ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಶ್ರೀನಿವಾಸನ್ ಅಧಿಕಾರ ಸ್ವೀಕರಿಸಿದರು
ಕೆಜಿಎಫ್: ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಜಯಂತಿ ಶ್ರೀನಿವಾಸನ್ ಅಧಿಕಾರವಹಿಸಿಕೊಂಡರು. ಸಮಾರಂಭದಲ್ಲಿ ಪಾಲ್ಗೊಂಡ ಶಾಸಕಿ. ರೂಪಕಲಾ ಶಶಿಧರ್ ಮಾತನಾಡಿ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಯಾರೇ ಇರಲಿ ಅವರಿಗೆ ಗೌರವ ದೊರೆಯುತ್ತದೆ ಅದಕ್ಕೆ ಉದಾಹರಣೆ ನಮ್ಮ ಶ್ರೀನಿವಾಸನ್. ಕೂಡ ಅಧ್ಯಕ್ಷರಾಗಿ ನಗರ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಮುಂದಿನ ದಿನಗಳಲ್ಲಿ ನಗರದಲ್ಲಿರುವ ಬಡ ಜನತೆಗೆ ಸರ್ಕಾರಿ ಬೆಳೆಗೆ ನಿವೇಶನಗಳನ್ನು ನೀಡುವುದು. ಪ್ರತಿಯೊಂದು ಬಡಾವಣೆ ಅಭಿವೃದ್ಧಿ ಪಡಿಸುವುದು ಟೌನ್ ಶಿಪ್ ನಿರ್ಮಾಣದಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ನೂತನ ಅಧ್ಯಕ್ಷರು. ಶ್ರೀನಿವಾಸನ್ ಮಾತನಾಡಿ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಪ್ರಮುಖವಾಗಿ ನಮ್ಮ ಶಾಸಕಿ ರೂಪಕಲಾ ಶಶಿಧರ್. ಮುಖಂಡರಾದ ಬ್ಯಾಲಹಳ್ಳಿ ಗೋವಿಂದ ಗೌಡ ಅವರ ಆಶೀರ್ವಾದ ನನಗೆ ಯಾವಾಗಲೂ ಇರುತ್ತದೆ. ನನ್ನ ಮೇಲೆ ಇರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ನಾನು ಯಾವುದೇ ಒಂದು ಅಭಿವೃದ್ಧಿಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡರೆ ಶಾಸಕರ ಸಲಹೆಯನ್ನು ಪಡೆದುಕೊಳ್ಳುತ್ತೇನೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆಡಿ ಎ.ಆಯುಕ್ತರು. ಧರ್ಮೇಂದ್ರ. ಕಾಂಗ್ರೆಸ್ನ ಮುಖಂಡರಾದ ಅಮು ಲಕ್ಷ್ಮಿ ನಾರಾಯಣ್ ಮಾಣಿಕ್ಂ. ಮೊದಲಮುತ್ತು. ಪದ್ಮನಾಭ ರೆಡ್ಡಿ. ಮೋಹನ್ ರಾಜ್. ಹಲವಾರು ಮುಖಂಡರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
