ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ ನೂತನ ಅಧ್ಯಕ್ಷರಾಗಿ ಕಗ್ಗೆರೆ ತೋಪೇಗೌಡ ಅವಿರೋಧವಾಗಿ ಆಯ್ಕೆಗೊಂಡರು
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕಿನಲ್ಲಿ 21 ವರ್ಷಗಳ ಇತಿಹಾಸ ಇರುವ ಚನ್ನರಾಯಪಟ್ಟಣ ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ ನೂತನ ಕಾರ್ಯಕಾರಿ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿ ಸಿ ವೈ ಪ್ರವೀಣ್, ಅಧ್ಯಕ್ಷರಾಗಿ ಕೆ ಏನ್ ತೋಪೇಗೌಡ, ಉಪಾಧ್ಯಕ್ಷರಾಗಿ ಎನ್ ರಂಗಸ್ವಾಮಿ, ಜಿಎನ್ ಯೋಗೇಶ್, ಕಾರ್ಯದರ್ಶಿಯಾಗಿ ಎಸ ಎಲ್ ರಮೇಶ್, ಸಹ ಕಾರ್ಯದರ್ಶಿಯಾಗಿ ಪಿ ಜೇ ರಾಮಕೃಷ್ಣೇಗೌಡ, ಖಜಾಂಚಿಯಾಗಿ ಸಿಎನ್ ಪಾಂಡು, ನಿರ್ದೇಶಕರುಗಳಾಗಿ ವೆಂಕಟೇಶ್, ಶಂಕರೇಗೌಡ ಸಿ ಆರ್ ನಂಜಪ್ಪ, ಜಗದೀಶ್ ಗಂಗಾಧರ್, ಗಣೇಶ್, ರಾಜು ಅವಿರೋಧವಾಗಿ ಆಯ್ಕೆಗೊಂಡರು. ನೂತನ ಅಧ್ಯಕ್ಷರಾದ ತೋಪೇಗೌಡ ಮಾತನಾಡಿ ನಮ್ಮ ಸಂಘದ ಸರ್ವ ಸದಸ್ಯರ ಸಲಹೆ ಸಹಕಾರ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವ ಜನಪರ ಕೆಲಸಗಳನ್ನು ಮಾಡುತ್ತೇನೆ ಎಂದು ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
