ಕೆಜಿಎಫ್ ಗೆ ಹಳೆ ಗತ ವೈಭವ ಮರುಕಳಿಸುತ್ತದೆ ಸಚಿವ:ಡಾ. ಜಿ. ಪರಮೇಶ್ವರ್

Jan 21, 2026 - 15:42
 0  4
ಕೆಜಿಎಫ್ ಗೆ ಹಳೆ ಗತ ವೈಭವ ಮರುಕಳಿಸುತ್ತದೆ ಸಚಿವ:ಡಾ. ಜಿ. ಪರಮೇಶ್ವರ್

     ಕೆಜಿಎಫ್: ಕೆಜಿಎಫ್ ತಾಲೂಕು ತನ್ನದೇ ಆದ ಇತಿಹಾಸ ಹೊಂದಿದ್ದು, ಹಳೆ ಕಾಲದಲ್ಲಿ ಯಾವ ವೈಭವ ಇತ್ತು ಅದಕ್ಕೆ ಮತ್ತೆ ಜೀವ ಕಳೆ ಬರುತ್ತದೆ ಇಂದು ನಗರದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಕೇಂದ್ರ ಪೊಲೀಸ್ ಮೀಸಲು ಪಡೆ ಕೇಂದ್ರ ಕಚೇರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಗೃಹ ಸಚಿವರು. ಜಿ. ಪರಮೇಶ್ವರ್. ಬಂಗಾರಪೇಟೆ ಹಾಗೂ ಕೆಜಿಎಫ್ ಮಧ್ಯ ಭಾಗದಲ್ಲಿರುವ 100 ಎಕ್ರೆ ಪ್ರದೇಶದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆ ಕೇಂದ್ರ ಕಚೇರಿ ತಲೆ ಎತ್ತಲಿದ್ದು, ಪಕ್ಕದಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆ. ಇಂಟರ್ನೆಟ್ ಗ್ರೇಟ್ ಟೌನ್ಶಿಪ್. ನಿರ್ಮಾಣ ಅಂಬೇಡ್ಕರ್ ನವರ ಜ್ಞಾನ ಭಂಡಾರ ಬರಲಿದೆ ಇದರಿಂದ ನಗರ ವೈಭವ ಮತ್ತಷ್ಟು ಹೆಚ್ಚಲಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಈಗಾಗಲೇ ಶಾಸಕರು ರೂಪಕಲಾ ಶಶಿಧರ್ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಬೇಕು ಎಂದು ಹೇಳಿದರು.

ಇದಕ್ಕೆ ಮುಖ್ಯ ಉದ್ದೇಶ ಮುಂದಿನ ದಿನಗಳಲ್ಲಿ ದೇಶ ವಿದೇಶಗಳಿಂದ ಉದ್ಯಮಿಗಳು ನಗರಕ್ಕೆ ಆಗಮಿಸಲು ಅನುಕೂಲವಾಗುತ್ತದೆ ಎಂದರು.
ನಮ್ಮ ಸರ್ಕಾರ ಅತಿ ಶೀಘ್ರದಲ್ಲಿ ಹತ್ತು ಸಾವಿರ ಪೊಲೀಸರ ನೇಮಕಾತಿಗೆ ಗ್ರೀನ್ ಸಿಗ್ನಲ್ ಕೊಡುತ್ತದೆ ಇದರ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದರು.

ಸಾವಿರ ಪಿಎಸ್ಐ ಗಳ ನೇಮಕಾತಿ ಪಾರದರ್ಶಕವಾಗಿ ನಡೆದಿದೆ ತರಬೇತಿ ನಂತರ ಅವರು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದರು.

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಿರೋಧ ಪಕ್ಷದ ಹೇಳುತ್ತಾರೆ. ಕೆಜಿಎಫ್ ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಸಾಕ್ಷಿ ಇದನ್ನು ನೋಡಿ ತಿಳಿದುಕೊಳ್ಳಬೇಕು ಎಂದರು.

ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ ಡಾಕ್ಟರ್ ಜಿ. ಪರಮೇಶ್ವರ್ ಅವರು ನನ್ನ ತಂದೆ ಸಮಾನ ಗೃಹ ಇಲಾಖೆಯಲ್ಲಿ ಹಲವಾರು ಪ್ರಾಮಾಣಿಕ ಸೇವೆಗಳನ್ನು ಮಾಡಿದ್ದಾರೆ. 40 ಸಾವಿರಕ್ಕೂ  ಹೆಚ್ಚು ಪೊಲೀಸ್ ಪೇದೆಗಳಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮನೆಗಳ ನಿರ್ಮಿಸು ಗುರಿಯನ್ನು ಹೊಂದಿದ್ದಾರೆ.

ನನ್ನನ್ನು ನಂಬಿ ಕೆಜಿಎಫ್ ಗೆ ಇಷ್ಟು ದೊಡ್ಡ ಅಂದರೆ 550 ಕೋಟಿ ಯೋಜನೆಯ ಮೀಸಲು ಪೊಲೀಸ್ ಇಲಾಖೆ ಸೆಂಟರ್ ಸ್ಥಾಪನೆ ಮಾಡಲು ಮುಂದೆ ಬಂದಿರುವುದು ತುಂಬಾ ಸಂತೋಷ ತಂದಿದೆ ಅವರ ಮನಸ್ಸು ಯಾವ ರೀತಿ ಇದೆ ಎನ್ನುವುದು ಇದರಲ್ಲಿ ನಾವು ಕಾಣಬಹುದು ಎಂದುಕೊಂಡಾಡಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ ಪರಮೇಶ್ ಅಣ್ಣನವರು. ನನಗೆ ತುಂಬಾ ಆತ್ಮೀಯರು ಸೌಮ್ಯ ಸ್ವಭಾವದವರು. ಅವರು ಮಾತನಾಡುವುದು ಕಡಿಮೆ ಆದರೆ ಹೆಚ್ಚು ಕೆಲಸ ಮಾಡಿ ತೋರಿಸುವವರು. ಮುಂದಿನ ದಿನಗಳಲ್ಲಿ ಬಂಗಾರಪೇಟೆ ಹಾಗೂ ಕೆಜಿಎಫ್ ನಗರಗಳು ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಅದಕ್ಕೆ ಪ್ರಮುಖ ಕಾರಣ ಅಣ್ಣನವರು ನೀಡಿದ ಸಹಕಾರ ಎಂದು ಹೇಳಿದರು.ಡಿ. ಜಿ.ಪಿ. ಅರುಣ್ ಚಕ್ರವರ್ತಿ. ಐ.ಜಿ.ಪಿ. ಲಾಬು ರಾಮ್. ಸಂದೀಪ್ ಪಾಟೀಲ್. ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ. ಶಿವಾಂಶು ರಜಪೂತ್. ಡಿವೈಎಸ್ಪಿ .ವಿ. ಲಕ್ಷ್ಮಯ್ಯ ತಹಶೀಲ್ದಾರ. ಎಚ್. ಜೆ. ಭರತ್. ಬಂಗಾರಪೇಟೆ ತಹಶೀಲ್ದಾರ್. ಸುಜಾತಾ. ಕೆಡಿಎ. ಆಯುಕ್ತರು. ಧರ್ಮೇಂದ್ರ. ಹಾಗೂ ಪೊಲೀಸ್ ಇಲಾಖೆ ಎಲ್ಲಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456