ಒಳಮೀಸಲಾತಿ ಸಮೀಕ್ಷೆಯಲ್ಲಿ ಮೂಲ ಜಾತಿ ಮಾದಿಗ ಎಂದು ನಮೂದಿಸಿ ವೆಂಕಟಸ್ವಾಮಿ
ಬೇತಮಂಗಲ: ಕರ್ನಾಟಕ ಮಾದಿಗ ದಂಡೋರ ಅಧ್ಯಕ್ಷರು ವೆಂಕಟಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿ ಜನಾಂಗದವರನ್ನು ಇವರು ಇದೆ ಜಾತಿಯವರು ಎಂದು ಗುರುತಿಸಿ ಸಮೀಕ್ಷೆ ನಡೆಸಲು ರಾಜ್ಯಾದ್ಯಂತ 54ಸಾವಿರ ಶಿಕ್ಷಕ ಶಿಕ್ಷಕಿಯಾರನ್ನು ಮತ್ತು ಅಂಗನವಾಡಿ ಕಾರ್ಯ ಕರ್ತೆ ಯಾರನ್ನು ಸಮೀಕ್ಷೆ ನಡೆಸಲು ನೇಮಕ ಗೊಳಿಸಿದ್ದು, ಈಗಾಗಲೇ ಒಳಮೀಸಲಾತಿ ಸಮೀಕ್ಷೆ ಯನ್ನು ರಾಜ್ಯ ಸರ್ಕಾರ ಪ್ರಾರಂಭ ಮಾಡಿದೆ. ಆದ ಕಾರಣ ಮೂಲ ಜಾತಿ ಮಾದಿಗ ಎಂದು ನಮೂದಿಸಿ. ಮಾದಿಗ ಜಾತಿ ಹಿಂದೂಳಿದ ಜಾತಿಗಳಲ್ಲಿ ಒಂದು ಆಗಿದ್ದು. ಮುಂದೆ ನಮ್ಮ ಮಕ್ಕಳ ಶಾಲಾ ದಾಖಲಾತಿ ಹಾಗೂ ಸರ್ಕಾರದ ಸೌಲಭ್ಯ ಗಳನ್ನು ಪಡೆಯಲು ಅನುಕೂಲವಾಗುತ್ತೆದೆ. ಈಗ ತಮ್ಮ ಮನೆಯ ಬಾಗಿಲಿಗೆ ಸರ್ಕಾರಿ ಅಧಿಕಾರಿಗಳು ಇನ್ಯಾವುದೋ ಅಧಿಕಾರಿಗಳು ಸಮೀಕ್ಷೆ ನಡೆಸಲು ಬಂದಂಥ ಸಂದರ್ಭದಲ್ಲಿ ಅವರಿಗೆ ಕಡ್ಡಾಯವಾಗಿನಾವು ಮಾದಿಗ ಎಂದು ಹೇಳಿ ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರಾದ .ನಾಗರಾಜ್, ಮುರಳಿ, ರವಿ, ಯೇಸಯ್ಯ, ಅನೇಕರು ಹಾಜರಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
