ಕೆಜಿಎಫ್ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರು ಸಾಲು ಶ್ರೀನಿವಾಸಲು ನಾಮಪತ್ರ ಸಲ್ಲಿಕೆ

Nov 26, 2025 - 17:14
 0  5
ಕೆಜಿಎಫ್ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರು ಸಾಲು ಶ್ರೀನಿವಾಸಲು ನಾಮಪತ್ರ ಸಲ್ಲಿಕೆ

  ಕೆಜಿಎಫ್: ನಗರದ ನ್ಯಾಯಾಲಯದ ಆವರಣದಲ್ಲಿ ಹಿರಿಯ ವಕೀಲರು ಗುರು ಸಾಲು ಶ್ರೀನಿವಾಸಲು ಅವರ ಅಪಾರ ಬೆಂಬಲಿಗರಿಂದ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ವಕೀಲರ ಎಲ್ಲಾ ಸಮಸ್ಯೆಗಳು ಸ್ಪಂದಿಸುತ್ತೇನೆ. ಪ್ರಮುಖವಾಗಿ ಮಹಿಳಾ ವಕೀಲರಿಗೆ ಆದ್ಯತೆ ನೀಡುತ್ತೇನೆ. ವಕೀಲರ ಲೇಔಟ್ ನಿರ್ಮಾಣ ಮಾಡಿ ಎಲ್ಲಾ ವಕೀಲರಿಗೆ ನಿವೇಶನ ವಿತರಣೆ ಮಾಡುವುದು ವಕೀಲರಿಗೆ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ.

ಹಿಂದೆ ಇದ್ದ ಅಧ್ಯಕ್ಷರು ಏನು ಮಾಡುತ್ತಾರೆ ಎಂದು ನಾವು ಪ್ರಶ್ನೆ ಮಾಡುವುದಿಲ್ಲ ಅದು ಎಲ್ಲರಿಗೂ ತಿಳಿದಿದೆ ಇನ್ನು ಮುಂದೆ ಏನು ನಡೆಯಬೇಕು ಅದು ನಡೆಯುತ್ತದೆ ಎಂದರು.

 ಹಿರಿಯ ವಕೀಲರು ಕೆ. ಸಿ. ನಾಗರಾಜ್. ಮಾತನಾಡಿ ನಮ್ಮ ಸಿಂಡಿಕೇಟ್ ಜಯಭೇರಿ ಬಾರಿಸಿದರೆ ನಾವು ಯುವ ವಕೀಲರಿಗೆ ಮೊದಲ ಆದ್ಯತೆ ನೀಡುವುದು. ಹಲವಾರು ಸಮಸ್ಯೆಗಳಿದ್ದು, ಮಹಿಳೆಯರಿಗೆ ಶೌಚಾಲಯ. ವಿಶ್ರಾಂತಿ ಕಟ್ಟಡ. ಕ್ಯಾಂಟೀನ್ ಸೌಲಭ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಇದು ನಮ್ಮ ಮೊದಲ ಆದ್ಯತೆ ಎಂದರು.

ಹಿರಿಯ ವಕೀಲರು ಜ್ಯೋತಿ ಬಾಸು ಮಾತನಾಡಿ ಕೆಜಿಎಫ್ ನ್ಯಾಯಾಲಯಕ್ಕೆ 125 ವರ್ಷದ ಇತಿಹಾಸ ಇದೆ ಇದನ್ನು ನಾವು ತಿಳಿದುಕೊಳ್ಳಬೇಕು. ಈಗ ಯುವ ವಕೀಲರು  50ಕ್ಕೂ ಹೆಚ್ಚು ಮಂದಿ ಇದ್ದಾರೆ. ನಮ್ಮ ಸಿಂಡಿಕೇಟ್ ನಲ್ಲಿ 11 ಜನರಲ್ಲಿ ಯುವಕರೇ ಹೆಚ್ಚು ಇದ್ದಾರೆ. ಕರ್ನಾಟಕ ರಾಜ್ಯ ವಕೀಲರ ಸಂಘದ ನಿರ್ದೇಶನದಂತೆ ಎರಡು ವರ್ಷಕ್ಕೆ ಒಂದು ಬಾರಿ ಚುನಾವಣೆ ನಡೆಯಬೇಕು. ಆದರೆ ಈಗ ಐದು ವರ್ಷ ಆಗಿದೆ ಇನ್ನು ಹಾಗೆ ಇದ್ದರೆ ಸರಿ ಇರಲ್ಲ ನಮ್ಮ ಗುರಿ ಒಂದೇ ಎಲ್ಲಾ ಕಟ್ಟ ಕಡೆಯ ಬಡವರಿಗೂ ನ್ಯಾಯ ಒದಗಿಸಿ ಕೊಡಬೇಕು. ನ್ಯಾಯಾಲಯದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ತರಬೇತಿಗೆ ಬರುವ ವಕೀಲರಿಗೆ ಭದ್ರತೆ ನೀಡಬೇಕು ಭದ್ರತೆಯನ್ನು ಕಾಪಾಡೋ ಕೆಲಸವನ್ನು ನಾವು ಮಾಡುತ್ತೇವೆ. ನಮ್ಮ ಸಿಂಡಿಕೇಟ್ ಗೆ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕು. 160 ಜನ ಮತದಾರರಿಗೆ ನನ್ನ ಮನವಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಕೀಲರು. ಶಿವಪ್ಪ. ಹಲವಾರು ಹಿರಿಯ ಹಾಗೂ ಕಿರಿಯ ವಕೀಲರು ಭಾಗವಹಿಸಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456