ಆಧುನಿಕ ಶಿಕ್ಷಣ ಪದ್ಧತಿಯು ರಾಷ್ಟ್ರದ ಅಡಿಪಾಯವನ್ನು ಭದ್ರ ಪಡಿಸಲಿ : ಹೆಚ್. ಎಸ್. ಪ್ರತಿಮಾ ಹಾಸನ್

Jun 6, 2025 - 23:42
 0  21
ಆಧುನಿಕ ಶಿಕ್ಷಣ ಪದ್ಧತಿಯು ರಾಷ್ಟ್ರದ ಅಡಿಪಾಯವನ್ನು ಭದ್ರ ಪಡಿಸಲಿ : ಹೆಚ್. ಎಸ್. ಪ್ರತಿಮಾ ಹಾಸನ್

ಜೂನ್ 5 ರಂದು ಹಾಸನದ ತಣ್ಣೀರು ಹಳ್ಳದಲ್ಲಿ ಇರುವ"ಹೊಯ್ಸಳ ಪಬ್ಲಿಕ್ ಸ್ಕೂಲ್ "ನಲ್ಲಿ "ಅಕ್ಷರಾಭ್ಯಾಸ" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾರದ ಪೂಜೆಯನ್ನು ಆಯೋಜಿಸಿ ಅಕ್ಷರಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರ ಅಧ್ಯಕ್ಷತೆಯಲ್ಲಿ ಪೂಜೆಯು ಅರ್ಥಪೂರ್ಣವಾಗಿ ನೆರವೇರಿತು. ಪೂಜೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಮಹತ್ವದ ಹೆಜ್ಜೆಯನ್ನು ಇಟ್ಟರು.

 ಅಕ್ಷರಾಭ್ಯಾಸ ಕಾರ್ಯಕ್ರವು ವಿಭಿನ್ನವಾಗಿದ್ದು ಪೋಷಕರ ಮನ ಗೆಲ್ಲುವಂತೆ ಮಾಡಿತು. ಅಕ್ಷರಭ್ಯಾಸ ಕಾರ್ಯಕ್ರಮವು ಪೂಜೆ ಪುನಸ್ಕಾರಗಳಿಂದ ಏರ್ಪಡಿಸಲಾಗಿದ್ದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಾಹಿತಿ, ಶಿಕ್ಷಕಿ, ಸಾಮಾಜಿಕ ಚಿಂತಕಿ,ಪತ್ರಕರ್ತೆ , ಪ್ರ,ಸಾ,ಸಾ,ಪ್ರ,ದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಹೆಚ್, ಎಸ್, ಪ್ರತಿಮಾ ಹಾಸನ್ ರವರ ಹಾಗೂ ಶೋಭಾ ನಾಗರಾಜ್ ರವರ ಸಮಕ್ಷಮದಲ್ಲಿ ಓಂಕಾರ ವನ್ನು ಬೋದಿಸಿ ಅಕ್ಷರಾಭ್ಯಾಸಕ್ಕೆ ವಿದ್ಯುತ್ತ್ಯವಾಗಿ ಚಾಲನೆ ನೀಡಲಾಯಿತು.

       ಇಂದು ಶಾರದಾ ಪೂಜೆಯನ್ನು ಮಾಡುತ್ತಾ ಅಕ್ಷರಾಭ್ಯಾಸದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಮಾಡಲಾಗಿದ್ದು ಇಂದಿಗೆ ಮಾತ್ರ ಸೀಮಿತಗೊಳ್ಳದೆ ಪೋಷಕರು ತಮ್ಮ ಮಕ್ಕಳ ಉಜ್ವಲವಾದ ಭವಿಷ್ಯಕ್ಕಾಗಿ ತಮ್ಮ ಅಮೂಲ್ಯವಾದ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದರ ಜೊತೆಗೆ ಶಿಕ್ಷಣದ ಪದ್ಧತಿ ಆದಂತಹ 

 ಆಧುನಿಕ ಶಿಕ್ಷಣ ಪದ್ಧತಿಯು ರಾಷ್ಟ್ರದ ಅಡಿಪಾಯವನ್ನು ಭದ್ರಪಡಿಸಲಿ ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕಾರ್ಯಗಳನ್ನು ಮಾಡುವಂತಾಗಲಿ . ಈ ಶಾಲೆಯು ಪ್ರಾರಂಭವಾಗಿ 18 ವರ್ಷಗಳಾಗಿದ್ದು ಇದರ ಬೆಳವಣಿಗೆಯ ಹಿಂದೆ ಬಹಳಷ್ಟು ಶ್ರಮವಿರುವುದನ್ನು ಅರಿಯಬೇಕಿದೆ. ಎಲ್ಲಾ ಶಿಕ್ಷಕ ವೃಂದದವರು ಹಾಗೂ ಪೋಷಕರು ಶಾಲೆಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಳ್ಳುತ ಅಕ್ಷರಾಭ್ಯಾಸ ಚಾಲನೆಯನ್ನು ಕೊಟ್ಟಂತಹ ಇಂದಿನ ದಿನದಿಂದಲೇ ಮಕ್ಕಳು ಹೊಸದಾಗಿ ಪ್ರಾರಂಭಿಸಿರುವ ವಿದ್ಯಾರ್ಥಿ ಜೀವನವು ಜ್ಞಾನ ಅಭಿವೃದ್ಧಿಗೆ ಕಾರಣವಾಗಲಿ ಎನ್ನುತ್ತ ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಎಲ್ಲೆಡೆಯು ಹೆಸರುವಾಸಿಯಾಗಲಿ ಎಂದು ಹೆಚ್, ಎಸ್, ಪ್ರತಿಮಾ ಹಾಸನ್ ರವರು ತಿಳಿಸಿದರು. ನಂತರ ಇವರಿಗೆ ಶಿಕ್ಷಣ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶೋಭಾ ನಾಗರಾಜ್, ಮುಖ್ಯೋಪಾಧ್ಯಾಯರಾದ ನವೀನ್, ಸಂಧ್ಯಾ, ಶಿಕ್ಷಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಇನ್ನು ಹಲವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456