ಇನ್ಮುಂದೆ ಸರ್ಕಾರಿ ರಜೆ ದಿನಗಳಂದು ಸಹ ಡಿಸಿಆರ್ ಇ ಪೊಲೀಸ್ ಠಾಣೆಗಳು ದೈನಂದಿನ ಕಾರ್ಯನಿರ್ವಹಣೆ

Mar 9, 2026 - 15:32
 0  36
ಇನ್ಮುಂದೆ ಸರ್ಕಾರಿ ರಜೆ ದಿನಗಳಂದು ಸಹ ಡಿಸಿಆರ್ ಇ ಪೊಲೀಸ್ ಠಾಣೆಗಳು ದೈನಂದಿನ ಕಾರ್ಯನಿರ್ವಹಣೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಯಾಲಯದ ಪೊಲೀಸ್ ಠಾಣೆಗಳು ಸಾಮಾನ್ಯ ಪೊಲೀಸ್ ಠಾಣೆಯಂತೆ ಸರ್ಕಾರಿ ರಜೆ ದಿನದಂದು ಸಹ ಕಚೇರಿ ತೆರೆದು ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿ ಮತ್ತು ಐಜಿಪಿರವರಿಗೆ ಪತ್ರ ಬರೆದ ನಿಮಿತ್ತ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ

ರಾಜ್ಯದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದವರ ಮೇಲಾಗುವ ಜಾತಿ ನಿಂದನೆ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ಸಮರ್ಥವಾಗಿ, ತ್ವರಿತವಾಗಿ ಪ್ರಕರಣಗಳನ್ನು ನಿಭಾಯಿಸುವ ಉದ್ದೇಶದಿಂದ ರಾಜ್ಯದಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಘಟಕವನ್ನು ವಿಶೇಷ ಪೊಲೀಸ್ ಠಾಣೆಯೆಂದು ಅಧಿಸೂಚಿಸಿ ರಾಜ್ಯಾದ್ಯಂತ 33 ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ ವಿಚಾರಣೆ ಪೊಲೀಸ್ ಠಾಣೆಯಂತೆಯೇ ಸಾಮಾನ್ಯ ಪೊಲೀಸ್ ಠಾಣೆಗಳಾಗಿ ಕಾರ್ಯಾರಂಭಿಸಿರುತ್ತವೆ,

ಎಸ್‌ಸಿ, ಎಸ್‌ಟಿ ಸಮುದಾಯದವರ ಮೇಲಾಗುವ ದೌರ್ಜನ್ಯ ಪ್ರಕರಣಗಳನ್ನು ನೀಡಲು ಠಾಣೆಗಳಿಗೆ ಬರುವ ದೌರ್ಜನ್ಯಕ್ಕೊಳಗಾದವರೊಂದಿಗೆ ಅಗೌರವಯುತವಾಗಿ ವರ್ತಿಸಿ ದೂರು ದಾಖಲಿಸಿಕೊಳ್ಳದೇ ಸದರಿ ಪ್ರಕರಣಗಳಿಂದ ತಮ್ಮನ್ನು ಮುಕ್ತಿಗೊಳಿಸಿದಂತೆ ಸರಹದ್ದಿನ ಠಾಣೆಗಳು ಡಿಸಿಆರ್‌ಇ ಕಡೆ ಬೊಟ್ಟುಮಾಡಿ ತೋರಿಸಿ ಕೈತೊಳೆದುಕೊಳ್ಳುವ ನೀತಿಯನ್ನು ಅನುಸರಿಸುತ್ತಿದ್ದು, ಇನ್ನೂ ಸರ್ಕಾರಿ ರಜೆದಿನಗಳಂದು ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರು ದೂರು ನೀಡಲು ಆಯಾ ಸರಹದ್ದಿನ ಹಾಗೂ ಡಿಸಿಆ‌ರ್ ಇ ಠಾಣೆಗಳಿರುವ ನಗರ ಪ್ರದೇಶದ ಠಾಣೆಗಳಿಗೆ ಹೋದಲ್ಲಿ ಸ್ಥಾಯಿ ಆದೇಶದ ಮಾರ್ಗಸೂಚಿಗಳನ್ವಯ ಪ್ರಕರಣಗಳನ್ನು ದಾಖಲಿಸಿಕೊಳ್ಳದೆ ಡಿಸಿಆರ್‌ಇ ಠಾಣೆಗಳು ರಜೆ ನಿಮಿತ್ಯ ಮುಚ್ಚಲ್ಪಟ್ಟಿದ್ದು ಸರ್ಕಾರಿ ಕರ್ತವ್ಯ ದಿನದಂದು ಠಾಣೆಗೆ ಭೇಟಿ ನೀಡಿ ದೂರು ನೀಡುವಂತೆ ತಿಳಿಸಿ ದಾರಿತಪ್ಪಿಸಿ ತಮ್ಮ ಜವಾಬ್ದಾರಿಯಿಂದ ನುಣಚಿಕೊಂಡು ಕರ್ತವ್ಯ ಲೋಪವೆಸಗುತ್ತಿರುವುದರಿಂದ ದೂರು ದಾಖಲಿಸುವಲ್ಲಿ ಕಾಲವಿಳಂಬವಾಗುತ್ತಿದ್ದು ಸಾಕ್ಷ್ಯನಾಶ, ಸಾಕ್ಷಿದಾರರ ಹಾಗೂ ದೂರುದಾರರ ಮೇಲೆ ಪ್ರಭಾವ ಬೀಳಲಿರುವುದಾಗಿ ಹಾಗೂ ನಿರಂತರ ಹಾಗೂ ಇತರೆ ಸರ್ಕಾರಿ ರಜೆ ದಿನಗಳಿದ್ದ ಸಂದರ್ಭದಲ್ಲಿ ಠಾಣೆಗಳು ಕರ್ತವ್ಯ ನಿರ್ವಹಿಸದಿದ್ದಾಗ ತನಿಖೆ ವಿಳಂಬವಾಗುವುದಾಗಿ ರಾಜ್ಯದ ಹಲವಾರು ಜಿಲ್ಲೆಗಳಿಂದ ದೌರ್ಜನ್ಯಕ್ಕೊಳಗಾದವರು, ದಲಿತ ಸಮುದಾಯದ ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಸದರಿ ಕರ್ತವ್ಯ ನೀತಿಯನ್ನು ಖಂಡಿಸಿ ಪ್ರಾಧಿಕಾರದ ಕಛೇರಿಗೆ ಭೇಟಿ ನೀಡಿ ಹಾಗೂ ದೂರವಾಣಿ ಮೂಲಕ ದೂರುತ್ತಿರುತ್ತಾರೆ ಅಲ್ಲದೆ ಸರ್ಕಾರಿ ರಜೆದಿನಗಳಂದು ಡಿಸಿಆರ್‌ಇ ಠಾಣೆಗಳು ಕರ್ತವ್ಯನಿರ್ವಹಿಸದೇ ಇರುವುದರಿಂದ ಸರ್ಕಾರಿ ರಜೆದಿನಗಳಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದವರ ಮೇಲೆ ದೌರ್ಜನ್ಯವಾಗುವುದಿಲ್ಲವೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟು ಅಕ್ರೋಶ ವ್ಯಕ್ತ ಪಡಿಸುತ್ತಿದ್ದು ಸದರಿ ಠಾಣೆಗಳ ಸ್ಥಾಪನೆಯ ಉದ್ದೇಶವೇ ಬುಡಮೇಲು ಮಾಡಿದಂತಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆರೋಪಿಸುತ್ತಿದ್ದು ಡಿಸಿಆ‌ರ್ ಇ ಠಾಣೆಗಳ ಬಗ್ಗೆ ನಕರಾತ್ಮಕ ಟೀಕೆಗಳು ವ್ಯಕ್ತವಾಗುತ್ತಿರುವುದರಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ವಿಭಾಗದ ಪೊಲೀಸ್ ಠಾಣೆಗಳು ಸರ್ಕಾರಿ ರಜೆದಿನಗಳಂದು ಠಾಣೆಗಳು ಕಾರ್ಯನಿರ್ವಹಿಸದಿದ್ದ ಸಂದರ್ಭದಲ್ಲಿ ಪ್ರಕರಣಗಳನ್ನು ದಾಖಲಿಸುವಲ್ಲಿ ಅಡಚಣೆ ಹಾಗೂ ತನಿಖೆಗಳು ವಿಳಂಬವಾಗಲಿದ್ದು ಸರ್ಕಾರಿ ರಜೆದಿನಗಳಂದು ಸಹ ಸಾಮಾನ್ಯ ಪೊಲೀಸ್ ಠಾಣೆಗಳಂತೆ ಡಿಸಿಆ‌ರ್ಇ ಠಾಣೆಗಳು ಕರ್ತವ್ಯನಿರ್ವಹಿಸುವುದು ಸೂಕ್ತವಾಗಿದ್ದು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಿಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456