ಕೆಜಿಎಫ್ ನಲ್ಲಿ ಯಾದವ ಸಮುದಾಯದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿ ಆಚರಣೆ
ಕೆಜಿಎಫ್: ನಗರದ ರೆಡ್ಡಿ ಕಲ್ಯಾಣ ಮಂಟಪದಲ್ಲಿ ತಾಲೂಕು ಯಾದವ ಸಮುದಾಯದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಮಾನ್ಯ ಶಾಸಕರು ರೂಪಕಲಾ ಶಶಿಧರ್. ನೆರವೇರಿಸಿದರು. ನಂತರ ಮಾತನಾಡಿದ ಅವರು. ಶ್ರೀಕೃಷ್ಣ ಪರಮಾತ್ಮನು ಧರ್ಮ ಅನ್ನೋ ರಕ್ಷಣೆ ಮಾಡುವುದು ಹಾಗೂ ನ್ಯಾಯದ ಪರವಾಗಿ ನಿಲ್ಲುತ್ತಾರೆ. ಅವರು ಎಂದಿಗೂ ಅಧರ್ಮವನ್ನು ಸಹಿಸುವುದಿಲ್ಲ. ಅವರ ತತ್ವ ಸಿದ್ಧಾಂತಗಳನ್ನು ನಾವು ಸಹ ಜೀವನದಲ್ಲೇ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ನಾವು ಮನೆಯಲ್ಲಿ ಗೋವುಗಳನ್ನು ಆ ಕುಟುಂಬಕ್ಕೆ ಯಾವುದೇ ಕಷ್ಟಗಳು ಬರುವುದಿಲ್ಲ. ಅದಕ್ಕೆ ಕಾರಣ ಗೋವುಗಳು. ನಮಗೆ ಬರುವ ಕಷ್ಟಗಳನ್ನು ಅವುಗಳು ತಡೆಯುತ್ತದೆ. ಅದಕ್ಕೆ ನಾವು ಗೋವುಗಳನ್ನು ಪೂಜಿಸುವುದುಶ್ರೀ ಕೃಷ್ಣ ಪರಮಾತ್ಮನು ಹಲವಾರು ಕಷ್ಟಗಳನ್ನು ಅನುಭವಿಸಿದ್ದಾರೆ. ಆದರೂ ಸಹ ಅವರು ಧರ್ಮ ಮತ್ತು ನ್ಯಾಯದ ಪರವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಈಗಿನ ಕಾಲದಲ್ಲಿ ನಾವು ಸಹ ಯಾವುದೇ ಕಷ್ಟಗಳು ಬಂದಾಗ ಜೀವನದಲ್ಲಿ ಮೆಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ ಅತಿ ಹೆಚ್ಚಾಗಿ ಉತ್ತರ ಭಾರತ ಭಾಗದಲ್ಲಿ ಕೃಷ್ಣ ಜಯಂತಿ ಆಚರಣೆ ಮಾಡುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲಿ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರುವುದು ನನಗೆ ಸಂತೋಷವಾಗಿದೆ ಎಂದರು ಕಾರ್ಯಕ್ರಮದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.ತಾಲೂಕು ಯಾದವ್ ಸಂಘದ ಅಧ್ಯಕ್ಷರು. ಉಮೇಶ್ ಯಾದವ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಕೃಷ್ಣ ಜಯಂತಿ ಅದ್ದರಿಯಾಗಿ ನಡೆಯುತ್ತಿದೆ. ಇದಕ್ಕೆ ಸಹಕರಿಸಿದ ಎಲ್ಲಾ ನಮ್ಮ ಸಮುದಾಯದ ಹಿರಿಯ ಮುಖಂಡರಿಗೆ ಧನ್ಯವಾದಗಳು. ಇದು ಹೀಗೆ ಮುಂದುವರಿಯಬೇಕೆಂದು ಕೋರಿದರು. ಇದೇ ಸಂದರ್ಭದಲ್ಲಿ ಶಾಸಕಿ ರೂಪಕಲಾ ಶಶಿಧರ್ ರವರಿಗೆ ನಮ್ಮ ಸಮುದಾಯಕ್ಕೆ ಭವನ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಲು ಕೋರಿದರು.ಯಾದವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು .ತಾಲೂಕಿನ ಎಲ್ಲಾ ಗ್ರಾಮಗಳಿಂದ ಸುಮಾರು ಯಾದವ ಸಮುದಾಯದ ವತಿಯಿಂದ 10 ಹೆಚ್ಚು ಶ್ರೀ ಕೃಷ್ಣ ದೇವರ ಪಲ್ಲಕ್ಕಿಗಳ ಆಗಮಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚಾರ ಮಾಡಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರು ಯಾದವ ಸಂಘದ ತಾಲೂಕು ಗೌರವಾಧ್ಯಕ್ಷರು ಗುರು ಸಾಲು ಶ್ರೀನಿವಾಸಲು . ಆಮು. ಲಕ್ಷ್ಮೀನಾರಾಯಣ. ಪದ್ಮನಾಭ ರೆಡ್ಡಿ. ಮಾಲತಿ ರಾಧಾಕೃಷ್ಣ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು. ಎಲ್.ಎನ್. ನರಸಿಂಹಮೂರ್ತಿ. ಡಾಕ್ಟರ್. ಹರೀಶ್. ಚಿನ್ನಪ್ಪನಾಯ್ಡು. ನಗರಸಭೆ ಸದಸ್ಯರು ಶಕ್ತಿವೇಲ್. ಕರುಣಾಕರನ್. ಹಲವಾರು ಮುಖಂಡರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
