ಹೊಳಲು ಸೊಸೈಟಿ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ ಸುಧಾಮಣಿ ಬಿ.ಎಂ.ಅವಿರೋಧ ಆಯ್ಕೆ

Apr 14, 2026 - 20:48
 0  47
ಹೊಳಲು ಸೊಸೈಟಿ ನೂತನ ಉಪಾಧ್ಯಕ್ಷರಾಗಿ ಶ್ರೀಮತಿ  ಸುಧಾಮಣಿ ಬಿ.ಎಂ.ಅವಿರೋಧ ಆಯ್ಕೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಮಂಡ್ಯ ತಾಲೂಕು ಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನ ಉಪಾಧ್ಯಕ್ಷರಾಗಿ ಸುಧಾಮಣಿ ಬಿ. ಎಂ.ಅವಿರೋಧವಾಗಿ ಆಯ್ಕೆಯಾದರು.

ಸವಿತಾ ಎಚ್.ಕೆ.ರವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯು ಈ ದಿನ ಶುಕ್ರವಾರ ಸಂಘದಲ್ಲಿ ನಡೆಯಿತು.

12 ಮಂದಿ ಸದಸ್ಯರ ಬಲವಿರುವ ಸಂಘದಲ್ಲಿ ಸುಧಾಮಣಿ ಬಿ.ಎಂ. ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸಿರಲಿಲ್ಲ ಆದ್ದರಿಂದ ಚುನಾವಣಾಧಿಕಾರಿಯಾದ ಹೊಳಲು ಕೃಷಿ ಪತ್ತಿನ ಸಹಕಾರ ಸಂಘದ 

ಮುಖ್ಯಕಾರ್ಯನಿರ್ವಹಣಾಧಿಕಾರಿರವರು ಸುಧಾಮಣಿ ಬಿ.ಎಂ.ರವರನ್ನು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ನೂತನ ಉಪಾಧ್ಯಕ್ಷರಾದ ಸುಧಾಮಣಿ ಬಿ.ಎಂ. .ಮಾತನಾಡಿ ಎಲ್ಲರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಮುಂದೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದವಿರಲಿ 

ನಾವು 12 ಸದಸ್ಯರು ಒಗ್ಗಟ್ಟಿನಿಂದ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜಿಲ್ಲೆಯಲ್ಲಿಯೇ ಒಂದು ಮಾದರಿ ಸಹಕಾರ ಸಂಸ್ಥೆಯನ್ನಾಗಿ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು.

ಹಾಗೂ ನಮ್ಮ ಸಂಘಕ್ಕೆ ನೂರು ವರ್ಷ ತುಂಬಿರುವ ಕಾರಣ ಶತಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ಆಡಳಿತ ಮಂಡಳಿಯವರು ತೀರ್ಮಾನಿಸಿದ್ದಾರೆ. ಆದ್ದರಿಂದ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಚ್‌.ಪಿ. ಸಚ್ಚಿದಾನಂದ (ಪಪ್ಪಿ), 

ಮಾಜಿ ಉಪಾಧ್ಯಕ್ಷರಾದ ಸವಿತಾ ಎಚ್. ಕೆ.

ಗ್ರಾಮದ ಮುಖಂಡರಾದ ಎಚ್.ಎಸ್. ಯೋಗೇಶ್ ಕುಮಾರ್, ಜಟ್ಟಿ ಕುಮಾರ್, ಎಚ್ .ಸಿ .ಶ್ರೀಧರ್, ನಾರಾಯಣಪ್ಪ, ಸೂರಿ, ಪ್ರದೀಪ್ ಕುಮಾರ್, ಕೃಷ್ಣ, ಶ್ರೀಕಾಂತ್, ರವಿಬೋಜ, 

ಸಂಪತ್ ಕುಮಾರ್, ವೇಣು, ಹಾಗೂ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರು ಪದಾಧಿಕಾರಿಗಳು ಗ್ರಾಮದ ಮುಖಂಡರು ಯುವ ಮುಖಂಡರು ನೂತನ ಉಪಾಧ್ಯಕ್ಷರನ್ನ ಸನ್ಮಾನಿಸಿ ಅಭಿನಂದಿಸಿದರು. 

ಚಿತ್ರವರದಿ: ಕೆ.ಪಿ.ಕುಮಾರ್, ಹೊಳಲು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456