರರು ಶ್ರೀಯುತ ಯೋಗೇಶ್ ಹಾಗು ವಕೀಲರು ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರು / ಕಾರ್ಯಕರ್ತರು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಕಚೇರಿಗೆ ಭೇಟಿ ನೀಡಿ ಹೇಳಿಕೆಯನ್ನು ನೀಡಿ ಬಂದಿರುತ್ತೇವೆ.
ಸಾಮಾಜಿಕ ಹೋರಾಟಗಾರರಿಗೆ ಸ್ವಾತಂತ್ರ್ಯಕ್ಕೆ ಮುನ್ನ ಇದ್ದ ಹೆಸರು "ಫ್ರೀಡಂ ಫೈಟರ್ಸ್" ಸ್ವಾತಂತ್ರ್ಯ ಬಂದನಂತರ ನಾಮಕರಣ ಆಗಿರುವ ಹೆಸರುಗಳು ಬ್ಲಾಕ್ಮೇಲರ್ಸ್, ವಸೂಲಿ ವೀರರು, ಜಾತಿ ನಿಂದನೆ ಮಾಡುವವರು, ಇನ್ನೂ ಇತರೆ ಹೆಸರುಗಳು.. ಕಾರಣ ದರೋಡೇ ಮಾಡಿದವರು ಆಗ ಬ್ರಿಟಿಷರು ಈಗ ನಮ್ಮವರೇ...
ಈ ಗೊಡ್ಡು ಬೆದರಿಕೆಗಳಿಗೆ, ಮಾನಸಿಕ, ಶಾರೀರಕ ಹಿಂಸೆಗಳಿಗೆ ಬಗ್ಗದೆ ಜಗ್ಗದೆ ಪ್ರಾಣವನ್ನು ಸಹ ಲೆಕ್ಕಿಸದೆ ಜಾತಿ ಧರ್ಮ ಬೇದವಿಲ್ಲದೆ ಹೋರಾಟ ಮಾಡುತ್ತಿರುವ ಎಲ್ಲಾ ಸಾಮಾಜಿಕ ಹೋರಾಟಗಾರರಿಗೆ ನನ್ನದೊಂದು ಸಲಾಂ 🙏.
ಯಾವುದೇ ಚಾಲೆಂಜ್ ಇರಲಿ, ಒತ್ತಡ ಇರಲಿ ಯಾವುದಕ್ಕೂ ಜಗ್ಗದೆ, ಬಗ್ಗದೆ ಎಲ್ಲರ ಹೋರಾಟ ಹೀಗೇ ಮುಂದುವರೆಯಲಿ ✊.
ಮಲ್ಲಿಕಾರ್ಜುನ ರಾಜು
ಅಧ್ಯಕ್ಷರು
ಯೂತ್ ಫಾರ್ ಹ್ಯೂಮನ್ ರೈಟ್ಸ್ ಕರ್ನಾಟಕ..
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
