"ಕವಿ ಮತ್ತು ಕಥೆಗಾರ ಬಲವಂತ.ಸಿ.ಮೋರಟಗಿ ಅವರಿಗೆ ಅಪ್ಪ ಪ್ರಶಸ್ತಿ "

Jan 5, 2026 - 13:42
 0  35
"ಕವಿ ಮತ್ತು ಕಥೆಗಾರ ಬಲವಂತ.ಸಿ.ಮೋರಟಗಿ ಅವರಿಗೆ ಅಪ್ಪ ಪ್ರಶಸ್ತಿ "

   ‌ವಿಜಯಪುರ: ಎಲೆಯ ಮರೆಯ ಕಾಯಿಯಂತೆ ಕನ್ನಡ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕವಿ ಮತ್ತು ಕಥೆಗಾರ ಬಲವಂತ.ಸಿ.ಮೋರಟಗಿ ಅವರಿಗೆ ವಿಜಯಪುರದ "ಅಪ್ಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ"ಯು ವಿಜಯಪುರದಲ್ಲಿ ದಿನಾಂಕ 4-1-2026 ರಂದು ನಡೆದ "ಅಪ್ಪ ಉತ್ಸವ"ದಲ್ಲಿ‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವೇದಿಕೆ ವೇದಿಕೆ ಸಂಸ್ಥಾಪಕರಾದ ಶ್ರೀಮತಿ ಸುಜ್ಞಾನಿ ಪಾಟೀಲ್ , ಖ್ಯಾತ ಸಾಹಿತಿ ರಾಗಂ, ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ನಾಡಿನ ಅನೇಕ ಸಾಹಿತಿಗಳು ಭಾಗವಹಿಸಿದ್ದರು.

     ಕವಿ ಬಲವಂತ.ಸಿ.ಮೋರಟಗಿಯವರು ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಗುತ್ತರಗಿ ಗ್ರಾಮದ ದಿವಂಗತ ಸಿದ್ದಪ್ಪ ಮೋರಟಗಿ ಮತ್ತು ಶ್ರೀಮತಿ ತಿಪ್ಪವ್ವ ದಂಪತಿಗಳ ಕೊನೆಯ ಮಗ.ಪ್ರಸ್ತುತ ಬೆಂಗಳೂರಿನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವರು.

ಇವರು ಒಂದು ಕಥಾ ಸಂಕಲನ ಮತ್ತು ಮೂರು ಕವನ‌ ಸಂಕಲನ ಪುಸ್ತಕಗಳನ್ನು ಬರೆದಿದ್ದಾರೆ.ತಮ್ಮ ವೃತ್ತಿಯ ಜೊತೆಗೆ ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎಲೆಯ ಮರೆಯ ಕಾಯಿಯಂತೆ ನಾಡು ನುಡಿ, ಮತ್ತು ಸಾಹಿತ್ಯ ಸೇವೆ ಮಾಡುತ್ತಿರುವ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಸಿಗಲೆಂದು ಅವರು ಹಿತೈಷಿಗಳು ಮತ್ತು ಸ್ನೇಹಿತರು ಹಾರೈಸಿದ್ದಾರೆ.

What's Your Reaction?

Like Like 4
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456