48ನೇ ವರ್ಷದ ಶ್ರೀ ನರಸಿಂಹ ಜಯಂತಿ ಉತ್ಸವ ಹಾಗೂ ಬ್ರಹ್ಮರಥೋತ್ಸವ

May 8, 2025 - 16:25
 0  7
48ನೇ ವರ್ಷದ ಶ್ರೀ ನರಸಿಂಹ ಜಯಂತಿ ಉತ್ಸವ ಹಾಗೂ ಬ್ರಹ್ಮರಥೋತ್ಸವ

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ‌ ತ್ಯಾಗರಾಜನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 48ನೇ ವರ್ಷದ ಶ್ರೀ ನರಸಿಂಹ ಜಯಂತಿ ಉತ್ಸವ ಹಾಗೂ ಬ್ರಹ್ಮರಥೋತ್ಸವ ಸಮಾರಂಭನ್ನು ಇದೇ ತಿಂಗಳ 10, 11 ಮತ್ತು 12 ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು,  ವಿವರಗಳು ಈ ರೀತಿ ಇವೆ :
ಮೇ 10, ಶನಿವಾರ : ಬೆಳಗ್ಗೆ- ನವಗ್ರಹ ಶಾಂತಿ,  ಹೋಮಗಳು, ಶ್ರೀ ಅಶ್ವತ್ಥ ಕುಬೇರ ಲಕ್ಷ್ಮೀ ನರಸಿಂಹ ಸ್ವಾಮಿಗೆ ಫಲ ಪಂಚಾಮೃತ ಅಭಿಷೇಕ, ಮಹಾಪೂಜೆ, ನಾಣ್ಯ ಅಭಿಷೇಕ, ಸುದರ್ಶನ ಹೋಮ, ಅನ್ನದಾನ ಸೇವೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಕಲ್ಯಾಣೋತ್ಸವ, ಶೇಷವಾಹನೋತ್ಸವ.
ಮೇ 11, ಭಾನುವಾರ : ಬೆಳಗ್ಗೆ-ಶ್ರೀ ನರಸಿಂಹ ತಾರಕ ಹೋಮ, ಬ್ರಹ್ಮ ರಥೋತ್ಸವ, ಮಹಾ ಮಂಗಳಾರತಿ, ಅನ್ನದಾನ ಸೇವೆ. ಸಂಜೆ ದ್ವಾರ ಪೂಜೆ, ಗಜೇಂದ್ರ ಮೋಕ್ಷ ಉತ್ಸವ.
ಮೇ 12, ಸೋಮವಾರ : ಬೆಳಗ್ಗೆ-ಶ್ರೀ ನರಸಿಂಹ ಕಂಬಕ್ಕೆ ಕುಂಭಾಭಿಷೇಕ, ಬ್ರಹ್ಮ ಕಲಶ ಅಭಿಷೇಕ, ಚಕ್ರಸ್ನಾನ, ಅನ್ನದಾನ ಸೇವೆ. ಸಂಜೆ ದೊಡ್ಡ ರಥೋತ್ಸವ, ಶ್ರೀ ನರಸಿಂಹ ದೇವರ ದಂಡಕ್ಕೆ ಪೂಜೆ, ಬಲಿಹರಣ. ಸ್ಥಳ : ಶ್ರೀ ಅಭಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಬೆಂಗಳೂರು-560028

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456