ಸಾರ್ವಜನಿಕರ ಕುಂದು ಕೊರತೆಗಳ ಸಭೆ "ಜನಸ್ಪಂದನ" ಕಾರ್ಯಕ್ರಮಕ್ಕೆ ಚಾಲನೆ 

Jul 30, 2025 - 16:12
 0  8
ಸಾರ್ವಜನಿಕರ ಕುಂದು ಕೊರತೆಗಳ ಸಭೆ "ಜನಸ್ಪಂದನ" ಕಾರ್ಯಕ್ರಮಕ್ಕೆ ಚಾಲನೆ 
ಕೆಜಿಎಫ್: ತಾಲೂಕು ಕಚೇರಿ ಆವರಣದಲ್ಲಿ ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ “ಜನಸ್ಪಂದನ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು ಸಾರ್ವಜನಿಕರು ತಮ್ಮ ಹಲವಾರು ಸಮಸ್ಯೆಗಳಿಗೆ ವಿವಿಧ ಇಲಾಖೆಯ ಆದಿಕಾರಿಗಳನ್ನು ನೋಡಲು ಕಛೇರಿಗಳಿಗೆ ಹೋಗುತ್ತಾರೆ ನಾನಾ ಕಾರಣಗಳಿಂದ ಅಧಿಕಾರಿಗಳು ಸಿಗುವುದಿಲ್ಲ. ಹಲವು ಬಾರಿ ಓಡಾಡಿದರೂ ಅಧಿಕಾರಿಗಳು ಸಿಗದೆ ತಮ್ಮ ಸಮಸ್ಯೆ ಬಗೆಹರಿಯದೇ ಕಷ್ಟ ಪಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ತಿಳಿಸುತ್ತಾರೆ.
ಸಾರ್ವಜನಿಕರು ಈ ರೀತಿ ತೊಂದರೆ ಪಡುವುದನ್ನು ನೋಡಿ ಎಲ್ಲಾ ಇಲಾಖಾ ಅಧಿಕಾರಿಗಳನ್ನು ಒಂದು ವೇದಿಕೆಯಲ್ಲಿ ಸೇರಿಸಿ ಸಾರ್ವಜನಿಕರಿಗೆ ಸಿಗುವಂತೆ ಮಾಡುವುದೇ ಈ ಜನಸ್ಪಂದನ ಕಾರ್ಯಕ್ರಮದ ಮೂಲ ಉದ್ದೇಶ ಎಂದರು. ಈ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ತಮ್ಮ ಸಮಸ್ಯೆಗಳ ಪರಿಷ್ಕರಣೆಗೆ ಪ್ರಯತ್ನಿಸಬೇಕು ಎಂದು ಕೋರಿದರು.
ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಬಂದು ಹೇಳಿಕೊಳ್ಳುವ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು ಎಂದು ಹೇಳಲಾಗುವುದಿಲ್ಲ, ಹಲವು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತದೆ, ಇನ್ನು ಹಲವು ಸಮಸ್ಯೆಗಳು ಕಾಲ ಮಿತಿಯಲ್ಲಿ ನಿಯಮಾನುಸಾರ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕನಿಷ್ಟ ತಮ್ಮ ಸಮಸ್ಯೆ ಕೇಳಲೇ ಬೇಕಾದ ಆಧಿಕಾರಿ ಇಂತಹ ಸಂದರ್ಭದಲ್ಲಿ ಲಭ್ಯವಿರುವುದರಿಂದ ಸಾರ್ವಜನಿಕರಿಗೆ ಇದು ಬಹಳಷ್ಟು ಅನುಕೂಲ ಹಾಗೂ ತಮ್ಮ ಸಮಸ್ಯೆ ಪರಿಷ್ಕರಣೆಗೆ ಒಂದು ದಾರಿ ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಹಳಷ್ಟು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಮಾನ್ಯ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಸೂಚನೆಗಳನ್ನು ನೀಡಿದರು.
ವಿಶೇಷವಾಗಿ ಕ್ಯಾಸಂಬಳ್ಳಿ ಗ್ರಾಮದ ಶ್ರೀನಿವಾಸರೆಡ್ಡಿ ಎಂಬವರು ತಮ್ಮ ಮನೆಗೆ ಹೋಗಲು ದಾರಿ ಇಲ್ಲದೆ ಸುಮಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಸಾಧ್ಯವಾಗಿಲ್ಲ, ಮನೆಯಲ್ಲಿ ಅಂಗವಿಕಲ ಮಗುವಿದ್ದು ನನಗೆ ಮಾನಸಿಕ ಹಿಂಸೆ ಆಗಿದ್ದು ನನಗೆ ದಯಾ ಮರಣಕ್ಕೆ ಅನುಮತಿಗೆ ಶಿಫಾರಸ್ಸು ಮಾಡಿ ಎಂದು ಮನವಿಯನ್ನು ಸಲ್ಲಿಸಲು ಪ್ರಯತ್ನಿಸಿದರು. 
ಮಾನ್ಯ ಶಾಸಕರು ಮಾತನಾಡಿ ತಮ್ಮ ಕಷ್ಟ ನಮಗೆ ಅರ್ಥವಾಗಿದೆ ಆದರೇ ಸಾವು ಎಲ್ಲದಕ್ಕೂ ಪರಿಶ್ಕಾರವಲ್ಲಾ, ಮನೆಯಲ್ಲಿ ಮಕ್ಕಳಿರುವುದಾಗಿ ತಿಳಿಸುತ್ತೀರಿ, ನಮ್ಮ ಮೇಲೆ ನಂಬಿಕೆ ಇಟ್ಟು ಸ್ವಲ್ಪ ಕಾಲಾವಕಾಶ ಕೊಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಮಾನ್ಯ ಶಾಸಕರ ಭರವಸೆಯಂತೆ ಶ್ರೀನಿವಾಸರೆಡ್ಡಿ ರವರು ತಮ್ಮ ದಯಾಮರಣ ಮನವಿಯನ್ನು ಹಿಂಪಡೆದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿಕೊಡಬೇಕು. 
ಯಾವುದೇ ಸಮಸ್ಯೆ ಇದ್ದರೂ ಅದನ್ನು ನನ್ನ ಗಮನಕ್ಕೆ ತನ್ನಿ ನಾನು ನನ್ನ ಕೈಯಲಾಗುವ ಸಹಾಯ ಮಾಡುತ್ತೇನೆ. ಎಂದರು. ತಹಶೀಲ್ದಾರ್ ಭರತ್. ಮಾತನಾಡಿ ಪ್ರತಿ ತಿಂಗಳು 30ನೇ ತಾರೀಕು ನಮ್ಮ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆ ನಡೆಸುತ್ತೇವೆ. ತಮ್ಮದು ಯಾವುದೇ ಸಮಸ್ಯೆಗಳಿದ್ದರೂ ಲಿಖಿತ ರೂಪದಲ್ಲಿ ನೀಡಿದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸಿಕೊಡುತ್ತೇವೆ ಎಂದರು. ಈ ಸಂದರ್ಭದಲ್ಲಿ. ನಗರಸಭೆ ಪೌರಾಯುಕ್ತರು. ಆಂಜನೇಯಲು. ಇ ಓ. ವೆಂಕಟೇಶಪ್ಪ. ಸಮಾಜ ಕಲ್ಯಾಣ ಇಲಾಖೆ. ಅಂಜಲಿ. ಸಿಡಿಪಿಓ .ರಾಜೇಶ್. ಕೆಎಸ್ಆರ್ಟಿಸಿ ಡಿಪೋ ಮೆನೇಜರ್. ನೇತ್ರಾವತಿ. ಬೆಸ್ಕಾಂ ಇಲಾಖೆ ಅಧಿಕಾರಿ. ಹೇಮಲತಾ. ಸ್ಥಾಯಿ ಸಮಿತಿ ಅಧ್ಯಕ್ಷರು ವಲ್ಲಲ್ ಮುನಿಸ್ವಾಮಿ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಎಲ್. ಎನ್. ನರಸಿಂಹಮೂರ್ತಿ. ಪಿಆರ್ ಡಿ ಇಲಾಖೆ ಅಧಿಕಾರಿ ರವಿಚಂದ್ರ ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456