ಕಾಯಿರ್ ಬೋರ್ಡ್ ಮತ್ತು ರಕ್ಷಾ ಫೌಂಡೇಶನ್ ಜಾಗೃತಿ ಕಾರ್ಯಕ್ರಮ
ಬೆಂಗಳೂರು, ಜನವರಿ 9, 2025:
ಕಾಯಿರ್ ಬೋರ್ಡ್ ಹಾಗೂ ರಕ್ಷಾ ಫೌಂಡೇಶನ್ ಸಂಯುಕ್ತವಾಗಿ ಬೆಂಗಳೂರು ನಂದಿನಿ ಲೇಔಟ್‌ನ ಜೈ ಮಾರುತಿ ನಗರದಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು. ಈ ಕಾರ್ಯಕ್ರಮದ ಉದ್ದೇಶ ಮಹಿಳೆಯರು ಹಾಗೂ ಸ್ಥಳೀಯ ನಿವಾಸಿಗಳಿಗೆ ಕಾಯಿರ್‌ನಿಂದ ತಯಾರಿಸುವ ಉತ್ಪನ್ನಗಳು ಮತ್ತು ಸ್ವಯಂ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದಾಗಿತ್ತು.
ಕಾಯಿರ್ ಬೋರ್ಡ್‌ನ ಉಪನಿರ್ದೇಶಕ ಶ್ರೀ ವಿದ್ಯಾಧರನ್ ಎಂಪಿ ಹಾಗೂ ರಾಷ್ಟ್ರೀಯ ಕೈಗಾರಿಕಾ ನಿಗಮದ ಉಪ ವ್ಯವಸ್ಥಾಪಕ ಶ್ರೀ ರಾಮಪ್ರಸಾಂತ್ ಜೆ ಅವರು ಕಾಯಿರ್ ಉತ್ಪನ್ನಗಳು, ತರಬೇತಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ವಿವರಿಸಿದರು. ರಕ್ಷಾ ಫೌಂಡೇಶನ್‌ನ ಕಾರ್ಯದರ್ಶಿ ಶ್ರೀ ಸುಧಾಕರ ಮತ್ತು ಶ್ರೀಮತಿ ಆಶಾ ರಾಣಿ, ಶ್ರೀಮತಿ ವರ್ಶಾ ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
