ಸುದ್ದಿ ಕಿರಣ
"ಸುದ್ದಿ ಕಿರಣ"
ಶುಭ ಮುಂಜಾವಿನಲಿ ಫಳಫಳ ಹೊಳೆಯುವ ಸೂರ್ಯನ ಕಿರಣ
ಚಹಾದೊಂದಿಗೆ ಬೇಕೇಬೇಕು
ಓದಲು ದಿನಪತ್ರಿಕೆ ಸುದ್ದಿ ಕಿರಣ..!
ಎಲ್ಲರ ನೆಚ್ಚಿನ ದಿನಪತ್ರಿಕೆಯಿದು ಸುದ್ದಿಕಿರಣ
ಕವಿಗಳ ಆಶಾಕಿರಣ
ನಮ್ಮೆಲ್ಲ ಕವಿ ಕವನಗಳ ನರ್ತನ
ಬಣ್ಣ ಬಣ್ಣದ ಪುಟಗಳುಳ್ಳ
ಪತ್ರಿಕೆ ಇದು ಸುದ್ದಿ ಕಿರಣ
ಸೆಳೆದಿದೆ ಓದುಗರ ಗಮನ..!!
ನಮ್ಮಯ ನಾಡಿಮಿಡಿತ ಸುದ್ದಿ ಕಿರಣ
ದೇಶ ವಿದೇಶ ಹಲವಾರು
ಸುದ್ದಿಗಳ ಸಮ್ಮಿಲನ
ಅಂಕಣ ಬರಹಗಳು
ಶುಭ ನುಡಿ ಸೆಳೆಯುವುದು ಗಮನ..!!!
ಸಂಪಾದಕರ ದೊಡ್ಡಗುಣ
ಮತ್ತೆ ಮತ್ತೆ ಪ್ರಕಟಿಸುವರು ನಮ್ಮಗಳ ಕವನ
ಸಣ್ಣ ಪತ್ರಿಕೆಯಾದರೂ
ತುಂಬಾ ಚೊಕ್ಕತನ..!!!!
ನಮ್ಮ ಕವನಗಳು ಪ್ರಕಟಿಸುತ್ತಾ
ನನ್ನ ಸಾಹಿತ್ಯಕ್ಕೆ ನೀರೂಣಿಸಿ
ಪ್ರೋತ್ಸಾಹಿಸುತ್ತಿರುವ ನಿಸ್ವಾರ್ಥ
ಈ ಪತ್ರಿಕೆಯ ಸಂಪಾದಕರಾದ ಮಲ್ಲಿಕಾರ್ಜುನ ರೆಡ್ಡಿಯವರಿಗೆ ನನ್ನ ಅನಂತಾನಂತ ಗೌರವ ನಮನ...!!!!!🙏🏻🙏🏻
"ವಿಶಾಲಾಕ್ಷಿ ಕಾಳೆ"
ತಾ :-ಇಂಡಿ. ಜಿಲ್ಲಾ ವಿಜಾಪುರ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0
