ಕೆಜಿಎಫ್ ಮಹಾಬೋಧಿ ಸೊಸೈಟಿಯಲ್ಲಿ ವೈಭವದಿಂದ ಬುದ್ಧ ಜಯಂತಿ ಆಚರಣೆ
ಕೆಜಿಎಫ್: ನಗರದ ಗೌತಮ ನಗರದಲ್ಲಿರುವ ಬುದ್ಧ ವಿಹಾರದಲ್ಲಿ ಮಹಾಬೋಧಿ ಅಶೋಕ ಧಮ್ಮ ದೂತ ಬುದ್ಧ ಸೊಸೈಟಿಯಲ್ಲಿ ಬುದ್ಧ ಜಯಂತಿಯನ್ನು ಸಂಭ್ರಮ ಸಡಗರದಿಂದ ಸೋಮವಾರ ಬೆಳಿಗ್ಗೆ ಆಚರಿಸಲಾಯಿತು. 95 ವರ್ಷದ ಉಪಾಸಕ ಅರ್ಜುನ್ ಅವರಿಂದ ಬೆಳಿಗ್ಗೆ 9 ಗಂಟೆಗೆ ವಿಶ್ವ ಶಾಂತಿ ಮತ್ತು ಸಂತೋಷಕ್ಕಾಗಿ ಬುದ್ಧ ಧ್ವಜಾರೋಹಣ ಮಾಡಿ ಬುದ್ಧ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಂತರ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಾನಿಕ ಭಿಕ್ಕು ಖೇಮಿಂಡೋ ಬಂತೇಜಿ ನೇತೃತ್ವದಲ್ಲಿ ಬೋಧಿ ಪೂಜೆಯನ್ನು ನೆರವೇರಿಸಲಾಯಿತು. ಗಂಗಾಧರಯ್ಯ ಸ್ಮಾರಕ ಧ್ಯಾನ ಮಂದಿರದಲ್ಲಿ ಬುದ್ಧ ಪೂಜೆ ಮಾಡಲಾಯಿತು. ಉಪಾಸಕ ಮತ್ತು ಉಪಾಸಕಿಯರಿಗೆ ತಿಸರಣ, ಪಂಚಶೀಲ ಬೋಧಿಸಲಾಯಿತು. ನಂತರ ಧಮ್ಮೋಪದೇಶವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಾಸಕರಾದ ಪ್ರತಾಪ್, ಗೌತಮ್, ಪ್ರಭುರಾಮ್, ಬೆಮೆಲ್ ಜಯಪ್ರಕಾಶ್, ಮಾದಿವಣ್ಣನ್ ದಂಪತಿಗಳು ಜಯಪ್ರಕಾಶ್ ದಂಪತಿಗಳು, ಬೌದ್ಧ ಬಿಕ್ಕುಗಳು ಹಾಗೂ ನೂರಾರು ಉಪಾಸಕ ಉಪಾಸಕಿಯರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
